Asianet Suvarna News Asianet Suvarna News

ರನೌಟ್‌ ನಿಯಮ ಗೊತ್ತಿ​ರ​ದ ಲಂಕಾದ ಸಂಡ​ಕನ್‌ ಎಡ​ವ​ಟ್ಟು!

ಶ್ರೀಲಂಕಾ ಕ್ರಿಕೆಟಿಗ ಲಕ್ಷನ್‌ ಸಂಡ​ಕನ್‌ ನಿಯಮ ಸರಿಯಾಗಿ ಅರ್ಥಮಾಡಿಕೊಳ್ಳದೆ ಎಡವಟ್ಟು ಮಾಡಿಕೊಂಡಿದ್ದಾರೆ. ರನೌಟ್ ನಿಯಮದಲ್ಲಿ ಸಣ್ಣ ತಪ್ಪು ಮಾಡಿದ ಕಾರಣ ಬ್ಯಾಟ್ಸ್‌ಮನ್ ಔಟಾಗದೇ ಉಳಿದುಕೊಂಡರು. ಸಂಡಕನ್ ಮಾಡಿದ ಎಡವಟ್ಟು ವಿವರ ಇಲ್ಲಿದೆ.

lakshan sandakan brain fade moment during steve smith run out in Srilanka vs Australia match
Author
Bengaluru, First Published Oct 31, 2019, 11:07 AM IST

ಬ್ರಿಸ್ಬೇನ್‌(ಅ.31) : ಲಂಕಾ-ಆಸ್ಪ್ರೇ​ಲಿಯಾ 2ನೇ ಟಿ20 ವೇಳೆ ತಮಾಷೆಯ ಪ್ರಸಂಗವೊಂದು ನಡೆ​ಯಿತು. ಲಂಕಾ ಇನ್ನಿಂಗ್ಸ್‌ ವೇಳೆ ಲಕ್ಷನ್‌ ಸಂಡ​ಕನ್‌ ಬಾರಿ​ಸಿದ ಚೆಂಡು ನೇರವಾಗಿ ಸ್ಟಂಫ್ಸ್‌ಗೆ ಬಡಿ​ದು ಬೇಲ್ಸ್‌ ನೆಲ​ಕ್ಕು​ರು​ಳಿತು. ಈ ವೇಳೆ ಬ್ಯಾಟ್ಸ್‌ಮನ್‌ಗಳು ರನ್‌ ಕದಿ​ಯಲು ಯತ್ನಿ​ಸಿ​ದರು. ಆದರೆ ಬೌಲರ್‌ ಪ್ಯಾಟ್‌ ಕಮಿನ್ಸ್‌, ಚೆಂಡನ್ನು ಸ್ಟಂಫ್ಸ್‌ಗೆ ತಾಕಿಸುತ್ತಾ ಸ್ಟಂಪ್‌ವೊಂದನ್ನು ಕಿತ್ತರು. ಸಂಡ​ಕನ್‌ ರನೌಟ್‌ ಆಗಿ ಹೊರ​ನ​ಡೆ​ದರು. 

ಇದನ್ನೂ ಓದಿ: ಡೇವಿಡ್ ವಾರ್ನರ್ ಅಪರೂಪದ ದಾಖಲೆ!

ಆದರೆ ಆಸ್ಪ್ರೇ​ಲಿಯಾ ಇನ್ನಿಂಗ್ಸ್‌ ವೇಳೆ ವಾರ್ನರ್‌ ಬಾರಿ​ಸಿದ ಚೆಂಡು ಸ್ಟಂಫ್ಸ್‌ಗೆ ಬಡಿಯಿತು. ನಾನ್‌ ಸ್ಟ್ರೈಕರ್ ಬದಿ​ಯ​ಲ್ಲಿದ್ದ ಸ್ಮಿತ್‌ ಆಗಲೇ ಅರ್ಧ ದೂರ ಓಡಿದ್ದರು. ಆದರೆ ಸಂಡ​ಕನ್‌ ಒಂದು ಕೈಯಲ್ಲಿ ಚೆಂಡನ್ನು ಹಿಡಿದು ಮತ್ತೊಂದು ಕೈಯಲ್ಲಿ ಸ್ಟಂಫ್ಸ್‌ ಕಿತ್ತರು. ಸ್ಮಿತ್‌ ಕ್ರೀಸ್‌ ತಲುಪಿ ಔಟಾ​ಗದೆ ಉಳಿ​ದರು. ನಿಯ​ಮದ ಪ್ರಕಾರ ಬೇಲ್ಸ್‌ ಬಿದ್ದ ವೇಳೆ ಬ್ಯಾಟ್ಸ್‌ಮನ್‌ನನ್ನು ರನೌಟ್‌ ಮಾಡ​ಬೇ​ಕಿ​ದ್ದರೆ ಕ್ಷೇತ್ರ​ರ​ಕ್ಷಕ ಚೆಂಡನ್ನು ಸ್ಟಂಫ್ಸ್‌ಗೆ ತಗ​ಲಿ​ಸುತ್ತಾ ಸ್ಟಂಫ್ಸ್‌ ಕೀಳ​ಬೇಕು.

ಇದನ್ನೂ ಓದಿ: ಬಿಸಿಸಿಐ ಬಳಿಕ ಎಫ್‌ಟಿಪಿಗೆ ಆಸೀಸ್‌ ವಿರೋಧ

ಲಂಕಾ ವಿರುದ್ಧ ಆಸೀಸ್‌ ಜಯ​ಭೇ​ರಿ! 
ಈ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ ಹಾಗೂ ಸ್ಟೀವ್‌ ಸ್ಮಿತ್‌ರ ಸ್ಫೋಟ​ಕ ಅರ್ಧ​ಶ​ತಕಗಳ ನೆರ​ವಿ​ನಿಂದ ಶ್ರೀಲಂಕಾ ವಿರು​ದ್ಧದ 2ನೇ ಟಿ20 ಪಂದ್ಯ​ದಲ್ಲಿ ಆಸ್ಪ್ರೇ​ಲಿಯಾ 9 ವಿಕೆಟ್‌ಗಳ ಗೆಲುವು ಸಾಧಿ​ಸಿತು. ಈ ಮೂಲಕ 3 ಪಂದ್ಯ​ಗಳ ಸರ​ಣಿ​ಯಲ್ಲಿ 2-0 ಮುನ್ನಡೆ ಸಾಧಿಸಿ, ಸರಣಿ ವಶ​ಪ​ಡಿ​ಸಿ​ಕೊಂಡಿತು. ಬುಧ​ವಾರ ಇಲ್ಲಿ ನಡೆದ ಪಂದ್ಯ​ದಲ್ಲಿ ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 19 ಓವ​ರ್‌ಗಳಲ್ಲಿ ಕೇವಲ 117 ರನ್‌ಗಳಿಗೆ ಆಲೌಟ್‌ ಆಯಿತು. ಕುಸಾಲ್‌ ಪೆರೇರಾ 27 ರನ್‌ಗಳೊಂದಿಗೆ ತಂಡದ ಪರ ಗರಿಷ್ಠ ರನ್‌ ಸರದಾರನೆನಿ​ಸಿ​ದರು. 

ಸುಲಭ ಗುರಿ ಬೆನ್ನ​ತ್ತಿದ ಆಸ್ಪ್ರೇ​ಲಿಯಾ ಮೊದಲ ಓವ​ರಲ್ಲೇ ನಾಯಕ ಆ್ಯರೋನ್‌ ಫಿಂಚ್‌ (00) ವಿಕೆಟ್‌ ಕಳೆ​ದು​ಕೊಂಡಿತು. 2ನೇ ವಿಕೆಟ್‌ಗೆ ಕ್ರೀಸ್‌ ಹಂಚಿ​ಕೊಂಡ ವಾರ್ನರ್‌ ಹಾಗೂ ಸ್ಮಿತ್‌ 12.3 ಓವ​ರಲ್ಲಿ 117 ರನ್‌ ಜೊತೆ​ಯಾಟವಾಡಿ ತಂಡಕ್ಕೆ ಗೆಲುವು ತಂದು​ಕೊ​ಟ್ಟರು. ವಾರ್ನರ್‌ 41 ಎಸೆ​ತ​ಗ​ಳಲ್ಲಿ 60 ರನ್‌ ಸಿಡಿ​ಸಿ​ದರೆ, ಸ್ಮಿತ್‌ 36 ಎಸೆ​ತ​ಗ​ಳಲ್ಲಿ 53 ರನ್‌ ಚಚ್ಚಿದರು.

ಸ್ಕೋರ್‌: ಶ್ರೀಲಂಕಾ 19 ಓವ​ರಲ್ಲಿ 117/10, ಆಸ್ಪ್ರೇ​ಲಿಯಾ 13 ಓವ​ರಲ್ಲಿ 118/1

ಅಕ್ಟೋಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Follow Us:
Download App:
  • android
  • ios