Asianet Suvarna News Asianet Suvarna News

ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭ: ಮುಗಿಲೆತ್ತರಕ್ಕೆ ಸೆನ್ಸೆಕ್ಸ್!

ಅತ್ತ ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡನೆ| ಇತ್ತ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಅಂಕ ಏರಿಕೆ| ಷೇರುಮಾರುಕಟ್ಟೆ ಮೇಲೆ ಬಜೆಟ್ ಸಕಾರಾತ್ಮಕ ಪರಿಣಾಮ| ಸೆನ್ಸೆಕ್ಸ್ 160 ಅಂಕಗಳ ಏರಿಕೆಯೊಂದಿಗೆ 36,448.30 ಅಂಕಗಳಿಗೆ ಏರಿಕೆ| ನಿಫ್ಟಿ 57 ಅಂಕಗಳ ಏರಿಕೆಯೊಂದಿಗೆ 10,869 ಅಂಕಗಳಿಗೆ ಏರಿಕೆ

Sensex Over 100 Points, Nifty At 10,870
Author
Bengaluru, First Published Feb 1, 2019, 11:17 AM IST

ಮುಂಬೈ(ಫೆ.01): ಹಾಲಿ ಎನ್‌ಡಿಎ ಸರ್ಕಾರ ಕೊನೆಯ ಬಜೆಟ್ ಮಂಡನೆ ಆರಂಭವಾಗುತ್ತಿದ್ದಂತೆಯೇ, ಇತ್ತ ಭಾರತೀಯ ಷೇರುಮಾರುಕಟ್ಟೆ ಮೇಲೆ ಬಜೆಟ್ ಸಕಾರಾತ್ಮಕ ಪರಿಣಾಮ ಬೀರಿದೆ. ಸೆನ್ಸೆಕ್ಸ್ 160 ಅಂಕಗಳ ಏರಿಕೆ ಕಂಡಿದೆ.

ಇಂದು ಷೇರುಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಭಾರತೀಯ ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಪರಿಣಾಮ ಸೆನ್ಸೆಕ್ಸ್ 160 ಅಂಕಗಳ ಏರಿಕೆಯೊಂದಿಗೆ 36,448.30 ಗಳಿಗೆ ಏರಿಕೆಯಾಗಿದೆ.

ಅಂತೆಯೇ ನಿಫ್ಟಿ ಕೂಡ 57 ಅಂಕಗಳ ಏರಿಕೆ ಕಂಡಿದ್ದು, 10,869 ಅಂಕಗಳಿಗೆ ಏರಿಕೆಯಾಗಿದೆ. ಇನ್ನು ಇಂದಿನ ವಹಿವಾಟಿನಲ್ಲಿ ದೇಶೀಯ ಷೇರುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಪರಿಣಾಮ ಭಾರತೀಯ ಷೇರುಗಳ ಮೌಲ್ಯ ಕೂಡ ಹೆಚ್ಚಾಗಿದೆ. 

ಇನ್ನು ಮಾರುಕಟ್ಟೆ ಚೇತರಿಕೆ ಕಾಣುವ ಮೂಲಕ ಕಳೆದ ನಾಲ್ಕು ತಿಂಗಳಲ್ಲೇ ಸೂಚ್ಯಂಕ ಗರಿಷ್ಠ ಮಟ್ಟಕ್ಕೆ ತಲುಪಿದೆ.
 

Follow Us:
Download App:
  • android
  • ios