Asianet Suvarna News Asianet Suvarna News

ಸ್ಟೀವ್ಹಾ, ರಿಚರ್ಡ್ಸ್, ಪಾಂಟಿಂಗ್; ದಿಗ್ಗಜರ ಸಾಲಿನಲ್ಲಿ ನಾಯಕ ಕೊಹ್ಲಿ!

ಸೌತ್ ಆಫ್ರಿಕಾ ವಿರುದ್ದದ ಪುಣೆ ಟೆಸ್ಟ್ ಪಂದ್ಯ ಗೆದ್ದ ನಾಯಕ ವಿರಾಟ್ ಕೊಹ್ಲಿ, ದಿಗ್ಗಜರ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಭಾರತದ ಮಾಜಿ ನಾಯಕನ ದಾಖಲೆಯನ್ನು ಸರಿಗಟ್ಟಿದ್ದಾರೆ. ಪುಣೆ ಗೆಲುವಿನ ಬಳಿಕ ಕೊಹ್ಲಿ ದಾಖಲೆಗಳು ಇಲ್ಲಿವೆ.

virat kohli joins  Steve Waugh Viv Richards elite list after pune test win
Author
Bengaluru, First Published Oct 13, 2019, 4:07 PM IST

ಪುಣೆ(ಅ.13): ಟೆಸ್ಟ್ ಮಾದರಿಯಲ್ಲಿ ನಂಬರ್ 1 ತಂಡ ಭಾರತ ತನ್ನ  ಚಾಂಪಿಯನ್ ಆಟ ಮುಂದುವರಿಸಿದೆ. ಸೌತ್ ಆಫ್ರಿಕಾ ವಿರುದ್ದದ ಆರಂಭಿಕ 2 ಟೆಸ್ಟ್ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡಿದೆ.  ಪುಣೆ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ ನಾಯಕ ವಿರಾಟ್ ಕೊಹ್ಲಿ ದಿಗ್ಗಜ ನಾಯಕರ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: INDvSA;ಭಾರತಕ್ಕೆ ಇನಿಂಗ್ಸ್ ಹಾಗೂ 137 ರನ್ ಗೆಲುವು; ಸರಣಿ ಕೈವಶ!

ಆರಂಭಿಕ 50 ಪಂದ್ಯದಲ್ಲಿ ಗರಿಷ್ಠ ಗೆಲುವು ಸಾಧಿಸಿದ ವಿಶ್ವದ ನಾಯಕರ ಪೈಕಿ ವಿರಾಟ್ ಕೊಹ್ಲಿ 3ನೇ ಸ್ಥಾನ ಪಡೆದಿದ್ದಾರೆ. ಕೊಹ್ಲಿ ನಾಯಕನಾಗಿ 50 ಟೆಸ್ಟ್ ಪಂದ್ಯ ಆಡಿದ್ದರು. 50 ಪಂದ್ಯದಲ್ಲಿ ಕೊಹ್ಲಿ 30 ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ಪುಣೆ ಟೆಸ್ಟ್ ಗೆಲುವು; ಆಸ್ಟ್ರೇಲಿಯಾ ದಾಖಲೆ ಮುರಿದ ಕೊಹ್ಲಿ ಸೈನ್ಯ!

ಟೆಸ್ಟ್ ನಾಯಕನಾಗಿ ಆರಂಭಿಕ 50 ಪಂದ್ಯದಲ್ಲಿ ಗರಿಷ್ಠ ಗೆಲುವು
ಸ್ಟೀವ್ ವ್ಹಾ(ಆಸ್ಟ್ರೇಲಿಯಾ) 37 ಗೆಲುವು
ರಿಕಿ ಪಾಂಟಿಂಗ್(ಆಸ್ಟ್ರೇಲಿಯಾ) 35 ಗೆಲುವು
ವಿರಾಟ್ ಕೊಹ್ಲಿ(ಆಸ್ಟ್ರೇಲಿಯಾ) 30 ಗೆಲುವು
ವೀವ್ ರಿಚರ್ಡ್ಸ(ವೆಸ್ಟ್ ಇಂಡೀಸ್) 27 ಗೆಲುವು

ಇದನ್ನೂ ಓದಿ: 22ನೇ ವಸಂತಕ್ಕೆ ಕಾಲಿಟ್ಟ ಸಾರಾ ತೆಂಡುಲ್ಕರ್, ಸಚಿನ್ ಪುತ್ರಿ ಬ್ಯೂಟಿಗೆ ಬಾಲಿವುಡ್ ಬೋಲ್ಡ್!

ಪುಣೆ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 137 ರನ್ ಗೆಲುವು ಸಾಧಿಸಿತು. ಕೊಹ್ಲಿ ನಾಯಕತ್ವದಲ್ಲಿ ಭಾರತ 8 ಬಾರಿ ಇನಿಂಗ್ಸ್ ಗೆಲುವು ಸಾಧಿಸಿತು. ಈ ಮೂಲಕ ಕೊಹ್ಲಿ, ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ದಾಖಲೆ ಸರಿಗಟ್ಟಿತು. ಅಜರ್ 8 ಬಾರಿ ಇನಿಂಗ್ಸ್ ಗೆಲುವು ದಾಖಲಿಸಿದ ಸಾಧನೆ ಮಾಡಿದ್ದಾರೆ. 9 ಬಾರಿ ಇನಿಂಗ್ಸ್ ಹಾಗೂ ಗೆಲುವು ಸಾಧಿಸಿದ ನಾಯಕ ಎಂ.ಎಸ್.ಧೋನಿ ಮೊದಲ ಸ್ಥಾನದಲ್ಲಿದ್ದಾರೆ. 

Follow Us:
Download App:
  • android
  • ios