Asianet Suvarna News Asianet Suvarna News

ಶಕೀಬ್‌ನನ್ನು ಬ್ಯಾನ್ ಮಾಡಿದ ಬುಕ್ಕಿ, ಭಾರತೀಯ ಕ್ರಿಕೆಟಿಗನನ್ನು ಬಲಿತೆಗೆದುಕೊಂಡಿದ್ದ!

ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬ್ಯಾನ್ ಆಗಲು ಬುಕ್ಕಿ ದೀಪಕ್ ಅಗರ್ವಾಲ್ ಕಾರಣ. ಇದೇ ಬುಕ್ಕಿ, ಭಾರತದ ಉದಯೋನ್ಮುಖ ಕ್ರಿಕೆಟಿಗನನ್ನು ಬಲಿತೆಗೆದುಕೊಂಡಿದ್ದ. ಇದೀಗ ದೀಪಕ್ ಅಗರ್ವಾಲ್ ಕರಾಳ ಮುಖ ಒಂದೊಂದೆ ಅನಾವರಣವಾಗುತ್ತಿದೆ.
 

Indian cricketer commit suicide after receive threat from  Bookie Deepak Aggarwal
Author
Bengaluru, First Published Oct 30, 2019, 8:58 PM IST

ಉದಯಪುರ(ಅ.30): ಕಳೆದ ಕೆಲದಿನಗಳಿಂದ ಮೋಸ್ಟ್ ವಾಟೆಂಟ್ ಬುಕ್ಕಿ ದೀಪಕ್ ಅಗರ್ವಾಲ್ ಸುದ್ದಿಯಲ್ಲಿದ್ದಾನೆ. ಬಾಂಗ್ಲಾದೇಶದ ಹಿರಿಯ ಆಲ್ರೌಂಡರ್ ಶಕೀಬ್ ಅಲ್ ಹಸನ್‌‌ಗೆ  2 ವರ್ಷ ನಿಷೇಧದ ಶಿಕ್ಷೆ ವಿಧಿಸಲು ಕಾರಣ ಇದೇ ಬುಕ್ಕಿ ದೀಪಕ್ ಅಗರ್ವಾಲ್. 2017ರಲ್ಲಿ ಶಕೀಬ್ ಸಂಪರ್ಕ ಮಾಡಿದ್ದ ಬುಕ್ಕಿಗೆ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ ಬುಕ್ಕಿ ಸಂಪರ್ಕದ ಕುರಿತು ಐಸಿಸಿಗೆ ಮಾಹಿತಿ ನೀಡದ ಶಕೀಬ್ ಇದೀಗ 2 ವರ್ಷ ನಿಷೇಧಕ್ಕೊಳಗಾಗಿದ್ದಾರೆ. ಶಕೀಬ್‌ ನಿಷೇಧದ ಹಿಂದಿರುವ ಈ ದೀಪಕ್ ಭಾರತೀಯ ಕ್ರಿಕೆಟಿಗನನ್ನು ಬಲಿತೆಗೆದುಕೊಂಡಿದ್ದ ಅನ್ನೋದು ಬಹುತೇಕರಿಗೆ ತಿಳಿದಿಲ್ಲ.

ಇದನ್ನೂ ಓದಿ: ಶಕೀಬ್ ಅಲ್ ಹಸನ್ ಕ್ರಿಕೆಟ್'ನಿಂದ 2 ವರ್ಷ ಬ್ಯಾನ್..!

