Asianet Suvarna News Asianet Suvarna News

ಭಾರತದ ಆರ್ಥಿಕತೆ ಹೇಗಿರಬೇಕು?: ಭಾಗವತ್ ಮಾತು ಮಾತ್ರ ಕೇಳಬೇಕು!

ಭಾರತದ ಆರ್ಥಿಕತೆ ಕುರಿತು ಮೋಹನ್ ಭಾಗವತ್ ಮುನ್ನೋಟ| ಸ್ವದೇಶಿ ಆರ್ಥಿಕ ನೀತಿಯೊಂದೇ ಹಿಂಜರಿಕೆಗೆ ಪರಿಹಾರ ಎಂದ RSS ಮುಖ್ಯಸ್ಥ| ‘ಸ್ವದೇಶಿ ಮಂತ್ರವೊಂದೇ ಭಾರತವನ್ನು ಆರ್ಥಿಕ ಹಿಂಜರಿತದಿಂದ ಪಾರು ಮಾಡಬಲ್ಲದು’| ಭಾರತಕ್ಕೆ ಹೊಸ ಆರ್ಥಿಕ ಮಾದರಿಯ ಅವಶ್ಯಕವಿದೆ ಎಂದ ಭಾಗವತ್|

RSS Chief Mohan Bhagwat Bats For Swadeshi Economic Vision
Author
Bengaluru, First Published Oct 8, 2019, 9:44 PM IST

ನಾಗ್ಪುರ್(ಅ.08): ದೇಶದ ಆರ್ಥಿಕತೆ ಹಿಂಜರಿಕೆ ಕಾಣುತ್ತಿರುವ ಬೆನ್ನಲ್ಲೇ, ದೇಶಕ್ಕೆ ಎಂತಹ ಆರ್ಥಿಕ ವ್ಯವಸ್ಥೆ ಸೂಕ್ತ ಎಂಬುದನ್ನು RSS ಮುಖ್ಯಸ್ಥ ಮೋಹನ್ ಭಾಗವತ್ ಬಿಚ್ಚಿಟ್ಟಿದ್ದಾರೆ.

ವಿಜಯದಶಮಿ ಅಂಗವಾಗಿ ನಾಗ್ಪುರದ ಆರ್‌ಎಸ್‌ಎಸ್‌ ಮುಖ್ಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಜಯದಶಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಭಾಗವತ್, ಆರ್ಥಿಕ ಹಿಂಜರಿಕೆ ತಾತ್ಕಾಲಿಕವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ವದೇಶಿ ಮಂತ್ರವೊಂದೇ ಭಾರತವನ್ನು ಆರ್ಥಿಕ ಹಿಂಜರಿತದಿಂದ ಪಾರು ಮಾಡಬಲ್ಲದು ಎಂದಿರುವ ಭಾಗವತ್, ವ್ಯಾಪಾರ ಒಪ್ಪಂದಗಳನ್ನು ನಮ್ಮದೇ ಆದ ನಿಯಮಗಳಿಗೆ ಅನುಗುಣವಾಗಿ ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ. 

ಆರ್ಥಿಕ ಹಿಂಜರಿಕೆ ಸದ್ಯ ಇಡೀ ವಿಶ್ವವನ್ನು ಕಾಡುತ್ತಿದ್ದು, ಭಾರತ ಇದಕ್ಕೆ ಹೊರತಾಗಿಲ್ಲ ಎಂದು ಭಾಗವತ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಸ್ವಂತ ಸೊಗಡಿನ ಆರ್ಥಿಕತೆ ಸಮಸ್ಯೆಗೆ ಪರಿಹಾರ ಎಂದು ಅವರು ಸಲಹೆ ನೀಡಿದ್ದಾರೆ.

ನಾವು ಸ್ವದೇಶಿ ನೀತಿಯನ್ನು ನಂಬುತ್ತೇವೆ. ಆದರೆ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಆಧುನಿಕ ಆರ್ಥಿಕ ನೀತಿ ಜೊತೆಗೆ ಸ್ವದೇಶಿ ನೀತಿಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಭಾಗವತ್ ಕರೆ ನೀಡಿದರು.

ಭಾರತಕ್ಕೆ ಹೊಸ ಆರ್ಥಿಕ ಮಾದರಿಯ ಅವಶ್ಯಕವಿದ್ದು, ಇದರಿಂದ ಕಡಿಮೆ ಶಕ್ತಿಯಿಂದ ಉತ್ತಮ ಕಾರ್ಯಗಳು ಹೊರಬೇಕಿದೆ ಎಂದು ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Follow Us:
Download App:
  • android
  • ios