Asianet Suvarna News Asianet Suvarna News

ಏಕದಿನ ಕ್ರಿಕೆಟ್ ಬಗ್ಗೆ ಹೊಸ ಐಡಿಯಾ ಕೊಟ್ಟ ಸಚಿನ್ ತೆಂಡುಲ್ಕರ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಕೆಲ ಬದಲಾವಣೆ ಮಾಡಲು ಸೂಚಿಸಿದ್ದಾರೆ. ಹೀಗೇನಾದರು ಆದರೆ ಟೆಸ್ಟ್‌ನಲ್ಲಿ ಏಕದಿನ ಕ್ರಿಕೆಟ್‌ನಲ್ಲೂ ಎರಡೆರಡು ಬಾರಿ ಆಟಗಾರರು ಕ್ರೀಸ್‌ಗಿಳಿಯಬೇಕಾಗುತ್ತದೆ. ಅಷ್ಟಕ್ಕೂ ಸಚಿನ್ ಕೊಟ್ಟ ಸಲಹೆ ಆದರೂ ಏನಿರಬಹುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದ ನೋಡಿ ಉತ್ತರ..

Cricket Legend Sachin Tendulkar suggests changes to ODI format
Author
New Delhi, First Published Nov 6, 2019, 1:18 PM IST

ನವ​ದೆ​ಹ​ಲಿ[ನ.06]: ಬಿಸಿ​ಸಿಐನ ನೂತನ ಅಧ್ಯಕ್ಷ ಸೌರವ್‌ ಗಂಗೂಲಿ ದೇಸಿ ಕ್ರಿಕೆಟ್‌ನಲ್ಲಿ ಹಲವು ಬದ​ಲಾ​ವಣೆ ತರಲು ಮುಂದಾ​ಗಿ​ರುವ ಹಿನ್ನೆಲೆಯಲ್ಲಿ ಕ್ರಿಕೆಟ್‌ ದೇವರು ಎಂದೇ ಕರೆ​ಸಿ​ಕೊ​ಳ್ಳುವ ಸಚಿನ್‌ ತೆಂಡು​ಲ್ಕರ್‌ ಕೆಲ ಸಲಹೆಗಳನ್ನು ನೀಡಿ​ದ್ದಾರೆ.

ಐಪಿ​ಎಲ್‌ನಲ್ಲಿ ಇನ್ಮುಂದೆ ನೋಬಾಲ್‌ ಅಂಪೈರ್‌!

ಪ್ರಮು​ಖ​ವಾಗಿ ಏಕ​ದಿನ ಮಾದ​ರಿ​ಯ ದೇಸಿ ಟೂರ್ನಿಗ​ಳಲ್ಲಿ 50 ಓವರ್‌ಗಳ 2 ಇನ್ನಿಂಗ್ಸ್‌ ಬದ​ಲಿಗೆ 25 ಓವರ್‌ಗಳ 4 ಇನ್ನಿಂಗ್ಸ್‌ಗಳನ್ನು ಆಡಿ​ಸಲು ಪ್ರಸ್ತಾ​ಪ​ವಿ​ರಿ​ಸಿ​ದ್ದಾರೆ. ‘ಎ’ ಹಾಗೂ ‘ಬಿ’ ತಂಡ​ಗಳ ನಡುವೆ ಪಂದ್ಯ ನಡೆ​ಯು​ವಾಗ, ‘ಎ’ ತಂಡ ಮೊದಲು 25 ಓವರ್‌ ಬ್ಯಾಟ್‌ ಮಾಡ​ಲಿದೆ. ಬಳಿಕ ‘ಬಿ’ ತಂಡ 25 ಓವರ್‌ ಆಡ​ಲಿದೆ. ನಂತರ ‘ಎ’ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಎಷ್ಟು ವಿಕೆಟ್‌ ಉಳಿ​ಸಿ​ಕೊಂಡಿತ್ತೋ ಅಷ್ಟು ವಿಕೆಟ್‌ಗಳೊಂದಿಗೆ 2ನೇ ಇನ್ನಿಂಗ್ಸ್‌ ಮುಂದು​ವ​ರಿ​ಸಿ ‘ಬಿ​’ ತಂಡಕ್ಕೆ ಗುರಿ ನಿಗದಿ ಪಡಿ​ಸ​ಲಿದೆ. ಒಂದೊಮ್ಮೆ ‘ಎ’ ತಂಡ 25 ಓವರ್‌ ಒಳಗೇ ಆಲೌಟ್‌ ಆದರೆ, ಗುರಿ ಬೆನ್ನ​ತ್ತಲು ‘ಬಿ’ ತಂಡಕ್ಕೆ 50 ಓವರ್‌ ಸಿಗ​ಲಿದೆ. ಪ್ರತಿ ಇನ್ನಿಂಗ್ಸ್‌ ಮಧ್ಯೆ 15 ನಿಮಿಷ ವಿರಾಮವಿರ​ಲಿದೆ ಎಂದು ಸಚಿನ್‌ ಹೊಸ ಮಾದ​ರಿ​ಯನ್ನು ವಿವ​ರಿ​ಸಿ​ದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಕೊಹ್ಲಿ ಪತ್ರ!

