Asianet Suvarna News Asianet Suvarna News

ತೈಲದರ ಬರೀ ಸುದ್ದಿ ಅನ್ನೋ ಮೂರ್ಖರು: ಇವ್ರೇ ಮೋದಿ ಹೇಳಿದ್ದ ಧೂರ್ತರು!

ಪೈಸೆಗಳ ಲೆಕ್ಕದಲ್ಲಿ ತೈಲದರ ಇಳಿದ್ರೆ ಸಿಟ್ಟು! ಗೊತ್ತಾ ಈ ಪೈಸೆಗಳ ಲೆಕ್ಕಾಚಾರದ ಅಸಲಿಯತ್ತು?! ತೈಲದರ ಇಳಿದರೂ, ಏರಿದರೂ ಸರ್ಕಾರವನ್ನು ಬೈಯ್ಯುವ ಚಾಳಿ! ವೈಯಕ್ತಿಕ ಲಾಭ ನಷ್ಟದ ಲೆಕ್ಕಾಚಾರದ ನಡುವೆ ದೇಶದ ಹಿತ ಮಾಯ

The Reality Behind Fuel Price Slash in Paise
Author
Bengaluru, First Published Nov 6, 2018, 3:55 PM IST

ನವದೆಹಲಿ(ನ.6): 'ಏನ್ ಮಹಾ 18 ಪೈಸೆಯೋ, 20 ಪೈಸೆಯೋ ಕಡಿಮೆಯಾದ್ರೆ ತೈಲದರದಲ್ಲಿ ಇಳಿಕೆ ಅನ್ನಕ್ಕಾಗತ್ತಾ?. ಈ ಪೈಸೆಗಳ ಲೆಕ್ಕಾಚಾರದಲ್ಲಿ ಇಳಿಕೆ ಮಾಡಿ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡ್ತಿವೆ ಸರ್ಕಾರಗಳು..'

ಇವು ಸಾಮಾನ್ಯವಾಗಿ ತೈಲದರದಲ್ಲಿ ಅಲ್ಪ ಇಳಿಕೆ ಕಂಡು ಬಂದಾಗ ಜನರಿಂದ ವ್ಯಕ್ತವಾಗುವ ಪ್ರತಿಕ್ರಿಯೆಗಳು. ಇದರಲ್ಲಿ ಹುರುಳಿಲ್ಲ ಅಂತಲ್ಲ. ಆದರೆ ಈ ಪೈಸೆಗಳ ಲೆಕ್ಕಾಚಾರ ದೇಶದ ಅರ್ಥ ವ್ಯವಸ್ಥೆ ಮೇಲೆ ಬೀರಹುದಾದ ಪರಿಣಾಮಗಳ ಕುರಿತು ಬಹುತೇಕರು ಯೋಚಿಸುವುದಿಲ್ಲ ಅಥವಾ ಈ ಕುರಿತು ಮಾಹಿತಿ ಇರುವುದಿಲ್ಲ ಎಂಬುದಕ್ಕೆ ಸಾಕ್ಷಿ ಇಂತಹ ಪ್ರತಿಕ್ರಿಯೆಗಳು.

ಪ್ರತೀ ಲೀಟರ್‌ಗೆ ಪೈಸೆಗಳ ಲೆಕ್ಕದಲ್ಲಿ ತೈಲದರ ಕಡಿತವಾದರೆ ಅದನ್ನು ಓರ್ವ ವ್ಯಕ್ತಿಯ ಲೆಕ್ಕಾಚಾರದಲ್ಲಿ ನೋಡುವುದು ನಮ್ಮ ಆರ್ಥಿಕತೆಯ ಕುರಿತ ಅಲ್ಪ ಜ್ಞಾನದ ಸಂಕೇತ. ಕಾರಣ ಪೈಸೆಗಳ ಲೆಕ್ಕಾಚಾರದಲ್ಲಿ ತೈಲದರ ಇಳಿದರೂ ಅದೂ ಇಡೀ ದೇಶಕ್ಕೆ ಅನ್ವಯವಾಗುತ್ತದೆ.

