Asianet Suvarna News Asianet Suvarna News

ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ; ಆರಂಭಿಕ ಆಘಾತ..!

ರಾಂಚಿ ಟೆಸ್ಟ್ ಪಂದ್ಯದಲ್ಲಿ ಆರಂಭದಲ್ಲೇ ಭಾರತ ವಿಕೆಟ್ ಕಳೆದುಕೊಂಡಿದೆ. ಮಯಾಂಕ್ ಅಗರ್ವಾಲ್ ಪೆವಿಲಿಯನ್ ಸೇರಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿದಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Ranchi Test India lose Mayank Agarwal early against South Africa
Author
Ranchi, First Published Oct 19, 2019, 10:09 AM IST

ರಾಂಚಿ[ಅ.19]: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದ್ದು, ಆರಂಭಿಕ ಆಘಾತ ಅನುಭವಿಸಿದೆ. ತಂಡದ ಮೊತ್ತ 12 ರನ್’ಗಳಾಗುವಷ್ಟರಲ್ಲಿ ಭಾರತದ ಮೊದಲ ವಿಕೆಟ್ ಪತನವಾಗಿದೆ.

ರಾಂಚಿ ಟೆಸ್ಟ್’ನಲ್ಲಿ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ. ಕಳೆದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಮಯಾಂಕ್ ಅಗರ್’ವಾಲ್ ಕೇವಲ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಕಗಿಸೋ ರಬಾಡ ಎಸೆತದಲ್ಲಿ ಡೀನ್ ಎಲ್ಗಾರ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. 7 ಓವರ್ ಮುಕ್ತಾಯದ ವೇಳೆಗೆ ಭಾರತ ಒಂದು ವಿಕೆಟ್ ಕಳೆದುಕೊಂಡು 12 ರನ್ ಬಾರಿಸಿದ್ದು, ರೋಹಿತ್ ಶರ್ಮಾ 2 ಹಾಗೂ ಪೂಜಾರ ಇನ್ನು ಖಾತೆ ತೆರೆದಿಲ್ಲ. 

ರಾಂಚಿ ಟೆಸ್ಟ್: ಸರಣಿ ಕ್ಲೀನ್ ಸ್ವೀಪ್ ನಿರೀಕ್ಷೆಯಲ್ಲಿ ಟೀಂ ಇಂಡಿಯಾ

ಟಾಸ್ ಗೆದ್ದ ಭಾರತ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಇಶಾಂತ್ ಶರ್ಮಾಗೆ ವಿಶ್ರಾಂತಿ ನೀಡಿ ಶಾದಾಬ್ ನದೀಮ್’ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ ನದೀಮ್ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದಾರೆ. 

ಇನ್ನು ದಕ್ಷಿಣ ಆಫ್ರಿಕಾ ಕಳೆದೆರಡು ಪಂದ್ಯಗಳಲ್ಲಿ ಮುಗ್ಗರಿಸಿದ್ದು, ಕೊನೆಯ ಪಂದ್ಯವನ್ನಾದರೂ ಗೆದ್ದು ಧನಾತ್ಮಕವಾಗಿ ಭಾರತ ಪ್ರವಾಸ ಮುಗಿಸಲು ಎದುರು ನೋಡುತ್ತಿದೆ. ಹೀಗಾಗಿ ಕೆಲ ರಣತಂತ್ರಗಳೊಂದಿಗೆ ಹರಿಣಗಳ ಪಡೆ ಕಣಕ್ಕಿಳಿದೆ. ಇದೀಗ ಕ್ವಿಂಟನ್ ಡಿಕಾಕ್ ಇನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ಕೇಶವ್ ಮಹರಾಜ್ ಬದಲಿಗೆ ಜಾರ್ಜ್ ಲಿಂಡೆಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಲಿಂಡೆ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದಾರೆ. ಇನ್ನು ಹೆನ್ರಿಚ್ ಕ್ಲಸೇನ್ ವಿಕೆಟ್ ಕೀಪಿಂಗ್ ಪಾತ್ರ ನಿಭಾಯಿಸಲಿದ್ಧಾರೆ.

ತಂಡಗಳು ಹೀಗಿವೆ:

ಭಾರತ

ದಕ್ಷಿಣ ಆಫ್ರಿಕಾ:

Follow Us:
Download App:
  • android
  • ios