Asianet Suvarna News Asianet Suvarna News

ಊರ್ಜಿತ್ ಹೋದ್ರು, ಮಕಾಡೆ ಮಲಗಿತು ಸೆನ್ಸೆಕ್ಸ್!

ಆರ್‌ಬಿಐ ಗರ್ವನರ್ ಸ್ಥಾನಕ್ಕೆ ಊರ್ಜಿತ್ ಪಟೇಲ್ ರಾಜೀನಾಮೆ ಹಿನ್ನೆಲೆ| ಬರೋಬ್ಬರಿ 500 ಅಂಕ ಕುಸಿದ ಮುಂಬೈ ಷೇರು ಮಾರುಕಟ್ಟೆ| ದಿಢೀರ್ ಸೆನ್ಸೆಕ್ಸ್ ಕುಸಿತಕ್ಕೆ ಷೇರು ಮಾರುಕಟ್ಟೆ ತಲ್ಲಣ| ಪಂಚ ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಸಪ್ಪೆ| ರೂಪಾಯಿ ಮೌಲ್ಯದಲ್ಲೂ ಗಮನಾರ್ಹ ಕುಸಿತ

Sensex Tanks Over 500 Points on State Poll Results
Author
Bengaluru, First Published Dec 11, 2018, 11:26 AM IST

ಮುಂಬೈ(ಡಿ.11): ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಮತ್ತು ಆರ್ ಬಿಐ ಗರ್ವನರ್ ಊರ್ಜಿತ್ ಪಟೇಲ್ ರಾಜೀನಾಮೆ ಪರಿಣಾಮ ಭಾರತೀಯ ಷೇರುಮಾರುಕಟ್ಟೆಯ ಮೇಲೂ ಆಗಿದೆ.

ಇಂದು ವಹಿವಾಟು ಆರಂಭಿಸುತ್ತಿದ್ದಂತೇ ಮುಂಬೈ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಕುಸಿತ ಕಂಡಿದೆ. ಆ ಮೂಲಕ 34,458.86 ಅಂಕಗಳಲ್ಲಿ ಸೆನ್ಸೆಕ್ಸ್ ವಹಿವಾಟು ನಡೆಸುತ್ತಿದೆ. 

ಅಂತೆಯೇ ನಿಫ್ಟಿ ಕೂಡ 99.35 ಅಂಕಗಳ ಕುಸಿತ ಕಂಡಿದ್ದು, 10,391.05 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.

ಪ್ರಮುಖವಾಗಿ ಇಂದಿನ ಚುನಾವಣಾ ಫಲಿತಾಂಶ ಷೇರು ಮಾರುಕಟ್ಟೆ ಮೇಲೆ ನೆರ ಪರಿಣಾಮ ಬೀರಿದ್ದು, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಘಡದಲ್ಲಿ ಆಡಳಿತಾ ರೂಢ ಬಿಜೆಪಿ ಪಕ್ಷ ಹಿನ್ನಡೆ ಅನುಭಿಸಿದೆ.

ಅದರಂತೆ ಆರ್ ಬಿಐ ಗವರ್ವನರ್ ಸ್ಥಾನಕ್ಕೆ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಕಾರಣಕ್ಕೂ ಸೆನ್ಸೆಕ್ಸ್ ಇಳಿಕೆಯಾಗಿದೆ ಎನ್ನಲಾಗಿದೆ. ಇದೇ ವೇಳೆ ರೂಪಾಯಿ ಮೌಲ್ಯದಲ್ಲೂ ಭಾರೀ ಇಳಿಕೆ ಕಂಡುಬಂದಿದ್ದು, ಇಂದು 61 ಪೈಸೆಗಳಷ್ಟು ಕುಸಿತ ದಾಖಲಾಗಿದೆ. 

Follow Us:
Download App:
  • android
  • ios