2017ಕ್ಕೂ ಮೊದಲು ಇದೇ ದೀಪಕ್ ಅಗರ್ವಾಲ್, ಉದಯಪುರ ಮೂಲದ ಕ್ರಿಕೆಟಿಗ ವಿಜಯ್ ಕುಮಾರ್ ಸಂಪರ್ಕ ಮಾಡಿದ್ದ. 29 ವರ್ಷದ ವಿಜಯ್ ಕುಮಾರ್‌ಗೆ 5 ಲಕ್ಷ ರೂಪಾಯಿ ನೀಡಿ ಫಿಕ್ಸಿಂಗ್‌‍ಗೆ ಸಹಕರಿಸುವಂತೆ ಸೂಚಿಸಿದ್ದ. ಹಣ ಪಡೆದ ವಿಜಯ್ ಕುಮಾರ್‌ ಮಾನಸಿಕವಾಗಿ ಕೊರಗಿ ಹೋಗಿದ್ದ. ಬುಕ್ಕಿಯ ಮೋಸದ ಜಾಲಕ್ಕೆ ಸಿಲುಕಿ ಕಾನೂನು ಬಾಹಿರ ಚಟುವಟಿಕೆ ಮಾಡಿದೆ ಎಂದು ಕೊರಗಿದ್ದ. 

ಇದನ್ನೂ ಓದಿ: ಭಾರತ ಪ್ರವಾಸ ವಿರುದ್ಧ ಪಿತೂರಿ: ಬಿಸಿಬಿ ಅಧ್ಯಕ್ಷ

ದೀಪಕ್ ಅಗರ್ವಾಲ್ ಫಿಕ್ಸಿಂಗ್, ಬೆಟ್ಟಿಂಗ್ ಮಾಡುವಂತೆ ಪದೇ ಪದೇ ಸೂಚಿಸುತ್ತಿದ್ದ. ಆದರೆ ವಿಜಯ್ ಕುಮಾರ್ ದೀಪಕ್ ಅಗರ್ವಾಲ್ ಹೇಳಿದಂತೆ ಮಾಡಲು ನಿರಾಕರಿಸಿದ್ದ. ಹೀಗಾಗಿ ಬ್ಲಾಕ್ ಮೇಲ್ ತಂತ್ರದ ಮೂಲಕ ವಿಜಯ್ ಕುಮಾರ್ ಮೇಲೆ ಒತ್ತಡ ತರಲು ಪ್ರಯತ್ನಿಸಿದ. ಹಿಂಸೆ ತಾಳಲಾರದೆ ಕ್ರಿಕೆಟಿಗ ವಿಜಯ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದ. 

ಇದನ್ನೂ ಓದಿ: ನಿಷೇಧದ ಬೆನ್ನಲ್ಲೇ MCC ಕ್ರಿಕೆಟ್ ಸಮಿತಿಗೆ ಶಕೀಬ್ ರಾಜೀನಾಮೆ!

ವಿಜಯ್ ಕುಮಾರ್ ಡೆತ್‌ನೋಟ್‌ನಲ್ಲಿ ತಾನು ಅನುಭವಿಸಿದ ಕಷ್ಟಗಳನ್ನು ಬರೆದುಕೊಂಡಿದ್ದ. ಇಷ್ಟೇ ಅಲ್ಲ ಮೋಸದ ಬಲೆಗೆ ಬಿದ್ದ ಪರಿಯನ್ನು ವಿವರಿಸಿದ್ದ. ಇದರ ಆಧಾರದಲ್ಲಿ ಪೊಲೀಸರು 2017ರ ಎಪ್ರಿಲ್ ತಿಂಗಳಲ್ಲಿ ಕ್ಕಿ ದೀಪಕ್ ಅಗರ್ವಾಲ್ ಬಂಧಿಸಿದ್ದರು. ಆದರೆ ಜೈಲಿನಿಂದ ಬಿಡುಗಡೆಯಾದ ದೀಪಕ್ ಅಗರ್ವಾಲ್ ಬಾಂಗ್ಲಾ ಆಲ್ರೌಂಡರ್ ಶಕೀಬ್ ಸಂರ್ಪಕ ಮಾಡಿದ್ದರು. ಇದೀಗ ಶಕೀಬ್ 2 ವರ್ಷ ನಿಷೇಧದ ಶಿಕ್ಷೆ ಅನುಭವಿಸುತ್ತಿದ್ದಾರೆ.

Follow Us:
Download App:
  • android
  • ios