Asianet Suvarna News Asianet Suvarna News

ಅಮಿತ್ ಶಾಗೆ ತಾಕತ್ತಿದ್ರೆ ಬಿಎಸ್‌ವೈಯನ್ನು ತೆಗೆದು ಬಿಸಾಡಲಿ: ಕಾಂಗ್ರೆಸ್ ನಾಯಕ

ಅಮಿತ್ ಶಾಗೆ ತಾಕತ್ತಿದ್ರೆ ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನು ತೆಗೆದು ಬಿಸಾಡಲಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಹೇಳಿದ್ದಾರೆ. ಮಂಗಳೂರಿನಲ್ಲಿ ಅವರು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 

if possible let amith shah kick bs yediyurappa out says Janardhana Poojary
Author
Bangalore, First Published Nov 5, 2019, 12:57 PM IST

ಮಂಗಳೂರು(ನ.05): ಅಮಿತ್ ಶಾಗೆ ತಾಕತ್ತಿದ್ರೆ ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನು ತೆಗೆದು ಬಿಸಾಡಲಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯಡಿಯೂರಪ್ಪ ಅಡಿಯೋ ಬಿಡುಗಡೆ ಪ್ರಕರಣ ಪ್ರತಿಕ್ರಿಯಿಸಿದ್ದಾರೆ. ಅಮಿತ್ ಶಾ ಒಬ್ಬ ‌ಒಳ್ಳೆಯ ತಲೆ ಇದ್ದ ಮನುಷ್ಯ ಯಡಿಯೂರಪ್ಪ ಬಳಿ ಅಮಿತ್ ಶಾ ಅವರೇ ಬೇಕಾದ್ದನ್ನು ಹೇಳಿಸಿದ್ದಾರೆ. ಇಲ್ಲ ಅಂತ ಆದರೆ ‌ಯಡಿಯೂರಪ್ಪರನ್ನ ತೆಗೆದು ಬಿಡಲಿ ಎಂದು ಸವಾಲೆಸೆದಿದ್ದಾರೆ.

ಹುಣಸೂರು ಉಪಚುನಾವಣೆ : ಯೋಗೇಶ್ವರ್‌ ಸ್ಪರ್ಧೆ ಖಚಿತ?

ಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷ, ಎಂಎಲ್ ಸಿ ಹರೀಶ್ ಕುಮಾರ್ ವಿರುದ್ದ ಕಿಡಿ ಕಾರಿದ ಜನಾರ್ದನ ‌ಪೂಜಾರಿ‌, ಮಂಗಳೂರು ಪಾಲಿಕೆ‌ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಮಾಡುವಾಗ ನನ್ನಲ್ಲಿ ಯಾರೂ ಕೇಳಿಲ್ಲ. ನನ್ನ ಸಲಹೆ ಸೂಚನೆ ಪಡೆದಿದ್ದೇನೆ ಎಂಬ ಜಿಲ್ಲಾಧ್ಯಕ್ಷರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ನನ್ನ ಬಳಿ ಯಾರೂ ಕೂಡ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರು ‌ನಾನು ಸತ್ತಿದ್ದೇನೆ ಎಂದು ಭಾವಿಸಿದ್ದಾರೆ. ಇದರಿಂದ ತುಂಬಾ ಬೇಸರವಾಗಿದೆ. ನನ್ನಲ್ಲಿ ಸಮಾಲೋಚನೆ ಮಾಡಿ ಅಂತ ನಾನು ಯಾರೂ ಬಳಿಯೂ ಹೇಳಿಲ್ಲ. ಆದ್ರೆ ಈ ಬಗ್ಗೆ ಸುಖಾಸುಮ್ಮನೆ ಸುಳ್ಳು ಹೇಳಬಾರದು. ಪೂಜಾರಿ ಬಳಿ ಸಮಾಲೋಚನೆ ಮಾಡಿದ್ದೇವೆ ಎಂಬ ಅಧ್ಯಕ್ಷರ ಹೇಳಿಕೆಯಿಂದ ನೋವಾಗಿದೆ ಎಂದಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಶಾಂತಿವನ ಅಸ್ತ್ರ...

ಇವತ್ತು ಸಂಜೆಯೊಳಗೆ ಈ ಬಗ್ಗೆ ಹೇಳಿಕೆ ‌ಕೊಡಬೇಕು, ಇಲ್ಲದೇ ಇದ್ದರೆ ಪೂಜಾರಿ ಖಂಡಿತಾ ಬಿಡಲ್ಲ. ಕಾಂಗ್ರೆಸ್ ನಮಗೆ ಸುಳ್ಳು ಹೇಳಲು ಕಲಿಸಿಲ್ಲ ಅನ್ನೋದನ್ನ ಅರ್ಥ ಮಾಡಿಕೊಳ್ಳಿ. ಪೂಜಾರಿ ಹೆಸರು ಹೇಳದೇ ಇದ್ರೆ ಅವರಿಗೆ ಗೆಲ್ಲಲು ಸಾಧ್ಯವಾಗಲ್ಲ. ಪೂಜಾರಿ ಸತ್ತು ಹೋಗಿದ್ದಾನೆ, ಹೀಗಾಗಿ ನಿಮ್ಮ ಶಕ್ತಿ ತೋರಿಸಿ ಗೆದ್ದು ತೋರಿಸಿ. ಪೂಜಾರಿ ಇಲ್ಲದೇ ಇದ್ದರೂ ಗೆಲ್ಲುವ ಶಕ್ತಿ ಇದೆ ಅಂತ ತೋರಿಸಿ ಕೊಡಿ ಎಂದು ಸವಾಲೆಸೆದಿದ್ದಾರೆ.

ಕ್ಷಮೆ ಕೇಳದೇ ಇದ್ದರೆ ನಾನಲ್ಲ, ಜನ ತೋರಿಸಿಕೊಡುತ್ತಾರೆ. ನಾನು ಯಾವುದೇ ಅಭ್ಯರ್ಥಿಯನ್ನ ಸೂಚಿಸಿಲ್ಲ, ಎಲ್ಲರಿಗೂ ಆಶೀರ್ವಾದ ಮಾಡಿದ್ದೇನೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ‌ಬರಲ್ಲ, ಬಿಜೆಪಿ‌ ಬರುತ್ತೆ. ಬಿಜೆಪಿಯವರು ಮನುಷ್ಯರಲ್ವಾ, ಅವರೇ ಈ ಬಾರಿ ‌ಬರ್ತಾರೆ. ಬಿಜೆಪಿ‌ ಬರಬೇಕು ಅಂತಾನೇ ಇವರೆಲ್ಲಾ ಹೀಗೆ ಮಾಡ್ತಿದಾರೆ ಎಂದು ಆರೋಪಿಸಿದ್ದಾರೆ.

‘ಬಿಎಸ್‌ವೈ ರಾಜಿನಾಮೆಗೆ ಒತ್ತಾಯ’

ಮೊಯಿದ್ದೀನ್ ಬಾವಾಗೆ ಹಲ್ಲೆ ಮಾಡಿದ ಘಟನೆಯಿಂದ ಎಲ್ಲರಿಗೂ ಸಮಾಧಾನ ಆಗಿದೆ ಅಂತ ಗೊತ್ತಾಯಿತು. ಆದ್ರೆ ಯಾರಿಗೂ ಹೊಡೆಯಬಾರದು, ಅದು ಮಾತ್ರ ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios