Asianet Suvarna News Asianet Suvarna News

ಬಡವರ ಮನೆ ನೀರು ಕುಡಿದು ಮಗಳಿಗೆ ಜೀವನ ಪಾಠ ಕಲಿಸಿದ ಅಕ್ಷಯ್!

ಬಾಲಿವುಡ್‌ ಆ್ಯಕ್ಷನ್ ಕಿಂಗ್ ಮಗಳ ಜೊತೆ 'ಮಾರ್ನಿಂಗ್ ವಾಕ್' ಮಾಡುವಾಗ ಬಾಯಾರಿಕೆ ಎಂದು ಸ್ಲಂನಲ್ಲಿದ್ದ ಬಡವರ ಮನೆಯೆಲ್ಲಿ ನೀರು ಹಾಗೂ ಊಟ ಸವಿದಿದ್ದಾರೆ. ಇದರಿಂದ ಅವರು ಜೀವನದಲ್ಲಿ ಮಹತ್ತರವಾದ ಪಾಠವೊಂದನ್ನು ಕಲಿತಿದ್ದು ಇಲ್ಲದೇ, ಮಗಳಿಗೂ ಜೀವನ ಪಾಠ ಕಲಿಸಿದ್ದಾರೆ. ಏನದು?

Bollywood Akshya Kumar and daughter Nitara morning walk life lesson
Author
Bangalore, First Published Nov 2, 2019, 12:58 PM IST

ಬಾಲಿವುಡ್‌ ಜೆಂಟಲ್‌ಮ್ಯಾನ್‌ ಅಕ್ಷಯ್ ಕುಮಾರ್ ಭಾರತದ ಸಿರಿವಂತರ ನಟರ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡವರು. ಅವರ ಪ್ರತೀ ಚಿತ್ರವೂ ಬಾಕ್ಸ್ ಆಫೀಸನಲ್ಲಿ ಹಿಟ್ ಆಗುವುದು ಖಂಡಿತ. ಅದೂ ಅಲ್ಲದೇ ತಪ್ಪದೇ ಆದಾಯ ತೆರಿಗೆ ಕಟ್ಟುವ ಮೂಲಕ ಹಾಗೂ ಇತರೆ ಸಮಾಜಮುಖಿ ಕಾರ್ಯಗಳಿಂದ ಅಕ್ಷಯ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲಿಯೂ ಹುತಾತ್ಮರಿಗೆ ಅವರು ಆರಂಭಿಸಿದ ಹಲವು ಕಾರ್ಯಗಳು ಅವರನ್ನು ನೈಜ ಜೀವನದಲ್ಲಿಯೂ ಹೀರೋ ಮಾಡಿದೆ.

ಕಂಫರ್ಟ್‌ ಝೋನ್‌ನಿಂದ ಆಚೆ ಬಂದ ಅಕ್ಷಯ್‌ ಕುಮಾರ್‌!

ಕಳೆದ ತಿಂಗಳು ರಿಲೀಸ್ ಆದ ಹೌಸ್‌ಫುಲ್‌ 4 ಚಿತ್ರಕ್ಕೆ ಹಾಕಿದ ಬಂಡವಾಳ ಸುಲಭವಾಗಿ ನಿರ್ಮಾಪಕರ ಕೈ ಸೇರಿದೆ. ವರ್ಷವಿಡೀ ಬ್ಯುಸಿಯಾಗಿರುವ ಅಕ್ಷಯ್ ತನ್ನ ಕುಟುಂಬದೊಂದಿಗೆ ಒಳ್ಳೆ ಸಮಯವನ್ನೂ ಕಳೆಯುತ್ತಾರೆ. ಮಗಳೊಂದಿಗೆ ವಾಕಿಂಗ್ ಹೋಗುತ್ತಾರೆ. ಇತ್ತೀಚೆಗೆ ಮುದ್ದು ಮಗಳು ನಿಥಾರ ಜೊತೆ ವಾಕಿಂಗ್ ಹೋಗಿದ್ದರು ಈ ಬಾಲಿವುಡ್ ಕಿಲಾಡಿ. ಬಾಯಾರಿದ ನಟ, ಮಗಳೊಂದಿಗೆ ಅಲ್ಲಿಯೇ ಸಮೀಪದ ಸ್ಲಮ್‌ನಲ್ಲಿದ್ದ ಬಡವರ ಮನೆಗೆ ನೀರು ಕುಡಿಯಲು ಹೋಗಿದ್ದರು.

