Asianet Suvarna News Asianet Suvarna News

30 ಲಕ್ಷ ರೂ. ಸಾಲ ಇದೆಯಾ?: ಶನಿವಾರಕ್ಕೆ ಪಾಯಸ ಮಾಡ್ಬಿಡಿ!

ಕೇಂದ್ರದ ಮಧ್ಯಂತರ ಬಜೆಟ್ ಎಫೆಕ್ಟ್ ನಿರಂತರ| ಒಂದಾದರ ಮೇಲೊಂದರಂತೆ ಸಿಹಿ ಸುದ್ದಿಗಳ ಸುರಿಮಳೆ| ಕೆಲ ದಿನಗಳ ಹಿಂದಷ್ಟೇ ರೆಪೋ ದರ ಕಡಿತಗೊಳಿಸಿದ್ದ ಆರ್ ಬಿಐ| ಗೃಹಸಾಲದ ಬಡ್ಡಿದರ ಕಡಿತಗೊಳಿಸಿದ ಎಸ್ ಬಿಐ| 30 ಲಕ್ಷ ರೂ.ವರೆಗೆ ಗೃಹ ಸಾಲದ ಮೇಲಿನ ಬಡ್ಡಿದರ ಶೇ.0.05ರಷ್ಟು ಕಡಿತ

SBI Reduces Interest Rate For Home Loans Upto Rs 30 Lakhs
Author
Bengaluru, First Published Feb 9, 2019, 2:07 PM IST

ಮುಂಬೈ(ಫೆ.09): ಎಲ್ಲಿ ನೋಡಿದರೂ ಸಿಹಿ ಸುದ್ದಿಗಳದ್ದೇ ಕಾರುಬಾರು. ಅದರಲ್ಲೂ ಕೇಂದ್ರದ ಮಧ್ಯಂತರ ಬಜೆಟ್ ಮಂಡನೆಯಾದ ಬಳಿಕ, ಒಂದಾದ ಮೇಲೊಂದರಂತೆ ಸರ್ಕಾರಿ ಸಂಸ್ಥೆಗಳು ಜನತೆಗೆ ಸಿಹಿ ಸುದ್ದಿ ನೀಡಲು ಪೈಪೋಟಿಗಿಳಿದಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿತ್ತೀಯ ನೀತಿಯನ್ನು ಪ್ರಕಟಿಸಿದ ಬೆನ್ನಲ್ಲೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 30 ಲಕ್ಷ ರೂ.ವರೆಗೆ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇಕಡಾ 0.05ರಷ್ಟು ಕಡಿತಗೊಳಿಸಿದೆ.

ಕೆಲ ದಿನಗಳ ಹಿಂದಷ್ಟೇ ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸಿತ್ತು. ಆಗಲೇ ಗೃಹ ಮತ್ತು ವಾಹನ ಸಾಲ ಅಗ್ಗವಾಗುವ ಸಂಭವನೀಯತೆಯನ್ನು ಗುರುತಿಸಲಾಗಿತ್ತು.

ಅದರಂತೆ ದೇಶದ ಬೃಹತ್ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಸ್‌ಬಿಐ ಇದೀಗ 30 ಲಕ್ಷ ರೂ.ವರೆಗೆ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇಕಡಾ 0.05ರಷ್ಟು ಕಡಿತಗೊಳಿಸಿದೆ.

ಆದರೆ ಆರ್‌ಬಿಐ ರೆಪೋ ದರ ಕಡಿತಗೊಳಿಸಿದ್ದರೂ, ಠೇವಣಿ ಮೇಲಿನ ಬಡ್ಡಿದರವನ್ನು ಎಸ್‌ಬಿಐಗೆ ಕಡಿತಗೊಳಿಸುವುದು ಕಷ್ಟವಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

Follow Us:
Download App:
  • android
  • ios