Asianet Suvarna News Asianet Suvarna News

ಶಕೀಬ್‌ಗೆ 2 ವರ್ಷ ನಿಷೇಧದ ಶಿಕ್ಷೆ; ಗಳ ಗಳನೆ ಅತ್ತ ಮುಷ್ಫಿಕರ್ ರಹೀಮ್!

ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್‌ಗೆ 2 ವರ್ಷ ನಿಷೇಧದ ಶಿಕ್ಷೆಗೆ ಸಹ ಕ್ರಿಕಟಿಗರು, ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ. ಶಕೀಬ್‌ಗೆ ಶಿಕ್ಷೆ ಪ್ರಕಟಿಸಿದ ಬೆನ್ನಲ್ಲೇ ಬಾಂಗ್ಲಾ ಕ್ರಿಕೆಟಿಗ ಮುಷ್ಫಿಕರ್ ರಹೀಮ್ ನೋವು ಹಂಚಿಕೊಂಡಿದ್ದಾರೆ.

Mushfiqur Rahim sent emotional message to Shakib Al Hasan after icc impose 2 year ban
Author
Bengaluru, First Published Oct 30, 2019, 3:42 PM IST

ಢಾಕ(ಅ.30): ಬುಕ್ಕಿಗಳು ಸಂಪರ್ಕಿಸಲು ಯತ್ನಿಸಿದ್ದ ವಿಚಾರವನ್ನು ಐಸಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ತಿಳಸದೇ ಸುಮ್ಮನಿದ್ದ ಬಾಂಗ್ಲಾದೇಶ ಆಲ್ರೌಂಡರ್  ಶಕೀಬ್ ಅಲ್ ಹಸನ್‌ಗೆ ಸಂಕಷ್ಟ ಎದುರಾಗಿದೆ. ಐಸಿಸಿ 2 ವರ್ಷ ನಿಷೇಧದ ಶಿಕ್ಷೆ ವಿಧಿಸಿದೆ. ಇದು  ಶಕೀಹ್ ಜೊತೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡ ಕ್ರಿಕೆಟಿಗರು, ಆತ್ಮೀಯರಿಗೆ ಶಾಕ್ ನೀಡಿದೆ. ವಿಶೇಷವಾಗಿ ಶಕೀಬ್ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ, ಜೊತೆಯಾಗಿ ಆಡಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹೀಮ್‌ಗೆ ಅತೀವ ನೋವು ತಂದಿದೆ.

ಇದನ್ನೂ ಓದಿ: ಶಕೀಬ್ ಅಲ್ ಹಸನ್ ಕ್ರಿಕೆಟ್'ನಿಂದ 2 ವರ್ಷ ಬ್ಯಾನ್..!

ಐಸಿಸಿ ಶಿಕ್ಷೆ ಪ್ರಕಟಿಸುತ್ತಿದ್ದಂತೆ, ಮುಷ್ಫಿಕರ್ ರಹೀಮ್ ಗಳಗಳನೆ ಅತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡಿದ್ದಾರೆ. ಕಳೆದ 18 ವರ್ಷಗಳಿಂದ ಜೊತೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೇವೆ. ಇದೀಗ ಶಿಕ್ಷೆಯಿಂದ ನೀನಿಲ್ಲದೇ ಮೈದಾನಕ್ಕಿಳಿಯುವುದನ್ನು ಯೋಚಿಸಲು ಆಗುತ್ತಿಲ್ಲ. ಶೀಘ್ರವೇ ಚಾಂಪಿಯನ್ ಆಟಗಾರನಂತೆ ತಂಡಕ್ಕೆ ಮರಳುವ ವಿಶ್ವಾಸವಿದೆ. ನನ್ನ ಬೆಂಬಲು ಯಾವುತ್ತು ನಿನಗಿದೆ, ಜೊತೆಗೆ ಬಾಂಗ್ಲಾದೇಶದ ಬೆಂಬಲವೂ ಇದೆ. ಆತ್ಮವಿಶ್ವಾಸದಿಂದ ಇರು ಎಂದು  ಮುಷ್ಫಿಕರ್ ರಹೀಮ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: ಭಾರತ vs ಬಾಂಗ್ಲಾದೇಶ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!

ಶಕೀಬ್ ಅಲ್ ಹಸನ್‌ಗೆ 2 ವರ್ಷ  ನಿಷೇಧದ ಶಿಕ್ಷೆಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಹಾಗೂ ಬಳಿಕ ಅದ್ಭುತ ಫಾರ್ಮ್‌ನಲ್ಲಿರುವ ಶಕೀಬ್ ಇದೀಗ ನಿಷೇಧಕ್ಕೊಳಗಾಗಿರುವುದು ಬಾಂಗ್ಲಾ ತಂಡಕ್ಕೆ ತೀವ್ರ ಹಿನ್ನಡೆಯನ್ನು ತಂದೊಡ್ಡಿದೆ. 2020ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶಕೀಬ್ ಅನುಪಸ್ಥಿತಿ ಬಾಂಗ್ಲಾ ತಂಡಕ್ಕೆ ಕಾಡಲಿದೆ.

ಇದನ್ನೂ ಓದಿ: ಶಕಿಬ್‌ ವಿರುದ್ಧ ಬಿಸಿಬಿ ಕಾನೂನು ಕ್ರಮ

ನಾನು ಅತೀಯಾಗಿ ಪ್ರೀತಿಸುವ ಆಟದಿಂದ ನನ್ನನ್ನು ಬ್ಯಾನ್ ಮಾಡಿರುವುದು ನೋವು ತಂದಿದೆ. ಆದರೆ ಐಸಿಸಿ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ನಾನು ಐಸಿಸಿಗೆ ಮಾಹಿತಿ ನೀಡದೆ ತಪ್ಪು ಮಾಡಿದ್ದೇನೆ. ಭ್ರಷ್ಟಾಚಾರ ಮುಕ್ತ ಆಟಕ್ಕೆ ಐಸಿಸಿ ಶ್ರಮಿಸುತ್ತಿದೆ. ನಾನು ನನ್ನ ಕೆಲಸ ಮಾಡಿಲ್ಲ. ಹೀಗಾಗಿ ನಿಷೇಧಕ್ಕೊಳಗಾಗಿದ್ದೇನೆ ಎಂದು ಶಕೀಬ್ ಹೇಳಿದ್ದಾರೆ. 

ಅಕ್ಟೋಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios