Asianet Suvarna News Asianet Suvarna News

ವಿಜಯ್‌ ಹಜಾರೆ ಸೆಮೀ​ಸ್‌: ಕರ್ನಾ​ಟ​ಕ-ಛತ್ತೀಸ್‌ಗಢ ಫೈಟ್

ಮಳೆಯಾಟಕ್ಕೆ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ರದ್ದಾಗಿದೆ. ಗ್ರೂಪ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಛತ್ತೀಸ್‌ಗಢ ಹಾಗೂ ತಮಿಳುನಾಡು ತಂಡಗಳು ಅಂತಿಮ ನಾಲ್ಕರಘಟ್ಟ ಪ್ರವೇಶಿಸಿವೆ. ಇದೀಗ ಫೈನಲ್’ಗಾಗಿ ಕರ್ನಾಟಕ ಹಾಗೂ ಛತ್ತೀಸ್‌ಗಢ ತಂಡಗಳು ಕಾದಾಡಲಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Vijay Hazare Trophy 2019 Karnataka Chhattisgarh fight for Final Ticket
Author
Bengaluru, First Published Oct 22, 2019, 11:42 AM IST

ಬೆಂಗ​ಳೂ​ರು[ಅ.22]: ಭಾರೀ ಮಳೆ ಕಾರಣ ಸೋಮ​ವಾರ ನಡೆದ ವಿಜಯ್‌ ಹಜಾರೆ ರಾಷ್ಟ್ರೀಯ ಏಕ​ದಿನ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯ​ಗಳು ಫಲಿ​ತಾಂಶ ಕಾಣದೆ ಮುಕ್ತಾ​ಯ​ಗೊಂಡವು. ಮುಂಬೈ ತಂಡ​ವನ್ನು ಹಿಂದಿಕ್ಕಿ ಛತ್ತೀಸ್‌ಗಢ, ಪಂಜಾಬ್‌ ತಂಡ​ವನ್ನು ಹಿಂದಿ​ಕ್ಕಿ ತಮಿ​ಳು​ನಾಡು ಸೆಮಿ​ಫೈ​ನಲ್‌ ಪ್ರವೇ​ಶಿ​ಸಿ​ದವು.

ಬುಧ​ವಾರ ಇಲ್ಲಿನ ಚಿನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ನಡೆ​ಯ​ಲಿ​ರುವ ಮೊದಲ ಸೆಮಿ​ಫೈ​ನಲ್‌ನಲ್ಲಿ ಆತಿ​ಥೇಯ ಕರ್ನಾ​ಟಕ ತಂಡಕ್ಕೆ ಛತ್ತೀಸ್‌ಗಢ ಎದು​ರಾ​ಗ​ಲಿದ್ದು, ಅಂದೇ ಮತ್ತೊಂದು ಮೈದಾ​ನ​ದಲ್ಲಿ ನಡೆ​ಯ​ಲಿ​ರುವ 2ನೇ ಸೆಮಿ​ಫೈ​ನಲ್‌ನಲ್ಲಿ ಗುಜ​ರಾತ್‌ ಹಾಗೂ ತಮಿ​ಳು​ನಾಡು ತಂಡ​ಗಳು ಎದು​ರಾ​ಗ​ಲಿ​ವೆ.

ವಿಜಯ್‌ ಹಜಾರೆ ಟ್ರೋಫಿ 2019: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

ಛತ್ತೀಸ್‌ಗಢ ಹಾಗೂ ಮುಂಬೈ ನಡು​ವಿನ ಪಂದ್ಯ​ದಲ್ಲಿ ಮೊದಲು ಬ್ಯಾಟ್‌ ಮಾಡಿದ ಛತ್ತೀಸ್‌ಗಢ 45.4 ಓವ​ರಲ್ಲಿ 6 ವಿಕೆಟ್‌ಗೆ 190 ರನ್‌ ಗಳಿ​ಸಿತ್ತು. ಮುಂಬೈಗೆ 39 ಓವರ್‌ಗಳಲ್ಲಿ 195 ರನ್‌ ಗುರಿ ನೀಡ​ಲಾ​ಗಿತ್ತು. 11.3 ಓವರಲ್ಲಿ ವಿಕೆಟ್‌ ನಷ್ಟ​ವಿ​ಲ್ಲದೆ 95 ರನ್‌ ಗಳಿ​ಸಿ ಗೆಲು​ವಿ​ನತ್ತ ಮುನ್ನಡೆದಿದ್ದ ಮುಂಬೈಗೆ ಮಳೆ ಆಘಾತ ನೀಡಿತು. 20 ಓವರ್‌ ಆಟ ಪೂರ್ಣ​ಗೊ​ಳ್ಳದೆ ಮಳೆ ನಿಯಮ ಅಳ​ವ​ಡಿಸಿ ವಿಜೇತ ತಂಡ​ವನ್ನು ನಿರ್ಧ​ರಿ​ಸಲು ಸಾಧ್ಯ​ವಿ​ಲ್ಲದ ಕಾರಣ, ಮುಂಬೈಗೆ ಹಿನ್ನಡೆಯಾಯಿತು. ಲೀಗ್‌ ಹಂತ​ದಲ್ಲಿ ‘ಎ’ ಗುಂಪಿ​ನ​ಲ್ಲಿದ್ದ ಮುಂಬೈ 8 ಪಂದ್ಯ​ಗ​ಳಿಂದ 4 ಗೆಲುವು ಸಾಧಿ​ಸಿತ್ತು. ಆದರೆ ಛತ್ತೀ​ಸ್‌ಗಢ 8 ಪಂದ್ಯ​ಗ​ಳಿಂದ 5 ಗೆಲುವು ಸಾಧಿ​ಸಿದ್ದ ಕಾರಣ, ಸೆಮೀಸ್‌ಗೆ ಪ್ರವೇಶ ದೊರೆ​ಯಿತು.

ಹರಿಣಗಳ ಶಿಕಾರಿ; ಸರಣಿ ಕ್ಲೀನ್ ಸ್ವೀಪ್ ಮಾಡಿದ ಟಿಂ ಇಂಡಿಯಾ

ಮತ್ತೊಂದು ಕ್ವಾರ್ಟರ್‌ ಫೈನಲ್‌ ಪಂದ್ಯ​ದಲ್ಲಿ ತಮಿ​ಳು​ನಾಡು 39 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿ​ಸಿತು. ಪಂಜಾಬ್‌ 12.2 ಓವರ್‌ಗಳಲ್ಲಿ 52 ರನ್‌ಗೆ 2 ವಿಕೆಟ್‌ ಕಳೆ​ದು​ಕೊಂಡಿ​ದ್ದಾಗ ಮಳೆ ಸುರಿದ ಕಾರಣ, ಪಂದ್ಯ ಸ್ಥಗಿತಗೊ​ಳಿ​ಸ​ಲಾ​ಯಿತು. ಲೀಗ್‌ ಹಂತ​ದಲ್ಲಿ ‘ಸಿ’ ಗುಂಪಿ​ನ​ಲ್ಲಿದ್ದ ತಮಿ​ಳು​ನಾಡು, 9 ಪಂದ್ಯ​ಗ​ಳಲ್ಲಿ 9 ಗೆಲುವು ಸಾಧಿ​ಸಿತ್ತು. ‘ಬಿ’ ಗುಂಪಿ​ನ​ಲ್ಲಿದ್ದ ಪಂಜಾಬ್‌ 8 ಪಂದ್ಯ​ಗ​ಳಿಂದ 5 ಗೆಲುವು ಪಡೆ​ದಿತ್ತು.

Follow Us:
Download App:
  • android
  • ios