Asianet Suvarna News Asianet Suvarna News

ಅನಿಲ್ ಫಿನಿಷ್: ಸಾಲ ತೀರಿಸಿ ಇಲ್ಲ ಜೈಲಿಗೆ ಹೋಗಿ ಎಂದ ಸುಪ್ರೀಂ!

ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿಗೆ ಸುಪ್ರೀಂ ತಪರಾಕಿ| ಎರಿಕ್ಸನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್‌ ಅಂಬಾನಿಗೆ ಭಾರೀ ಮುಖಭಂಗ| ಅನಿಲ್ ಎರಿಕ್ಸನ್ ಕಂಪನಿಗೆ ಸಾಲ ತೀರಿಸಲೇಬೇಕು| ಸಾಲ ತೀರಿಸಿ ಇಲ್ಲ ಜೈಲಿಗೆ ಹೋಗಿ ಎಂದ ಸುಪ್ರೀಂ ಕೋರ್ಟ್| ನಾಲ್ಕು ವಾರದಲ್ಲಿ 450 ಕೋಟಿ ರೂ. ಹಣ ಪಾವತಿಸಬೇಕು ಅನಿಲ್|

Supreme Court Says Anil Ambani Guilty Of Contempt
Author
Bengaluru, First Published Feb 20, 2019, 12:02 PM IST

ನವದೆಹಲಿ(ಫೆ.20): ರಿಲಯನ್ಸ್ ಕಮ್ಯುನಿಕೇಶನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಪಾಲಿಗೆ ಇದು ನಿಜಕ್ಕೂ ದುರ್ದಿನ. ಕಳೆದ ಕೆಲವು ದಿನಗಳಿಂದ ಮೂಡಿದ್ದ ಆತಂಕ ಇಂದು ನಿಜವಾಗಿ ಹೋಗಿದೆ. ಎರಿಕ್ಸನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್‌ ಅಂಬಾನಿಗೆ ಭಾರೀ ಮುಖಭಂಗವಾಗಿದೆ. 

ಎರಿಕ್ಸನ್‌ ಕಂಪನಿಗೆ ನೀಡಬೇಕಾಗಿರುವ ಹಣವನ್ನು ಪಾವತಿಸುವಂತೆ ಅನಿಲ್‌ ಅಂಬಾನಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದ್ದು, ನಾಲ್ಕು ವಾರದಲ್ಲಿ 450 ಕೋಟಿ ರೂ. ಹಣ ಹಿಂದಿರುಗಿಸಿ ಅಥವಾ ಜೈಲು ಶಿಕ್ಷೆ ಅನುಭವಿಸಿ ಎಂದು ಸುಪ್ರೀಂ ಕೋರ್ಟ್‌ ನ್ಯಾಯಪೀಠ ಆದೇಶಿಸಿದೆ.

ಎರಿಕ್ಸನ್‌ ಪ್ರಕರಣದಲ್ಲಿ ಅನಿಲ್ ಅಂಬಾನಿ ನ್ಯಾಯಾಂಗ ನಿಂದನೆ ಮಾಡಿರುವುದು ಸ್ಪಷ್ಟವಾಗಿದ್ದು, ಈ ಕೂಡಲೇ ಅನಿಲ್ ಹಣ ಹಿಂದಿರುಗಿಸಬೇಕು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. 

ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಕಂಪನಿ ಉದ್ದೇಶಪೂರ್ವಕವಾಗಿ ಹಣ ಹಿಂದಿರುಗಿಸಿಲ್ಲ. ಈ ಹಿಂದೆ ಹಲವು ಬಾರಿ ಸೂಚನೆ ನೀಡಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ ಎಂದು ಸುಪ್ರೀಂಕೋರ್ಟ್‌ ಸಮಾಧಾನ ವ್ಯಕ್ತಪಡಿಸಿದೆ.

ಹಣ ಪಾವತಿಸಲು ಕಾಲಾವಕಾಶ ಬೇಕು ಎಂದು ರಿಲಯನ್ಸ್‌ ಸಂಸ್ಥೆ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್‌ ಪೀಠ ಸ್ಪಷ್ಟವಾಗಿ ತಳ್ಳಿ ಹಾಕಿದ್ದು, ಹಣ ಪಾವತಿಸಲೇಬಾಕಾದ ಒತ್ತಡದಕ್ಕೆ ಅನಿಲ್ ಅಂಬಾನಿ ಸಿಲುಕಿದ್ದಾರೆ.

ಎಲ್ಲಾ ಮಾರಿಬಿಡಿ: ದಿವಾಳಿಯಾದ ಅಂಬಾನಿ ಮಾಡ್ತಿದ್ದಾರೆ ಗಡಿಬಿಡಿ!

ರಾಮ್-ಲಖನ್ ಕಹಾನಿ: ಅನಿಲ್ ಹಣೆಬರಹ ಬದಲಿಸಿದ ಮುಖೇಶ್ ಅಂಬಾನಿ!

ಅಣ್ಣನ ಅದೊಂದು ಮಾತು ಕೇಳಿದ್ದರೆ: ಅನಿಲ್ ಬರ್ತಿಲಿಲ್ಲ ಬೀದಿಗೆ!

ತಮ್ಮ ಸಂಕಷ್ಟದಲ್ಲಿ, ಮಗ ‘ಆಕಾಶ’ದಲ್ಲಿ: ಮುಖೇಶ್ ಬ್ಯುಸಿ ಮದುವೆಯಲ್ಲಿ!

ತಮ್ಮನ ಕಣ್ಣೀರೇ ಅಣ್ಣನಿಗೆ ಪನ್ನೀರು: ಅಂಬಾನಿ ಆಟ ಅಬ್ಬಬ್ಬಾ!

ನಾನೀಗ ಯಾರೂ ಅಲ್ಲ, ನನ್ನಲ್ಲೀಗ ಏನೂ ಇಲ್ಲ: ಅನಿಲ್ ಅತ್ತಿದ್ದು ಕೇಳಸ್ತಲ್ವಾ?

Follow Us:
Download App:
  • android
  • ios