Asianet Suvarna News Asianet Suvarna News

ಮೋದಿ ದೂರದೃಷ್ಟಿ: ಮತ್ತೊಂದು ಮಹಾ ಬ್ಯಾಂಕ್ ಸೃಷ್ಟಿ!

ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ವಿಲೀನ! ಏ.1, 2019ಕ್ಕೆ ಕಾರ್ಯಾರಂಭ ಮಾಡುವ ಭರವಸೆ! ದೇಶದ ಮೂರನೇ ಅತೀ ದೊಡ್ಡ ಬ್ಯಾಂಕ್ ರಚೆನಯಾಗಲಿದೆ! ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಮೂರೂ ಬ್ಯಾಂಕ್ ಗಳ ಒಪ್ಪಿಗೆ! ಮೂರೂ ಬ್ಯಾಂಕ್ ಗಳ ವಿಲೀನದಿಂದ ದೇಶದ ಆರ್ಥಿಕತೆಗೆ ನೆರವು

Vijaya Bank, BoB, Dena, to Start Operations from April 1
Author
Bengaluru, First Published Nov 30, 2018, 1:54 PM IST

ನವದೆಹಲಿ(ನ.30): ಕರ್ನಾಟಕದಲ್ಲಿ ಸ್ಥಾಪಿತವಾದ ದೇಶದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಒಂದಾಗಿರುವ ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ವಿಲೀನ ಪ್ರಕ್ರಿಯೆ ಮುಗಿದಿದ್ದು, ಮುಂದಿನ ವರ್ಷದ ಏ.1 ರಂದು ಕಾರ್ಯಾರಂಭ ಮಾಡಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಅತ್ತಾವರ ಬಾಲಕೃಷ್ಣ ಶೆಟ್ಟಿ ಎನ್ನುವವರಿಂದ ಅಕ್ಟೋಬರ್ 23, 1931ರಂದು ಸ್ಥಾಪಿತವಾಗಿದ್ದ ವಿಜಯಾ ಬ್ಯಾಂಕ್ 87 ವರ್ಷದ ಸುದೀರ್ಘ ಇತಿಹಾಸ ಹೊಂದಿದೆ.

ದೇನಾ ಬ್ಯಾಂಕ್ ಕೇಂದ್ರ ಸರ್ಕಾರದ ಸೂಚನೆಯಂತೆ ಇತರೆ ಬ್ಯಾಂಕ್ ಗಳೊಡನೆ ವಿಲೀನವಾಗಲು ಒಪ್ಪಿಗೆ ಸೂಚಿಸಿದೆ. ಅದರಂತೆ ವಿಜಯಾ ಬ್ಯಾಂಕ್ ಕೂಡ ವಿಲೀನ ಪ್ರಕ್ರಿಯೆ ಕುರಿತಂತೆ ತನ್ನ ನಿಲುವನ್ನು ಈಗಾಗಲೇ ಪ್ರಕಟಿಸಿದೆ.

ಸೆಬಿ ರೆಗ್ಯುಲೇಶನ್ಸ್ 30 ಎಲ್ ಒಡಿಆರ್ ರೆಗ್ಯುಲೇಶನ್ಸ್ 2015 ರ ಅನುಸಾರವಾಗಿ ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್ ವಿಲೀನಗೊಳರ್ಳಳಲಿವೆ. ಈ ಬ್ಯಾಂಕ್ ಗಳ ವಿಲೀನ ಜಾಗತಿಕ ಮಟ್ಟದ ಹೊಸ ಬ್ಯಾಂಕ್ ವೊಂದರ ರಚನೆಗೆ ಕಾರಣವಾಗಲಿದೆ.ಇದರಿಂದ ಭಾರತ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿಕೊಳ್ಳಲಿದೆ.

ಸರ್ಕಾರ ಈ ವಿಲೀನ ಪ್ರಸ್ತಾವನೆಯಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಎಚ್ ಡಿಎಫ್ ಸಿ ಬಳಿಕದ ಮೂರನೇ ಅತಿ ದೊಡ್ಡ ಬ್ಯಾಂಕ್ ವೊಂದರ ರಚನೆಯಾಗಿ ದೇಶದ ಆರ್ಥಿಕತೆಗೆ ನೆರವಾಗಲಿದೆ ಎಂದು ಆಶಿಸಲಾಗಿದೆ.

Follow Us:
Download App:
  • android
  • ios