8000 ಸಾವಿರ ದುಡಿಯಲು ಇಷ್ಟೊಂದು ಕಷ್ಟಪಡ್ತಾರಾ ಅಕ್ಷಯ್!

ಆ ಮನೆಯಲ್ಲಿದ್ದ ವೃದ್ಧರ ಬಳಿ ನೀರು ಕೇಳಿದರು. ಬಾಲಿವುಡ್‌ನ ಮಹಾನ್ ನಟ ಮನೆ ಬಾಗಿಲಿಗೆ ಬಂದಿದ್ದು ನೋಡಿ ಆ ಕುಟುಂಬ ಅಚ್ಚರಿಗೊಂಡಿದೆ. ಸಂಭ್ರಮದಲ್ಲಿ ತಂದೆ-ಮಗಳನ್ನು ಮನೆಯೊಳಗೆ ಬರ ಮಾಡಿಕೊಂಡಿದ್ದಾರೆ. ಚಪಾತಿ-ಬೆಲ್ಲ ನೀಡಿ ಸತ್ಕರಿಸಿದ್ದಾರೆ. ಈ ಕುಟುಂಬದ ಆತಿಥ್ಯಕ್ಕೆ ಮನಸೋತ ಬಾಲಿವುಡ್ ನಟ ಫೋಟೋ ತೆಗೆಸಿಕೊಂಡು, ತಮ್ಮ ಟ್ವೀಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಯಾವುದೇ ನಿರೀಕ್ಷೆಗಳಿಲ್ಲದ ಆ ವೃದ್ಧ ದಂಪತಿಯ ಪ್ರೀತಿಗೆ ಅಕ್ಷಯ್ ಮಾರು ಹೋಗಿದ್ದಾರೆ.

ವೀಲ್‌ಚೇರ್‌ನಲ್ಲಿ ಅಕ್ಷಯ್ ತಾಯಿ; ಲಂಡನ್ ಬೀದಿಗಳಲ್ಲಿ ಆ್ಯಕ್ಷನ್ ಕಿಂಗ್

'ಬೆಳಗ್ಗೆ ವಾಕಿಂಗ್ ಹೋಗಿದ್ದು, ಮಗಳಿಗೆ ಜೀವನದ ದೊಡ್ಡ ಪಾಠವಾಗಿತ್ತು. ನಾವು ಸ್ಪಲ್ಪ ನೀರು ಬೇಕೆಂದು ಒಬ್ಬರ ಮನೆಗೆ ಹೋದೆವು. ಆದರೆ ಅವರು ನಮ್ಮನ್ನು ತಮ್ಮ ಮನೆಯವರಂತೆ ಪ್ರೀತಿ ತೋರಿಸಿ, ರೊಟ್ಟಿ ಕೊಟ್ಟು ಸತ್ಕರಿಸಿದರು. ಒಳ್ಳೆಯ ಗುಣ ತೋರಲು ಸಿರಿವಂತರೇ ಆಗಬೇಕಿಲ್ಲ,' ಎಂದು ಬರೆದುಕೊಂಡಿದ್ದಾರೆ.

ಬಡವರನ್ನು ಮುಟ್ಟಿದರೆ ಸೋಂಕು ತಗುಲಬಹುದು ಎಂದು ಭಾವಿಸುತ್ತಾರೆ ಸಿರಿವಂತರು. ಆದರೆ, ಅತ್ಯಂತ ಸಿರಿವಂತ ನಟ ಸ್ಲಂನಲ್ಲಿದ್ದ ಬಡವರ ಮನೆಗೆ ಹೋಗಿ ನೀರು ಕುಡಿದಿದ್ದಾರೆ. ಅಲ್ಲದೇ ಅವರು ಕೊಟ್ಟ ರೊಟ್ಟಿ ಸವಿಯುವ ಮೂಲಕ ಜತೆಯಲ್ಲಿದ್ದ ಮಗಳಿಗೂ ಜೀವನ ಪಾಠ ಹೇಳಿ ಕೊಟ್ಟಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

Follow Us:
Download App:
  • android
  • ios