Asianet Suvarna News Asianet Suvarna News

ಟ್ವೀಟ್ ಮಾಡಿ ಧೋನಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ವಿರಾಟ್ ಕೊಹ್ಲಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮತ್ತೆ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.  ಧೋನಿ ವಿದಾಯಕ್ಕೆ ಸಜ್ಜಾಗಿದ್ದಾರಾ? ಟ್ವೀಟ್ ಮೂಲಕ ಕೊಹ್ಲಿ ಸೂಚನೆ ನೀಡಿದ್ರಾ ಅನ್ನೋ ಮಾತುಗಳು ಅಭಿಮಾನಿಗಲ್ಲಿ ಕೇಳಿಬರುತ್ತಿದೆ. ಅಸಲಿಗೆ ಕೊಹ್ಲಿ ಟ್ವೀಟ್ ಮಾಡಿದ್ದು ಯಾಕೆ? ಇಲ್ಲಿದೆ ವಿವರ.
 

partners in crime says virat kohli after posting ms dhoni picture in social media
Author
Bengaluru, First Published Nov 20, 2019, 6:11 PM IST

"

ಕೋಲ್ಕತಾ(ನ.20): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐತಿಹಾಸಿಕ ಡೆ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ಕೋಲ್ಕತಾದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಇತ್ತ ಅಭಿಮಾನಿಗಳು ಕೂಡ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಇದರ ನಡುವೆ ವಿರಾಟ್ ಕೊಹ್ಲಿ, ಧೋನಿ ಕುರಿತು ಟ್ವೀಟ್ ಮಾಡೋ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

ಇದನ್ನೂ ಓದಿ: ಹ್ಯಾಟ್ಸ್ ಆಫ್ ವಿರಾಟ್; ಅಪರೂಪದ ಅಭಿಮಾನಿಯ ಹೃದಯ ಗೆದ್ದ ಕೊಹ್ಲಿ

ಕೋಲ್ಕತಾ ಟೆಸ್ಟ್ ಪಂದ್ಯಕ್ಕೂ ಮುನ್ನ, ಅಂದರೆ ನವೆಂಬರ್ 21 ರಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಸಭೆ ಸೇರಲಿದೆ. ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ತಂಡವನ್ನು ಆಯ್ಕೆ ಮಾಡಲಿದೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಟ್ವೀಟೊಂದು ಮಾಡಿದ್ದಾರೆ. ಅಪರಾಧದಲ್ಲಿ ಪಾಲುದಾರರು, ಬೌಂಡರಿ ಗೆರೆಯ ಫೀಲ್ಡರ್ಸ್ ವಂಚಿತ 2 ರನ್ ಕದಿಯುವ ಕ್ರೈಂ, ಊಹಿಸಬಲ್ಲಿರಾ ಇದು ಯಾರು ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಧೋನಿ ನಿವೃತ್ತಿ ಸುಳಿವು ನೀಡಿದ್ರಾ ಕೊಹ್ಲಿ?

ಕೊಹ್ಲಿ ಟ್ವೀಟ್ ಮಾಡಿದ ಬೆನ್ನಲ್ಲೇ ಅಭಿಮಾನಿಗಳು ಯಾವುದೇ ಕ್ಷಣ ಯೋಸಿದೆ ಫೋಟೋದಲ್ಲಿರುವ ಕ್ರಿಕೆಟಿಗ ಎಂ.ಎಸ್.ಧೋನಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟೇ ಅಲ್ಲ, ವಿಂಡೀಸ್ ವಿರುದ್ಧದ ಸರಣಿಗೆ ಧೋನಿ ವಾಪಾಸ್ಸಾಗಲಿದ್ದಾರೆ. ಇದಕ್ಕಾಗಿಯೇ ಕೊಹ್ಲಿ ಟ್ವೀಟ್ ಮೂಲಕ ಸೂಚನೆ ನೀಡಿದ್ದಾರೆ ಎಂದು ಅಭಿಮಾನಿಗಳು ಸಂಬ್ರಮಿಸಿದ್ದಾರೆ. ಇನ್ನು ಕೆಲ ಅಭಿಮಾನಿಗಳು, ಧೋನಿ ವಿದಾಯದ ಕಾಲ ಸನಿಹದಲ್ಲಿದೆ ಎಂದು ಸೂಚಿಸಿದ್ದಾರೆ.

ವಿರಾಟ್ ಕೊಹ್ಲಿ ಟ್ವೀಟ್ ದೇಶದಲ್ಲಿ ಗುಲ್ಲೆಬ್ಬಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಧೋನಿಗೆ ಮೈದಾನದಲ್ಲಿ ಬ್ಯಾಟ್ ಎತ್ತಿ ಹಿಡಿದು ನಮಿಸುತ್ತಿರುವ ಫೋಟೋ ಪೋಸ್ಟ್ ಮಾಡಿದ್ದರು. ದಿಗ್ಗಜ  ಧೋನಿ ಹಾಗೂ ಕೊಹ್ಲಿ ನಡುವಿನ ಜೊತೆಯಾಟ ನೆನಪಿಸುವ ಸಲುವಾಗಿ ಫೋಟೋ ಹಂಚಿಕೊಂಡಿದ್ದರು. ಆದರೆ ಧೋನಿ ವಿದಾಯ ಹೇಳುತ್ತಿದ್ದಾರೆ ಅನ್ನೋ ಗಾಸಿಪ್ ಹಬ್ಬಿತ್ತು. ಕೊನೆಗೆ ವಿರಾಟ್ ಕೊಹ್ಲಿಯೇ ಸ್ಪಷ್ಟನೆ ನೀಡಿದ್ದರು. 

 

Follow Us:
Download App:
  • android
  • ios