Asianet Suvarna News Asianet Suvarna News

ಹರಿಣಗಳ ಶಿಕಾರಿ; ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ರಾಂಚಿ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 202 ರನ್’ಗಳೊಂದಿಗೆ ಜಯಿಸುವ ಮೂಲಕ ಇತಿಹಾಸ ಬರೆದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Ranchi Test Team India Win by Innings and 202 Runs
Author
Ranchi, First Published Oct 22, 2019, 10:40 AM IST

ರಾಂಚಿ[ಅ.22]: ನಿರೀಕ್ಷೆಯಂತೆಯೇ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರು ಸುಲಭವಾಗಿ ರಾಂಚಿ ಟೆಸ್ಟ್ ಗೆಲ್ಲುವುದರೊಂದಿಗೆ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ನಾಲ್ಕನೇ ದಿನದಾಟದ ಎರಡನೇ ಓವರ್’ನಲ್ಲಿ ಶಾಬಾಜ್ ನದೀಮ್ ಸತತ ಎರಡು ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಪಡೆ ಇನಿಂಗ್ಸ್ ಹಾಗೂ 202 ರನ್’ಗಳ ಭರ್ಜರಿ ಜಯ ಸಾಧಿಸಿದೆ. ಇದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಅತಿದೊಡ್ಡ ಗೆಲುವಾಗಿದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿದೆ. 

ರಾಂಚಿ ಟೆಸ್ಟ್: ಟೀಂ ಇಂಡಿಯಾ ಗೆಲುವಿಗೆ ಬೇಕು ಜಸ್ಟ್ 2 ವಿಕೆಟ್

ಮೂರನೇ ದಿನದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿದ್ದ ಆಫ್ರಿಕಾ ತನ್ನ ಖಾತೆಗೆ ಕೇವಲ ಒಂದು ರನ್ ಅಷ್ಟೇ ಸೇರಿಸಿ 2 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಹೀನಾಯವಾಗಿ ಸರಣಿ ಸೋತಿತು. ಪದಾರ್ಪಣೆ ಮಾಡಿದ ಶಾಬಾಜ್ ನದೀಮ್ ಮೂರು ವಿಕೆಟ್ ಪಡೆದರು. ಪಂದ್ಯದುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ಭಾರತದ ಆರಂಭಿಕ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು. 

ವೈಜಾಗ್’ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 203 ರನ್’ಗಳಿಂದ ಜಯಿಸಿತ್ತು. ಇನ್ನು ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಇನಿಂಗ್ಸ್ ಹಾಗೂ 137 ರನ್’ಗಳಿಂದ ಜಯಿಸಿತ್ತು. ಇದೀಗ ರಾಂಚಿ ಟೆಸ್ಟ್ ಪಂದ್ಯವನ್ನು ಇನ್ನೂ ಒಂದು ದಿನ ಬಾಕಿ ಇರುವಂತೆಯೇ ಇನಿಂಗ್ಸ್ ಹಾಗೂ 202 ರನ್’ಗಳ ಜಯ ಸಾಧಿಸಿದೆ.

ಬ್ಯಾಟಿಂಗ್’ನಲ್ಲಿ ರೋಹಿತ್ ಶರ್ಮಾ[529], ಮಯಾಂಕ್ ಅಗರ್ವಾಲ್[340] ಹಾಗೂ ವಿರಾಟ್ ಕೊಹ್ಲಿ 317 ರನ್ ಬಾರಿಸುವುದರೊಂದಿಗೆ ಸರಣಿಯಲ್ಲಿ ಟಾಪ್ 3 ಸ್ಥಾನ ಹಂಚಿಕೊಂಡರೆ, ಬೌಲಿಂಗ್’ನಲ್ಲಿ ರವಿಚಂದ್ರನ್ ಅಶ್ವಿನ್[15], ಮೊಹಮ್ಮದ್ ಶಮಿ[13] ಹಾಗೂ ರವೀಂದ್ರ ಜಡೇಜಾ[13] ಗರಿಷ್ಠ ವಿಕೆಟ್ ಪಡೆದ ಟಾಪ್ 3 ಬೌಲರ್’ಗಳು ಎನಿಸಿದರು.  


 

Follow Us:
Download App:
  • android
  • ios