Asianet Suvarna News Asianet Suvarna News

ಮಸಾಜ್ ಸೆಂಟರ್ ಪ್ರಕರಣ: ವಾರದೊಳಗೆ ಸಾಧು ಕೋಕಿಲಾ ಅರ್ಜಿಗೆ ಉತ್ತರಿಸಲು ಕೋರ್ಟ್ ಸೂಚನೆ

ಸಾಧು ಕೋಕಿಲಾ ಮೇಲೆ ಮಸಾಜ್ ಪಾರ್ಲರ್ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ | ಮೈಸೂರಿನ‌ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು | ಸಾಧು ಕೋಕಿಲ ಪರ ಹಿರಿಯ ವಕೀಲ ಚಂದ್ರಮೌಳಿ ವಾದ ಮಂಡನೆ

Sadhu Kokila Massage centre case HC seeks submit witness within a week
Author
Bengaluru, First Published Oct 23, 2019, 12:46 PM IST

ಮೈಸೂರು (ಅ. 23): ಮಸಾಜ್ ಸೆಂಟರ್ ನಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಗೆ ಕಿರುಕುಳ ನೀಡಿದ ಆರೋಪ ಹೊತ್ತಿರುವ ನಟ ಸಾಧು ಕೋಕಿಲಾ ಚಾರ್ಜ್ ಶೀಟ್ ರದ್ದುಗೊಳಿಸಬೇಕು ಎಂದು ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಿದೆ.

'ಆಪರೇಷನ್ ಅಲಮೇಲಮ್ಮ' ನಟನಿಗೆ ಕಂಕಣ ಭಾಗ್ಯ, ನ 10 ಕ್ಕೆ ವಿವಾಹ

ಸಾಧು ಕೋಕಿಲ ಪರ ಹಿರಿಯ ವಕೀಲ ಚಂದ್ರಮೌಳಿ ವಾದ ಮಂಡಿಸಿದ್ದಾರೆ.  ಸಾಧು ಕೋಕಿಲ ವಿರುದ್ಧದ ಸಾಕ್ಷಿಗಳಲ್ಲಿ  ಎಲ್ಲ ಸಾಕ್ಷಿಗಳೂ ಸಹ ಸಾಧು ಕೋಕಿಲ ಪಾರ್ಲರ್‌ಗೆ ಬಂದಿರಲಿಲ್ಲ ಎಂದು ಸಾಕ್ಷಿ ನುಡಿದಿದ್ದಾರೆ. ಪ್ರಕರಣ ಮುಂದುವರೆದಲ್ಲಿ ಸಾಧು ತೇಜೋವಧೆ ಆಗಲಿದೆ. ಪೊಲೀಸರು ಕಾನೂನಿನಡಿಯಲ್ಲಿ ತನಿಖೆ ನಡೆಸಿಲ್ಲ.  ನಾನು ಅಲ್ಲಿಗೆ ಹೋಗಿಯೇ ಇಲ್ಲ ಎಂದ ಮೇಲೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.  ಪ್ರಕರಣದ‌ ವಿಚಾರಣೆ ಮುಂದುವರೆದರೆ, ಮಾನಸಿಕ ಹಿಂಸೆ ಆಗುವುದು ಖಂಡಿತ. ಈ ಹಿನ್ನೆಲೆ ಚಾರ್ಜ್‌ಶೀಟ್ ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದ್ದಾರೆ. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರಕ್ಕೆ ನೊಟೀಸ್ ಜಾರಿಗೊಳಿಸಿದೆ.   ಒಂದು ವಾರದೊಳಗೆ ಪ್ರಕರಣ ಸಂಬಂಧ ಉತ್ತರ ನೀಡಲು ಸೂಚನೆ ನೀಡಿದೆ.  ಸಾಧು ಕೋಕಿಲ ವಿರುದ್ಧ ಸಂಗ್ರಹಿಸಿರುವ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಎಂದು ಆದೇಶಿಸಿದೆ. 

ರಕ್ಷಿತ್ ಶೆಟ್ಟಿ VS ರಶ್ಮಿಕಾ ಮಂದಣ್ಣ ಒಂದೇ ದಿನ ಧಮಾಕಾ!

ಏನಿದು ಪ್ರಕರಣದ ಹಿನ್ನೆಲೆ?

ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದ್ದ ಮಸಾಜ್ ಪಾರ್ಲರ್ ವೊಂದಕ್ಕೆ ಸಾಧು ಕೋಕಿಲಾ ಹೋಗುತ್ತಾರೆ.  ಮಸಾಜ್ ಪಾರ್ಲರ್ ಮಹಿಳೆ ಮೇಲೆ  ಅತ್ಯಾಚಾರಕ್ಕೆ ಯತ್ನಿಸುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ಸಾಧು ಕೋಕಿಲಾ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆ. ಆದ್ದರಿಂದ ಪ್ರಕರಣದ ದೋಷಾರೋಪಣ ಪಟ್ಟಿಯನ್ನು ರದ್ದು ಕೋರಿ ಸಾಧು ಕೋಕಿಲಾ ಅರ್ಜಿ ಸಲ್ಲಿಸಿದ್ದರು

Follow Us:
Download App:
  • android
  • ios