Asianet Suvarna News Asianet Suvarna News

ಭಾರತ vs ಬಾಂಗ್ಲಾದೇಶ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!

ಸೌತ್ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಇದೀಗ ದೀಪಾವಳಿ ರಜೆಯಲ್ಲಿದೆ. ಮುಂದಿನ ತಿಂಗಳ ಆರಂಭದಲ್ಲಿ ಭಾರತ, ಬಾಂಗ್ಲಾದೇಶ ವಿರುದ್ಧ ಹೋರಾಟ ನಡೆಸಲಿದೆ. ಈ ಸರಣಿಯ ವೇಳಾಪಟ್ಟಿ, ತಂಡದ ವಿವರ ಇಲ್ಲಿದೆ.
 

India vs Bangladesh cricket series full schedule
Author
Bengaluru, First Published Oct 28, 2019, 10:07 AM IST

ಮುಂಬೈ(ಅ.28): ಟೀಂ ಇಂಡಿಯಾ ಕ್ರಿಕೆಟಿಗರು ಸದ್ಯ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದಾರೆ. ದೀಪಾವಳಿ ಮುಗಿಸಿ ನೇರವಾಗಿ ಬಾಂಗ್ಲಾದೇಶ ವಿರುದ್ದದ ಸರಣಿಗೆ ರೆಡಿಯಾಗಲಿದ್ದಾರೆ. ಮೊದಲಿಗೆ ಟಿ20 ಸರಣಿ ನಡೆಯಲಿದ್ದು, ಬಳಿಕ ಟೆಸ್ಟ್ ಸರಣಿ ಆರಂಭವಾಗಲಿದೆ. ಮಹತ್ವದ ಸರಣಿಗಾಗಿ ಬಾಂಗ್ಲಾದೇಶ ತಂಡ ಅಕ್ಟೋಬರ್ 30 ರಂದು ಭಾರತಕ್ಕೆ ಆಗಮಿಸಲಿದೆ.

ಇದನ್ನೂ ಓದಿ: ಭಾರತ vs ಬಾಂಗ್ಲಾ ಟಿ20; ಮೊದಲ ಪಂದ್ಯಕ್ಕೆ ಧೂಳಿನ ಸಮಸ್ಯೆ!

ನವೆಂಬರ್ 3 ರಿಂದ ಬಾಂಗ್ಲಾ ವಿರುದ್ದದ 3 ಟಿ20 ಸರಣಿ ನಡೆಯಲಿದೆ. ಟಿ20 ಸರಣಿಯಿಂದ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಟೆಸ್ಟ್ ಪಂದ್ಯದ ವೇಳೆ ಕೊಹ್ಲಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಸರಣಿ ವೇಳಾಪಟ್ಟಿ ಇಲ್ಲಿದೆ.

ಇದನ್ನೂ ಓದಿ: ಬಾಂಗ್ಲಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ಮೂವರು ಕನ್ನಡಿಗರಿಗೆ ಸ್ಥಾನ

ಭಾರತ ಹಾಗೂ ಬಾಂಗ್ಲಾದೇಶ ಟಿ20 ಸರಣಿ

ದಿನಾಂಕ ಪಂದ್ಯ ಕ್ರೀಡಾಂಗಣ ಸಮಯ
ನ.03 1ನೇ ಟಿ20 ದೆಹಲಿ 7 PM
ನ.07 2ನೇ ಟಿ20 ರಾಜ್‌ಕೋಟ್ 7 PM
ನ.10 3ನೇ ಟಿ20 ನಾಗ್ಪುರ 7 PM

 

ಭಾರತ ಹಾಗೂ ಬಾಂಗ್ಲಾದೇಶ ಟೆಸ್ಟ್ ಸರಣಿ

ದಿನಾಂಕ ಪಂದ್ಯ ಕ್ರೀಡಾಂಗಣ ಸಮಯ
ನ.14 ರಿಂದ ನ.18 1ನೇ ಟೆಸ್ಟ್ ಇಂದೋರ್ 9.30AM
ನ.22 ರಿಂದ ನ.26 2ನೇ ಟೆಸ್ಟ್ ಕೋಲ್ಕತಾ 9.30AM

 

Follow Us:
Download App:
  • android
  • ios