Asianet Suvarna News Asianet Suvarna News

ಭಾರತ-ಬಾಂಗ್ಲಾ ಸರಣಿ ಅನು​ಮಾ​ನ!

ನವೆಂಬರ್ 03ರಿಂದ ಆರಂಭವಾಗಲಿರುವ ಬಾಂಗ್ಲಾ ವಿರುದ್ಧ ಟಿ20 ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಚಾಂಪಿಯನ್’ಶಿಪ್ ಇದೀಗ ನಡೆಯುವುದು ಅನುಮಾನ ಎನಿಸತೊಡಗಿದೆ. ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆಇಲ್ಲಿದೆ ನೋಡಿ ಉತ್ತರ...

India tour is in doubt after Bangladesh players go on strike
Author
Dhaka, First Published Oct 22, 2019, 12:06 PM IST

ಢಾಕಾ[ಅ.22]: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿ ಮುಕ್ತಾಯ​ಗೊ​ಳ್ಳು​ತ್ತಿ​ದ್ದಂತೆ ಭಾರತ, ಬಾಂಗ್ಲಾ​ದೇ​ಶಕ್ಕೆ ಆತಿಥ್ಯ ವಹಿ​ಸ​ಲಿದೆ. 3 ಟಿ20 ಹಾಗೂ 2 ಟೆಸ್ಟ್‌ ಪಂದ್ಯ​ಗಳ ಸರ​ಣಿ​ಯ​ನ್ನಾ​ಡಲು ತಂಡ, ಭಾರ​ತಕ್ಕೆ ಆಗ​ಮಿ​ಸ​ಬೇ​ಕಿದೆ. 

ಬಾಂಗ್ಲಾ ಟಿ20 ಸರಣಿ: ಕೊಹ್ಲಿಗೆ ವಿಶ್ರಾಂತಿ?

ಆದರೆ ಸೋಮ​ವಾರ ತಂಡದ ಪ್ರಮುಖ ಆಟ​ಗಾ​ರ​ರಾದ ಶಕೀಬ್‌ ಅಲ್‌ ಹಸನ್‌, ಮುಷ್ಫಿ​ಕರ್‌ ರಹೀಮ್‌, ತಮೀಮ್‌ ಇಕ್ಬಾಲ್‌, ಮಹ​ಮ​ದ್ದುಲ್ಲಾ ಸೇರಿ​ದಂತೆ ಬಹು​ತೇಕ ಎಲ್ಲಾ ಆಟ​ಗಾ​ರರು ಬಾಂಗ್ಲಾ​ದೇಶ ಕ್ರಿಕೆಟ್‌ ಮಂಡಳಿ (ಬಿ​ಸಿ​ಬಿ) ವಿರುದ್ಧ ಪ್ರತಿ​ಭ​ಟನೆ ಆರಂಭಿ​ಸಿ​ದ್ದಾರೆ. ವೇತನ ಹೆಚ್ಚಳ ಸೇರಿ​ದಂತೆ ಒಟ್ಟು 11 ಷರ​ತ್ತು​ಗ​ಳನ್ನು ಬಿಸಿಬಿ ಮುಂದಿ​ಟ್ಟಿ​ರುವ ಆಟ​ಗಾ​ರರು, ಸಮಸ್ಯೆ ಬಗೆಹರಿ​ಸುವ ವರೆ​ಗೂ ಎಲ್ಲಾ ಕ್ರಿಕೆಟ್‌ ಚಟು​ವ​ಟಿಕೆಗಳಿಂದ ದೂರ​ವಿ​ರುವು​ದಾಗಿ ಘೋಷಿ​ಸಿ​ದ್ದಾರೆ.

ಟೀಂ ಇಂಡಿಯಾ ಎದುರಿನ ಟಿ20 ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ 

ಸೋಮ​ವಾರ ಇಲ್ಲಿ ನಡೆದ ಪತ್ರಿ​ಕಾ​ಗೋ​ಷ್ಠಿ​ಯಲ್ಲಿ ಅಂತಾ​ರಾ​ಷ್ಟ್ರೀಯ ಆಟ​ಗಾ​ರರು ಸೇರಿದಂತೆ 50ಕ್ಕೂ ಹೆಚ್ಚು ಕ್ರಿಕೆ​ಟಿ​ಗರು ಪಾಲ್ಗೊಂಡಿ​ದ್ದರು. ದೇಸಿ ಆಟ​ಗಾ​ರರ ಸಂಭಾ​ವನೆ ಏರಿಕೆ, 2ಕ್ಕಿಂತ ಹೆಚ್ಚು ವಿದೇಶಿ ಲೀಗ್‌ಗಳಲ್ಲಿ ಆಡಲು ಅವ​ಕಾಶ ನೀಡ​ಬೇಕು, ಬಾಂಗ್ಲಾ​ದೇಶ ಪ್ರೀಮಿ​ಯರ್‌ ಲೀಗ್‌ (ಬಿ​ಪಿ​ಎಲ್‌) ಟಿ20 ಟೂರ್ನಿ​ಯಲ್ಲಿ ಆಟ​ಗಾ​ರ​ರನ್ನು ಹೆಚ್ಚಿನ ಮೊತ್ತಕ್ಕೆ ಖರೀ​ದಿ​ಸ​ಬೇಕು ಎನ್ನು​ವುದು ಪ್ರಮುಖ ಷರ​ತ್ತು​ಗ​ಳಾ​ಗಿವೆ.

ಈ ಬೆಳ​ವ​ಣಿಗೆ ಬಗ್ಗೆ ಪ್ರತಿ​ಕ್ರಿ​ಯಿ​ಸಿ​ರುವ ಬಿಸಿ​ಸಿಐ, ‘ಇದು ಬಾಂಗ್ಲಾ​ದೇ​ಶದ ಆಂತ​ರಿಕ ಸಮಸ್ಯೆ. ಬಿಸಿಬಿ ಯಾವುದೇ ಅಧಿ​ಕೃತ ಮಾಹಿತಿ ರವಾ​ನಿ​ಸಿಲ್ಲ. ಸರಣಿ ರದ್ದು​ಗೊ​ಳಿ​ಸುವ ಬಗ್ಗೆ ಈಗಲೇ ತೀರ್ಮಾನ ಕೈಗೊ​ಳ್ಳಲು ಸಾಧ್ಯ​ವಿ​ಲ್ಲ’ ಎಂದಿದೆ.

Follow Us:
Download App:
  • android
  • ios