Asianet Suvarna News Asianet Suvarna News

ಚಿಕ್ಕಮಗಳೂರು: ಸತತ ಮಳೆ, ಕೊಚ್ಚಿ ಹೋಯ್ತು ಈರುಳ್ಳಿ ಬೆಳೆ

ಕಡೂರು ತಾಲೂಕಿನಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಮಧ್ಯಾಹ್ನದಿಂದ ಉತ್ತಮ ಮಳೆಯಾಗಿದೆ. ಸತತ ಮಳೆ ಈರುಳ್ಳಿಗೆ ಕಂಟಕವಾಗಿ ಪರಿಣಮಿಸಿದ್ದು, ಈಗಿರುವ ಉತ್ತಮ ಧಾರಣೆ ಕೈ ತಪ್ಪುವುದೇ ಎಂಬ ಆತಂಕ ಎದುರಾಗಿದೆ. ಅಂತರ್ಜಲಮಟ್ಟಹೆಚ್ಚಾಗುತ್ತಿರುವ ಸಂತಸ ಒಂದೆಡೆಯಾದರೆ, ಇತ್ತ ಮಳೆಯಿಂದಾಗಿ ನೂರಾರು ಹೆಕ್ಟೇರ್‌ ಈರುಳ್ಳಿ ಬೆಳೆ ಹಾಳಾಗಿ, ನೀರು ಪಾಲಾಗುತ್ತಿದೆ.

onion crops damaged due to heavy rain
Author
Bangalore, First Published Oct 31, 2019, 3:10 PM IST

ಚಿಕ್ಕಮಗಳೂರು(ಅ.31): ಕಡೂರು ತಾಲೂಕಿನಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಮಧ್ಯಾಹ್ನದಿಂದ ಉತ್ತಮ ಮಳೆಯಾಗಿದೆ. ಸತತ ಮಳೆ ಈರುಳ್ಳಿಗೆ ಕಂಟಕವಾಗಿ ಪರಿಣಮಿಸಿದ್ದು, ಈಗಿರುವ ಉತ್ತಮ ಧಾರಣೆ ಕೈ ತಪ್ಪುವುದೇ ಎಂಬ ಆತಂಕ ಎದುರಾಗಿದೆ.

ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಅಂತರ್ಜಲಮಟ್ಟಹೆಚ್ಚಾಗುತ್ತಿರುವ ಸಂತಸ ಒಂದೆಡೆಯಾದರೆ, ಇತ್ತ ಮಳೆಯಿಂದಾಗಿ ನೂರಾರು ಹೆಕ್ಟೇರ್‌ ಈರುಳ್ಳಿ ಬೆಳೆ ಹಾಳಾಗಿ, ನೀರು ಪಾಲಾಗುತ್ತಿದೆ.

ನಾಯಿ ಬಾಲಕ್ಕೆ ಪಟಾಕಿ ಕಟ್ಟಿವಿಕೃತಿ: ಮೂವರು ವಿದ್ಯಾರ್ಥಿಗಳ ವಶ

ಹಿರೇನಲ್ಲೂರು ಮತ್ತು ಚೌಳಹಿರಿಯೂರು ಹೋಬಳಿಗಳಲ್ಲಿ ಹೆಚ್ಚು ಈರುಳ್ಳಿ ಬೆಳೆಯಲಾಗಿದ್ದು, ಮಳೆಗೆ ಅಪಾರ ಪ್ರಮಾಣದ ಈರುಳ್ಳಿ ಹಾಳಾಗಿದೆ. ಈಗಾಗಲೇ 1 ಕೆ.ಜಿ.ಗೆ .30 ರಿಂದ .35 ಧಾರಣೆ ಇದೆ. ಸಾವಿರಾರು ಹೆಕ್ಟೇರ್‌ನಲ್ಲಿದ್ದ ಈರುಳ್ಳಿಯಲ್ಲಿ ಕೆಲವೆಡೆ ಈರುಳ್ಳಿ ಕಿತ್ತು ರೈತರು ಬಚಾವ್‌ ಆಗಿದ್ದಾರೆ. ಇನ್ನೂ ಹಚ್ಚಿನ ಧಾರಣೆ ಬರಲಿ ಎಂದು ಬಿಟ್ಟುಕೊಂಡಿದ್ದ ರೈತರಿಗೆ ಮಳೆಯಿಂದಾಗಿ ಈರುಳ್ಳಿ ಕೀಳಲು ಕೂಡ ಸಾಧ್ಯವಾಗುತ್ತಿಲ್ಲ.

