Asianet Suvarna News Asianet Suvarna News

ಆಸಿಸ್‌-ಪಾಕ್‌ ಮೊದಲ ಟಿ20 ಮಳೆಗೆ ಬಲಿ!

ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಮೊದಲ ಟಿ20 ಪಂದ್ಯ ಮಳೆಗೆ ಬಲಿಯಾಗಿದೆ. ಮಳೆ ಬರದಿದ್ದರೆ ಪಾಕಿಸ್ತಾನ ಮತ್ತೊಂದು ಸೋಲು ಕಾಣುವ ಸಾಧ್ಯತೆಯಿತ್ತು. ಮಳೆ ಪಾಕಿಸ್ತಾನದ ಮಾನ ಕಾಪಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

1st T20I Rain Comes To Pakistan Rescue In 1st T20I Against Australia
Author
Sydney NSW, First Published Nov 4, 2019, 11:56 AM IST

ಸಿಡ್ನಿ[ನ.04]: ಶ್ರೀಲಂಕಾ ವಿರುದ್ಧ 3 ಪಂದ್ಯ​ಗಳ ಸರಣಿ​ಯನ್ನು ಕ್ಲೀನ್‌ ಸ್ವೀಪ್‌ ಮಾಡಿ ಉತ್ಸಾ​ಹ​ದ​ಲ್ಲಿದ್ದ ಆಸ್ಪ್ರೇಲಿಯಾ, ಪಾಕಿ​ಸ್ತಾನ ವಿರುದ್ಧ ಭಾನು​ವಾರ ಆರಂಭಗೊಂಡ 3 ಪಂದ್ಯ​ಗಳ ಸರ​ಣಿ​ಯಲ್ಲೂ ಶುಭಾ​ರಂಭ ಮಾಡುವ ವಿಶ್ವಾಸದಲ್ಲಿತ್ತು. ಆದರೆ ಪಂದ್ಯ ಮಳೆಗೆ ಬಲಿ​ಯಾದ ಕಾರಣ, ಆಸಿಸ್‌ ನಿರಾಸೆ ಅನು​ಭ​ವಿ​ಸಿತು.

2020ರ ಒಲಿಂಪಿಕ್ಸ್‌ಗಿಲ್ಲ ಪಾಕಿ​ಸ್ತಾನ ಹಾಕಿ ತಂಡ!

ಪಂದ್ಯ​ದಲ್ಲಿ ಮೊದ​ಲು ಬ್ಯಾಟ್‌ ಮಾಡಿದ ಪಾಕಿ​ಸ್ತಾನ 15 ಓವ​ರಲ್ಲಿ 5 ವಿಕೆಟ್‌ಗೆ 107 ರನ್‌ ಗಳಿ​ಸಿ​ದ್ದಾಗ ಮಳೆ ಸುರಿ​ಯಿತು. ಇದ​ರಿಂದಾಗಿ ಆಸ್ಪ್ರೇ​ಲಿ​ಯಾ​ಕ್ಕೆ ಡಕ್ವರ್ತ್ ಲೂಯಿಸ್‌ ನಿಯ​ಮ​ದನ್ವಯ 15 ಓವ​ರಲ್ಲಿ 119 ರನ್‌ ಗುರಿ ನೀಡ​ಲಾ​ಯಿತು. ಆ್ಯರೋನ್‌ ಫಿಂಚ್‌ (16 ಎಸೆ​ತ​ಗ​ಳಲ್ಲಿ 37) ಸ್ಫೋಟಕ ಆಟದ ನೆರವಿನಿಂದ ಆಸೀಸ್‌ 3.1 ಓವ​ರಲ್ಲಿ 41 ರನ್‌ ಗಳಿ​ಸಿದ್ದಾಗ ಮತ್ತೆ ಮಳೆ ಸುರಿದ ಕಾರಣ ಆಟ ರದ್ದು​ಗೊ​ಳಿ​ಸ​ಲಾ​ಯಿತು.

ಪಾಕ್‌ಗೆ ಮುಖಭಂಗ; ಟಿ20 ಸರಣಿ ಲಂಕಾ ಕೈವಶ

ಪಾಕಿ​ಸ್ತಾನ ಇನ್ನಿಂಗ್ಸ್‌ ಬಳಿಕ ಮಳೆಯಿಂದಾಗಿ 1 ಗಂಟೆಗೂ ಹೆಚ್ಚು ಕಾಲ ಆಟ ಸ್ಥಗಿತಗೊಂಡಿತ್ತು. ಆದರೂ ಇನ್ನಿಂಗ್ಸ್‌ ನಡು​ವೆ 20 ನಿಮಿಷಗಳ ವಿರಾಮ ತೆಗೆ​ದು​ಕೊ​ಳ್ಳ​ಲಾ​ಯಿತು. ಆಸಿಸ್‌ ಇನ್ನಿಂಗ್ಸಲ್ಲಿ 5 ಓವರ್‌ ಪೂರ್ಣ​ಗೊಂಡಿ​ದ್ದರೆ ಪಂದ್ಯ ಫಲಿ​ತಾಂಶ ಕಾಣು​ತಿತ್ತು. ಇನ್ನು ಎರಡನೇ ಟಿ20 ಪಂದ್ಯವು ಕ್ಯಾನ್’ಬೆರಾದಲ್ಲಿ ನವೆಂಬರ್ 05ರಂದು ನಡೆಯಲಿದೆ.

 

Follow Us:
Download App:
  • android
  • ios