Asianet Suvarna News Asianet Suvarna News

ಕನ್ನಡ ರಾಜ್ಯೋತ್ಸವದಂದು ಬೆಳ್ತಂಗಡಿಯಲ್ಲಿ ತುಳು ಧ್ವಜ ಹಾರಾಟ

ಬೆಳ್ತಂಗಡಿಯಲ್ಲಿ ತುಳು ಧ್ವಜ ಹಾರಾಟ| ಕರ್ನಾಟಕ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಕನ್ನಡ ಧ್ವಜಕಟ್ಟೆಯಲ್ಲಿ ತುಳು ಧ್ವಜ ಹಾರಾಟ|ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಗೇಟ್‌ ಮುಂಭಾಗವೂ ತುಳುನಾಡ ಧ್ವಜ|

Tulunadu Flag Hoist in Belthangady In Dakshina Kannada District
Author
Bengaluru, First Published Nov 2, 2019, 10:12 AM IST

ಬೆಳ್ತಂಗಡಿ(ನ.2]: ತುಳುನಾಡ ಧ್ವಜ ಎಂದು ಹೇಳಲಾಗುತ್ತಿರುವ ಬಾವುಟವೊಂದನ್ನು ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭ ಹಾರಿಸಿರುವ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ವರದಿಯಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೆಳ್ತಂಗಡಿ ಬಸ್ ನಿಲ್ದಾಣದ ಮುಂಭಾಗವಿರುವ ಕರ್ನಾಟಕ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಕನ್ನಡ ಧ್ವಜಕಟ್ಟೆಯಲ್ಲಿ ನ.1 ರಂದು ಬೆಳ್ಳಂಬೆಳಗ್ಗೆ ತುಳುನಾಡ ಧ್ವಜ ಹಾರಿಸಿ ಕನ್ನಡಧ್ವಜವನ್ನು ಕೆಳಭಾಗದಲ್ಲಿ ಹಾರಿಸುವ ಕೃತ್ಯ ಎಸಗಲಾಗಿದೆ. ಶುಕ್ರವಾರ ಅಪರಾಹ್ನ 12ರ ವರೆಗೂ ಧ್ವಜಹಾರಾಡುತ್ತಿತ್ತು. ಮತ್ತೊಂದೆಡೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಗೇಟ್‌ ಮುಂಭಾಗವೂ ತುಳುನಾಡ ಧ್ವಜ ಕಟ್ಟಲಾಗಿತ್ತು. ಮಧ್ಯಾಹ್ನದ ಬಳಿಕ ಪೋಲಿಸರು ಬಂದು ಏರಿಸಿರುವ ಧ್ವಜವನ್ನು ತೆರವುಗೊಳಿಸಿದ್ದಾರೆ. ಈ ಹಿಂದೆಯೂ ತಾಲೂಕಿನಲ್ಲಿ ತುಳುನಾಡ ಸಂಘಟನೆಯೊಂದು ತುಳು ಧ್ವಜ ಹಾರಿಸಿದ ಸಂದರ್ಭದಲ್ಲಿ ಪೊಲೀಸರು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದ ಘಟನೆಯೂ ನಡೆದಿತ್ತು.

Follow Us:
Download App:
  • android
  • ios