Asianet Suvarna News Asianet Suvarna News

ಪಂಜಾಬ್‌ನಲ್ಲಿ ಡ್ರಗ್ ಇನ್ಸಪೆಕ್ಟರ್ ಹತ್ಯೆ: ಆತ್ಮಹತ್ಯೆಗೆ ಯತ್ನಿಸಿದ ಆರೋಪಿ ಸೆರೆ!

ಕಚೇರಿಯಲ್ಲೇ ಗುಂಡು ಹಾರಿಸಿ ಡ್ರಗ್ ಇನ್ಸಪೆಕ್ಟರ್ ಹತ್ಯೆ| ಡ್ರಗ್ ಅಂಡ್ ಫುಡ್ ಕೆಮಿಕಲ್ ಲ್ಯಾಬೊರೇಟರಿ ಇನ್ಸಪೆಕ್ಟರ್ ಕಗ್ಗೊಲೆ| ಕಚೇರಿಗೆ ನುಗ್ಗಿ ನೇಹಾ ಶೋರಿ ಹತ್ಯೆಗೈದ ಯುವಕ| ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಬಂಧಿಸಿದ ಪೊಲೀಸರು| ಇನ್ಸಪೆಕ್ಟರ್ ಹತ್ಯೆಗೆ ಧಿಗ್ಭ್ರಮೆ ವ್ಯಕ್ತಪಡಿಸಿದ ಸಿಎಂ ಅಮರೀಂದರ್ ಸಿಂಗ್|

Drug Inspector Shot Dead In Punjab
Author
Bengaluru, First Published Mar 30, 2019, 4:50 PM IST

ಚಂಡೀಗಡ್(ಮಾ.30): ಡ್ರಗ್ ಅಂಡ್ ಫುಡ್ ಕೆಮಿಕಲ್ ಲ್ಯಾಬೊರೇಟರಿ ಇನ್ಸಪೆಕ್ಟರ್ ಓರ್ವರನ್ನು ಯುವಕನೋರ್ವ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ಪಂಜಾಬ್‌ನ ಖರಾರ್‌ನಲ್ಲಿ ನಡೆದಿದೆ.

ಡ್ರಗ್ ಅಂಡ್ ಫುಡ್ ಕೆಮಿಕಲ್ ಲ್ಯಾಬೊರೇಟರಿಯಲ್ಲಿ ಇನ್ಸಪೆಕ್ಟರ್ ಆಗಿದ್ದ ನೇಹಾ ಶೋರಿ ಅವರನ್ನು ಯುವಕನೋರ್ವ ಆಕೆಯ ಕಚೇರಿಯಲ್ಲೇ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.

ನೇಹಾ ಶೋರಿ ಮೇಲೆ ಎರಡು ಗುಂಡು ಹಾರಿಸಿದ ಯುವಕ, ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಆತನನ್ನು ಹಿಡಿಯುವಲ್ಲಿ ಸಫಲರಾದಾಗ ಗುಂಡು ಹಾರಿಸಿಕೊಂಡು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆದರೆ ಕೂಡಲೇ ಆರೋಪಿಯಿಂದ ಪಿಸ್ತೂಲು ಕಸಿದುಕೊಂಡ ಪೊಲೀಸರು, ಆತನನ್ನು ಜೀವಂತ ಸೆರೆಹಿಡಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೊಲೆಗೆ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ನೇಹಾ ಶೋರಿ ಹತ್ಯೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಸಿಎಂ ಅಮರೀಂದರ್ ಸಿಂಗ್, ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

   

Follow Us:
Download App:
  • android
  • ios