ಈ ರೀತಿಯ ಬದಲಾವಣೆಗಳು ಎರಡೂ ತಂಡಗಳಿಗೂ ಉಪಯುಕ್ತವಾಗಿದ್ದು, ತಂಡವೊಂದು ಪಂದ್ಯದಲ್ಲಿ ಕಮ್’ಬ್ಯಾಕ್ ಮಾಡಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಇಬ್ಬನಿ ಬೀಳುವ ಸಂದರ್ಭದಲ್ಲಿ ಟಾಸ್ ಗೆದ್ದ ತಂಡ ತನಗೆ ಅನುಕೂಲಕರವಾದ ಆಯ್ಕೆ ಮಾಡಿಕೊಳ್ಳುತ್ತದೆ. ಹೀಗಾದರೆ ಎರಡನೇ ಬಾರಿಗೆ ಬೌಲಿಂಗ್ ಮಾಡುವ ತಂಡ ಚೆಂಡಿನ ಮೇಲೆ ಹಿಡಿತ ಸಾಧಿಸಲು ಕಷ್ಟಪಡಬೇಕಾಗುತ್ತದೆ. ಇದರಿಂದ ಸಮಬಲದ ಹೋರಾಟ ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಸಚಿ​ನ್‌ ಸಾಮರ್ಥ್ಯ ಟೆಸ್ಟ್‌ ಮಾಡಿದ್ದ ಕಪಿಲ್!

ಮುಂಬರುವ 2020ರ ಐಪಿಎಲ್ ಟೂರ್ನಿಯಲ್ಲಿ ನೋಬಾಲ್‌ ಗಮ​ನಿ​ಸ​ಲೆಂದೇ ಪ್ರತ್ಯೇಕ ಅಂಪೈರ್‌ ನಿಯೋ​ಜಿ​ಸಲು ಬಿಸಿಸಿಐ ತೀರ್ಮಾನ ಕೈಗೊಂಡಿದೆ. ಕೆಲದಿನಗಳ ಹಿಂದಷ್ಟೇ ಭಾರತ ತಂಡ ಇದೇ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನಾಡಲು ಒಪ್ಪಿಕೊಂಡಿದೆ. ಹೀಗಾಗಿ ಮುಂದೊಂದು ದಿನ ಸಚಿನ್ ಸಲಹೆಯನ್ನು ಬಿಸಿಸಿಐ ಪರಿಗಣಿಸಿದರೆ ಅಚ್ಚರಿಯಿಲ್ಲ. ಅಂದಹಾಗೆ ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಕೋಲ್ಕತಾದ ಈಡನ್‌ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಲಿದ್ದು, ಇದು ಐತಿಹಾಸಿಕ ಹಗಲು-ರಾತ್ರಿ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

Follow Us:
Download App:
  • android
  • ios