Asianet Suvarna News Asianet Suvarna News

ಕೊಳವೆ ಬಾವಿಯಲ್ಲಿ ಸುಜಿತ್ ದುರ್ಮರಣ; ಕಂಬನಿ ಮಿಡಿದ ಕ್ರಿಕೆಟಿಗರು!

ಸತತ 80 ಗಂಟೆಗಳ ಕಾರ್ಯಚರಣೆ ಮಾಡಿದರೂ ಸುಜಿತ್ ವಿಲ್ಸನ್ ಬದುಕಿ ಬರಲಿಲ್ಲ. ಭಾರತೀಯರ ಪ್ರಾರ್ಥನೆ ಫಲಿಸಲಿಲ್ಲ. ಇದೀಗ ನೋವಿನ ಜೊತೆಗೆ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇದರ ನಡುವೆ ಟೀಂ ಇಂಡಿಯಾ ಕ್ರಿಕೆಟಿಗರು ಸುಜಿತ್ ವಿಲ್ಸನ್ ಸಾವಿಗೆ ಕಂಬನಿ ಮಿಡಿದ್ದಾರೆ. 

Team India cricketer mourn sujith wilson death in borewell
Author
Bengaluru, First Published Oct 30, 2019, 6:48 PM IST

ತಿರುಚಿನಾಪಳ್ಳಿ(ಅ.30): ಭಾರತದಲ್ಲಿ ಕೊಳವೆ ಬಾವಿ ದುರ್ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದೆ. ಪ್ರತಿವರ್ಷ ಮುಗ್ದ ಕಂದಮ್ಮಗಳು ಅಸಡ್ಡೆಗೆ ಬಲಿಯಾಗುತ್ತಿವೆ. ಇದೀಗ ತಮಿಳುನಾಡಿ ತಿರುಚಿನಾಪಳ್ಳಿಯಲ್ಲಿ ಕೊಳವೆ ಬಾವಿಗೆ ಬಿದ್ದ ಸುಜಿತ್ ವಿಲ್ಸನ್ ಕೊನೆಯುಸಿರೆಳೆದ ಘಟನೆಗೆ ದೇಶವೇ ಕಂಬನಿ ಮಿಡಿದಿದೆ. ಸತತ 80 ಗಂಟೆಗಳ ಕಾರ್ಯಚರಣೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಈ ಘಟನೆ ಮರುಕಳಿಸದಿರಲಿ ಎಂದು ಟೀಂ ಇಂಡಿಯಾ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ಫಲಿಸಲಿಲ್ಲ ಪ್ರಾರ್ಥನೆ- ಪ್ರಯತ್ನ; ಕೊಳವೆಬಾವಿಯಲ್ಲೇ ಕೊನೆಯುಸಿರೆಳೆದ ಕಂದ

90 ಅಡಿಯಲ್ಲಿ ಸಿಲುಕಿಕೊಂಡ ಸುಜಿತ್ ಮೃತ ದೇಹವನ್ನು ಹೊರಕ್ಕೆ ತೆಗೆದಾಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.  ಕೋಟ್ಯಾಂಟರ ಭಾರತೀಯರು ದುಖದಲ್ಲಿ ಮುಳುಗಿದರು. ಪ್ರತಿ ಭಾರಿ ಇಂತಹ ಘಟನೆಗಳು ನಡೆದಾಗ ಒಂದಿಷ್ಟು ಚರ್ಚೆ ಹೊರತುಪಡಿಸಿದರೆ, ಯಾವ ಕ್ರಾಂತಿ ಕಾರಿ ಬದಲಾವಣೆಗಳೂ ನಡೆಯುವುದಿಲ್ಲ. ಆದರೆ ಸುಜಿತ್ ಘಟನೆ ಇನ್ನೆಂದು ಮರುಕಳಿಸದಿರಲಿ ಎಂದು ಕ್ರಿಕಟಿಗರು ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡಿದ್ದಾರೆ.

 

Follow Us:
Download App:
  • android
  • ios