ಈಗಾಗಲೇ ಈರುಳ್ಳಿಯನ್ನು ಕೊಯ್ಲು ಮಾಡಿ, ರಾಶಿ ಹಾಕಿದೆಡೆ ಮಳೆನೀರು ಆವರಿಸಿದೆ. ನೂರಾರು ಹೆಕ್ಟೇರ್‌ನಷ್ಟುಈರುಳ್ಳಿ ಕೊಳೆತುಹೋಗುತ್ತಿದೆ. ಈರುಳ್ಳಿ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇರುವಾಗಲೇ ಮಳೆ ಮಾರಕವಾಗಿ ಪರಿಣಮಿಸಿದೆ. ಎಚ್‌.ತಿಮ್ಮಾಪುರ ಗ್ರಾಮವೊಂದರಲ್ಲೇ 150 ಹೆಕ್ಟೇರ್‌ ಈರುಳ್ಳಿ ಹಾಳಾಗಿದೆ. ಇನ್ನು ಕ್ವಿಂಟಲ್‌ಗೆ .3500ಕ್ಕೆ ಹೆಚ್ಚಿರುವ ರಾಗಿಬೆಳೆ ಬೆಳೆದ ರೈತರ ಸಂಕಷ್ಟಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಕಳೆದ 3 ತಿಂಗಳಿನಿಂದ ಉತ್ತಮ ಕಾಳುಕಟ್ಟುವ ಮೂಲಕ ಕುಯ್ಲಿಗೆ ಬಂದಿದ್ದ ರಾಗಿ ಸತತ ಮಳೆಗೆ ಮಕಾಡೆ ಮಲಗಿದೆ. ಗ್ರಾಮೀಣ ಪ್ರದೇಶಗಳಲ್ಲಂತೂ ಹೆಚ್ಚಿರುವ ಮಳೆಯಿಂದ ಜಮೀನುಗಳಿಗೆ ನೀರು ನುಗ್ಗಿ ರಾಗಿ ನೀರು ಪಾಲಾಗಿದೆ. ಒಂದೆರಡು ದಿನ ಹಗಲು ಹೊತ್ತು ಮಳೆ ಬಿಡುವು ನೀಡಿದ್ದು, ಮತ್ತೆ ನಿರಂತರವಾಗಿ ಬರುತ್ತಿದೆ. ಇದರಿಂದ ರಾಗಿ ಕುಯ್ಯಲು ಆಗದ ಸ್ಥಿತಿ ಉಂಟಾಗಿದೆ.

‘ಟಿಪ್ಪು ಪಠ್ಯ ತೆಗೆದು ಹಾಕುವ ಕುರಿತು ಸಿಎಂ ನಿರ್ಧಾರವೇ ಅಂತಿಮ’.

ಸದ್ಯಕ್ಕೆ ಬಯಲು ಪ್ರದೇಶದ ಪೂರ್ವ ಮುಂಗಾರಿನ ಪ್ರಮುಖ ಬೆಳೆಗಳಾದ ಈರುಳ್ಳಿ, ರಾಗಿ ಕತೆ ಇದಾಗಿದೆ. ಇದರ ಜೊತೆಗೆ ಭದ್ರಾ ಜಲಾಶಯದ ನೀರೂ ಸಹ ಸೇರಿಕೊಂಡು ಅಜ್ಜಂಪುರ, ಶಿವನಿ, ಚಿಕ್ಕಾನವಂಗಲ ಸೇರಿ ವಿವಿಧ ಕೆರೆಗಳಿಂದ ಕುಕ್ಕಸಮುದ್ರ ಕೆರೆಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಸುತ್ತಮುತ್ತಲಿನ ಅನೇಕ ತೆಂಗಿನ ತೋಟಗಳಿಗೆ ಹಾಗೂ ರಾಗಿ ಮತ್ತಿತರ ಬೆಳೆಗಳಿಗೆ ಭಾರಿ ಪ್ರಮಾಣದ ನೀರು ಹರಿದಿರುವುದರಿಂದ ಅಪಾರ ಪ್ರಮಾಣದ ನಷ್ಟಉಂಟಾಗಿದೆ.

Follow Us:
Download App:
  • android
  • ios