Asianet Suvarna News Asianet Suvarna News

ಜೂಲನ್ ದಾಳಿಗೆ ತತ್ತರಿಸಿದ ಆಫ್ರಿಕಾ 164ಕ್ಕೆ ಆಲೌಟ್

ಭಾರತ-ದಕ್ಷಿಣ ಆಫ್ರಿಕಾ ಮಹಿಳಾ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 164 ರನ್‌ಗಳಿಗೆ ನಿಯಂತ್ರಿಸುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

1st Women's ODI South Africa All out 164 against India
Author
Vadodara, First Published Oct 9, 2019, 12:44 PM IST

ವಡೋ​ದ​ರ(ಅ.09): ಭಾರತ ತಂಡದ ಮಹಿಳಾ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಕೇವಲ 164 ರನ್ ಗಳಿಸಿ ಆಲೌಟ್ ಆಗಿದೆ. ಅನುಭವಿ ವೇಗಿ ಜೂಲನ್ ಗೋಸ್ವಾಮಿ ಮೂರು ವಿಕೆಟ್ ಪಡೆದು ಗಮನ ಸೆಳೆದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಜೂಲನ್ ಗೋಸ್ವಾಮಿ ಮೊದಲ ಓವರ್’ನ ಮೊದಲ ಎಸೆತದಲ್ಲೇ ಆಘಾತ ನೀಡಿದರು. ಆರಂಭಿಕ ಆಟಗಾರ್ತಿ ಲಿಜೆಲ್ಲೇ ಲೀ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಲೌರಾ ವೋಲ್ವರ್ತ್ 39 ರನ್ ಬಾರಿಸಿದರು. ಇನ್ನು ತ್ರಿಶಾ ಚೆಟ್ಟಿ ಹಾಗೂ ಮಿಗಾನ್ ಡು ಪ್ರೇಜ್ ಏಕ್ತಾ ಬಿಶ್ತ್ ಬೌಲಿಂಗ್’ನಲ್ಲಿ ಸ್ಟಂಪ್ ಔಟ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮ್ಯಾರಿಜ್ಯಾನ್ ಕೆಪ್ 54 ರನ್ ಬಾರಿಸಿ ಜೂಲನ್ ಗೋಸ್ವಾಮಿಗೆ ಮೂರನೇ ಬಲಿಯಾದರು.

ಭಾರತದ ಪರ ಜೂಲನ್ ಗೋಸ್ವಾಮಿ 3 ವಿಕೆಟ್ ಪಡೆದರೆ, ಶಿಖಾ ಪಾಂಡೆ, ಏಕ್ತಾ ಬಿಶ್ತ್ ಹಾಗೂ ಪೂನಂ ಯಾಧವ್ ತಲಾ 2 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ ಒಂದು ವಿಕೆಟ್ ಪಡೆದರು.   

ಪ್ರಿಯಾ ಪೂನಿಯಾ ಪದಾರ್ಪಣೆ: ರಾಜಸ್ಥಾನ ಮೂಲದ 23 ವರ್ಷದ ಪ್ರಿಯಾ ಪೂನಿಯಾ ಭಾರತ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಭಾರತೀಯ ಆಟಗಾರ್ತಿಯರು ಕ್ಯಾಪ್ ನೀಡುವ ಮೂಲಕ ತಂಡಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. 

ಏಕ​ದಿನ ಸರಣಿಯಿಂದ ಹೊರ​ಬಿದ್ದ ಮಂಧ​ನಾ!

ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ, ಸ್ಮೃತಿ ಮಂಧನಾ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಪೂರ್ವಭಾವಿ ಅಭ್ಯಾಸ ನಡೆಸುವ ವೇಳೆಯಲ್ಲಿ ಮಂಧನಾ, ಮೊಣಕಾಲಿನ ಗಾಯಕ್ಕೆ ತುತ್ತಾದರು. ಈ ವೇಳೆ ಸ್ಮೃತಿ ಅವರನ್ನು ಪರೀಕ್ಷಿಸಿದ ಬಿಸಿಸಿಐ ವೈದ್ಯರ ತಂಡ ಗಂಭೀರ ಗಾಯವೆಂದು ಪರಿಗಣಿಸಿ ಸ್ಮೃತಿ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸಲಹೆ ನೀಡಿದೆ. 

ಸ್ಮೃತಿ ಬದಲಿಗೆ ಆಲ್ರೌಂಡರ್‌ ಪೂಜಾ ವಸ್ತ್ರಾಕರ್‌ ತಂಡ ಕೂಡಿಕೊಂಡಿದ್ದಾರೆ. ಸ್ಮೃತಿ ವಿಂಡೀಸ್‌ ವಿರು​ದ್ಧದ ಮುಂದಿನ ಸರ​ಣಿ​ಗೆ ಭಾರತ ತಂಡಕ್ಕೆ ಮರ​ಳು​ವುದು ಅನುಮಾನ ಮೂಡಿಸಿದೆ. ಅ.11 ಹಾಗೂ 14ರಂದು ಇನ್ನು​ಳಿದ 2 ಪಂದ್ಯ​ಗಳು ನಡೆ​ಯ​ಲಿ​ವೆ.
 

Follow Us:
Download App:
  • android
  • ios