ಕೋಟಿಗಳ ಲೆಕ್ಕದಲ್ಲಿ ವಾಹನಗಳ ಸಂಖ್ಯೆ:

ಇನ್ನೂ ಸರಳ ರೀತಿಯಲ್ಲಿ ಹೇಳುವುದಾದರೆ 130 ಕೋಟಿಗೂ ಅಧಿಕ ಜನರಿರುವ ಈ ದೇಶದಲ್ಲಿ, 2016-17ರ ವರದಿಯಂತೆ ಸರಿ ಸುಮಾರು 25.3 ಮಿಲಿಯನ್ ಖಾಸಗಿ ವಾಹನಗಳು ಇವೆ. ಅದರಂತೆ 3.79 ಸಾರ್ವಜನಿಕ ಸಾರಿಗೆ ವಾಹನಗಳಿವೆ.

ಅಂದರೆ ಇಷ್ಟು ವಾಹನಗಳಿಗೆ ತೈಲ ಸರಬರಾಜು ಮಾಡುವ ಅನಿವಾರ್ಯತೆಗೆ ಮತ್ತು ದರ ಇಳಿಸುವ ಒತ್ತಡಕ್ಕೆ ಕೇಂದ್ರ ಸರ್ಕಾರ ಸಿಲುಕಿಕೊಂಡಿರುತ್ತದೆ. ಇನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರವನ್ನು ಆಧರಿಸಿ ಪೆಟ್ರೋಲ್, ಡೀಸೆಲ್ ದರ ನಿಗದಿಪಡಿಸುವ ಜವಾಬ್ದಾರಿ ಇರುತ್ತದೆ. ಮೇಲಾಗಿ ತೈಲ ಕಂಪನಿಗಳ ಹಿತ ಕಾಪಾಡಬೇಕಾದುದು ಸರ್ಕಾರವೊಂದರ ಆದ್ಯ ಕರ್ತವ್ಯವಾಗಿರುತ್ತದೆ.

ಪೈಸೆಗಳ ಲೆಕ್ಕದಲ್ಲಿ ತೈಲದರ ಇಳಿದಾಗ ಏನು ಮಹಾ ಎನ್ನುವವರು, ಇದರಿಂದ ನಮಗೇನು ಲಾಭ ಎಂದು ಕೇಳುವವರು 'ದೇಶ ನಮಗೇನು ಕೊಟ್ಟಿದೆ ಅನ್ನೋದಕ್ಕಿಂತ ದೇಶಕ್ಕೆ ನೀನೆನು ಕೊಟ್ಟಿರುವೆ?' ಎಂಬ ವ್ಯಾಖ್ಯೆಯನ್ನು ಮರೆತಂತೆ ಸರಿ. ಕೈಗೆಟಕುವ ದರದಲ್ಲಿ ತೈಲ ಪಡೆಯುವುದು ಪ್ರತಿಯೊಬ್ಬ ನಾಗರೀಕನ ಹಕ್ಕು ಹೌದಾದರೂ, ಅದಕ್ಕೆ ಹಿಡಿಯಬಹುದಾದ ಸಮಯವನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಇದರಲ್ಲಿ 'ಅರ್ಥ'ವಿದೆ:

ಇನ್ನು ತೈಲದರ ಇಳಿದಾಗ ಇದನ್ನೊಂದು ಕೇವಲ ಸುದ್ದಿಯನ್ನಾಗಿ ನೋಡುವವರು, ಕಚ್ಚಾ ತೈಲ ಆಮದಿನಿಂದ ಹಿಡಿದು, ತೈಲ ಶುದ್ಧೀಕರಣ, ದೇಶದ ಮೂಲೆ ಮೂಲೆಗೆ ತೈಲ ರವಾನೆ ಮತ್ತು ಕೊನೆಗೆ ಗ್ರಾಹಕನಿಗೆ ತೈಲವನ್ನು ತಲುಪಿಸುವ ಎಲ್ಲಾ ಹಂತಗಳೂ ದೇಶದ ಅರ್ಥ ವ್ಯವಸ್ಥೆಗೆ ಸಂಬಂಧಿಸಿದ್ದಾಗಿದ್ದು, ತೈಲದರ ಇಳಿಕೆ ದೇಶದ ಜಿಡಿಪಿ, ದೇಶದ ಆರ್ಥಿಕ ಅಭಿವೃಧ್ಧಿ ಮತ್ತು ಅದರಿಂದ ನಾಗರೀಕನಿಗಾಗುವ ಲಾಭದ ಅರ್ಥಶಾಸ್ತ್ರದ ಮೂಲ ತತ್ವಗಳನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ.

Follow Us:
Download App:
  • android
  • ios