Asianet Suvarna News Asianet Suvarna News

ದೈವಾರಾಧನೆಗೆ ಅವಹೇಳನ: ಆಯುಕ್ತರಿಗೆ ದೂರು

ತುಳುನಾಡಿನ ಜನರ ಪ್ರಬಲ ನಂಬಿಕೆ, ಭಯ ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿರುವ ದೈವಾರಾಧನೆಯನ್ನು ಅವಹೇಳನ ಮಾಡುವಂತಹ ಪೋಸ್ಟ್‌ ಒಂದನ್ನು ‘ಟ್ರೋಲ್‌ ಹೂ ಟ್ರೋಲ್‌ ಕನ್ನಡಿಗ’ ಪೇಸ್ಬುಕ್‌ ಪುಟದಲ್ಲಿ ಹಾಕಿದ್ದು ಈ ಕುರಿತು ದೂರು ದಾಖಲಾಗಿದೆ.

 

case against facebook post humiliating tulu culture
Author
Bangalore, First Published Oct 23, 2019, 3:08 PM IST

ಮಂಗಳೂರು(ಅ.23): ತುಳುನಾಡಿನ ಜನರ ಪ್ರಬಲ ನಂಬಿಕೆ, ಭಯ ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿರುವ ದೈವಾರಾಧನೆಯನ್ನು ಅವಹೇಳನ ಮಾಡುವಂತಹ ಪೋಸ್ಟ್‌ ಒಂದನ್ನು ‘ಟ್ರೋಲ್‌ ಹೂ ಟ್ರೋಲ್‌ ಕನ್ನಡಿಗ’ ಪೇಸ್ಬುಕ್‌ ಪುಟದಲ್ಲಿ ಹಾಕಿದ್ದು ಈ ಕುರಿತು ದೂರು ದಾಖಲಾಗಿದೆ.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ ಅವರು ಈ ಪೋಸ್ಟ್‌ ಕುರಿತಾಗಿ ತಮ್ಮ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲದೇ ಈ ರೀತಿಯಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ವ್ಯಕ್ತಿಗಳು ಮತ್ತು ಫೇಸ್ಬುಕ್‌ ಪೇಜ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ಪೊಲೀಸ್‌ ಕಮಿಷನರ್‌ ಹರ್ಷ ಅವರಿಗೆ ಮನವಿಯನ್ನೂ ಸಹ ಮಾಡಿದ್ದಾರೆ.

ಚಾಕ್ ಪೀಸ್ ನಿಂದ ವರ್ಲ್ಡ್‌ಕಪ್ ಕಲಾಕೃತಿ: ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಗೆ ಕಾರ್ಕಳದ ಸುರೇಂದ್ರ

‘ಟ್ರೋಲ್‌ ಹೂ ಟ್ರೋಲ್‌ ಕನ್ನಡಿಗ’ ಎಂಬ ಫೇಸ್ಬುಕ್‌ ಪುಟದಲ್ಲಿ ಈ ಹಿಂದೆಯೂ ದೈವದೇವರನ್ನು ಅವಮಾನಿಸುವ ರೀತಿಯ ಪೋಸ್ಟ್‌ ಗಳನ್ನು ಹಾಕಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದೈವಾರಾಧನಾ ಚಾವಡಿ ಮತ್ತು ದಲಿತ ರಕ್ಷಣಾ ವೇದಿಕೆಯವರು ಮಂಗಳೂರು ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಯಲ್ಲಿ ದೂರೊಂದನ್ನೂ ಸಹ ಸಲ್ಲಿಸಿದ್ದರು.

ಮಂಗಳೂರು: ಎಲ್ಲ ಅಂಚೆ ಕಚೇರಿ ವಿವರ ಗೂಗಲ್ ಮ್ಯಾಪ್‌ನಲ್ಲಿ..!

Follow Us:
Download App:
  • android
  • ios