Asianet Suvarna News Asianet Suvarna News

ದಕ್ಷಿಣದವರನ್ನು‘ ಮದ್ರಾಸಿ’ ಎಂದ ಇನ್ಫೋಸಿಸ್ ಸಿಇಒ: ಷೇರು ಕುಸಿತಕ್ಕೆ ಲಬೋ ಲಬೋ!

ಮತ್ತೆ ಬೇಡದ ಕಾರಣಕ್ಕೆ ಸುದ್ದಿಯಾಯ್ತು ಇನ್ಫೋಸಿಸ್| ಇನ್ಫೋಸಿಸ್ ಸಿಇಒ ಸಲೀಲ್ ಪಾರೇಖ್ ವಿರುದ್ಧ ದೂರು| ಸಂಸ್ಥೆಯ ಆರ್ಥಿಕ ಚಟುವಟಿಕೆ ಕುರಿತು ಸುಳ್ಳು ದಾಖಲೆ ಸೃಷ್ಟಿ ಆರೋಪ| ದಕ್ಷಿಣ ಭಾರತ ಮೂಲದ ಅಧಿಕಾರಿಗಳನ್ನು ‘ಮದ್ರಾಸಿ’ ಎಂದು  ಅಣಕಿಸಿದ ಆರೋಪ | ಇನ್ಫೋಸಿಸ್ ಸಂಸ್ಥೆಯ ಷೇರು ಮೌಲ್ಯದಲ್ಲಿ ಭಾರೀ ಕುಸಿತ| ಮುಂಬೈ ಷೇರು ಮಾರುಕಟ್ಟೆಯಲ್ಲಿ ಶೇ. 16ರಷ್ಟು ಕುಸಿತ ಕಂಡ ಇನ್ಫೋಸಿಸ್ ಷೇರು ಮೌಲ್ಯ| ಆಂತರಿಕ ತನಿಖಾ ಸಮಿತಿ ರಚನೆಯ ಭರವಸೆ ನೀಡಿದ ನಂದನ್ ನೀಲೇಕಣಿ|

Shares Of Infosys Plunge After Complaints Against CEO
Author
Bengaluru, First Published Oct 22, 2019, 3:44 PM IST

ಬೆಂಗಳೂರು(ಅ.22): ಇನ್ಫೋಸಿಸ್ ಸಿಇಒ ವಿರುದ್ಧ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ, ಸಂಸ್ಥೆಯ ಷೇರು ಮೌಲ್ಯ ಭಾರೀ ಕುಸಿತ ಕಂಡಿದೆ.

ಇನ್ಫೋಸಿಸ್ ಸಿಇಒ ಸಲೀಲ್ ಪಾರೇಖ್ ಸಂಸ್ಥೆಯ ಆರ್ಥಿಕ ಚಟುವಟಿಕೆ ಬಗ್ಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವಂಚಿಸಿದ್ದಾರೆ ಎಂದು ಉದ್ಯೋಗಿಯೊಬ್ಬರು ಪತ್ರ ಮುಖೇನ ದೂರಿದ್ದಾರೆ. 

ಲಾಭದ ಸಂಖ್ಯೆ ಮತ್ತು ಪ್ರಮಾಣ ಹೆಚ್ಚಳವಾಗಿದೆ ಎಂದು ತೋರಿಸಲು ವಾಮಮಾರ್ಗ ಬಳಿಸಲಾಗಿದೆ ಎಂದು ಅಮೆರಿಕದ ಷೇರುಪೇಟೆ ಸೆಕ್ಯುರಿಟೀಸ್‌ಗೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಂಸ್ಥೆಯ ಯ ಷೇರುಗಳು ಬರೊಬ್ಬರಿ ಶೇ.16ರಷ್ಟು ಕುಸಿತ ಕಂಡಿದ್ದುಸ್ಕಳೆದ 6 ವರ್ಷಗಳಲ್ಲೇ ಅತ್ಯಂತ ಗರಿಷ್ಠ ಮಟ್ಟದ ಕುಸಿತ ದಾಖಲಿಸಿದೆ.

ಇಂದು ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಇನ್ಫೋಸಿಸ್ 109.25 ರುಪಾಯಿ ಕುಸಿತ ಕಂಡು ಕೇವಲ 658.50 ರೂ. ಮೌಲ್ಯ ಉಳಿಸಿಕೊಂಡಿತು. ಇನ್ನು ಎನ್ಎಸ್ಇಯಲ್ಲಿ 110.50 ರೂ. ಕಳೆದುಕೊಂಡು ಶೇ. 14.33% ಕುಸಿದು 657.85 ರೂ. ವ್ಯಾವಹಾರಿಕ ಮೌಲ್ಯ ಉಳಿಸಿಕೊಂಡಿದೆ. 

ಇನ್ನು ಸಲೀಲ್ ಪಾರೇಖ್ ವಿರುದ್ಧ ಕೇಳಿ ಬಂದಿರುವ ದೂರನ್ನು ಗಂಭಿರವಾಗಿ ಪರಿಗಣಿಸಿರುವ ಇನ್ಫೋಸಿಸ್, ಆಂತರಿಕ ತನಿಖಾ ಸಮಿತಿ ರಚನೆಗೆ ಮುಂದಾಗಿದೆ.

ಈ ಕುರಿತು ಖುದ್ದು ಮಾಹಿತಿ ನೀಡಿರುವ ಇನ್ಫೋಸಿಸ್ ಮುಖ್ಯಸ್ಥ ನಂದನ್ ನೀಲೇಕಣಿ,  ಸಂಸ್ಥೆಯ ಆಡಿಟ್ ಸಮಿತಿಗೆ ಬಂದಿರುವ ದೂರಿನ ತನಿಖೆ ಈಗಾಗಲೇ ಆರಂಭವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಸ್ಥೆಯ ಆಂತರಿಕ ಸಭೆಗಳಲ್ಲಿ ಸಲೀಲ್ ಪಾರೇಖ್ ದಕ್ಷಿಣ ಭಾರತದ ಅಧಿಕಾರಿಗಳನ್ನು ಮದ್ರಾಸಿ ಎಂದು ಸಂಬೋಧಿಸಿ ಕಿಚಾಯಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖವಾಗಿ ಸಂಸ್ಥೆಯ ಸ್ವತಂತ್ರ ನಿರ್ದೇಶಕರಾದ ಡಿ. ಸುಂದರಂ ಹಾಗೂ ಡಿಎನ್ ಪ್ರಹ್ಲಾದ್ ಅವರನ್ನು ಸಲೀಲ್ ಮದ್ರಾಸಿಗಳು ಎಂದು ಇತರ ಉದ್ಯೋಗಿಗಳ ಮುಂದೆ ಕರೆದು ಅಣಕಿಸುತ್ತಿದ್ದರು ಎಂದು ಆರೋಪಿಸಲಾಗಿದೆ. 

ಅಲ್ಲದೇ ಮತ್ತೋರ್ವ ಸ್ವತಂತ್ರ ನಿರ್ದೇಶಕ ಬಯೋಕಾನ್ ಮುಖ್ಯಸ್ಥ ಕಿರಣ್ ಮಜುಂದಾರ್ ಶಾ ಅವರನ್ನು ‘ದಿವಾ’ ಎಂದು ಸಲೀಲ್ ಕುಹುಕವಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಅ.22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios