Asianet Suvarna News Asianet Suvarna News

ಕೇರಳ ಬ್ಯಾಂಕ್‌ ಸ್ಥಾಪನೆಗೆ ಆರ್‌ಬಿಐ ಅನುಮೋದನೆ!

ಕೇರಳ ಬ್ಯಾಂಕ್‌ ಸ್ಥಾಪನೆಗೆ ಆರ್‌ಬಿಐ ಅನುಮೋದನೆ| ಕೇರಳ ಸರ್ಕಾರದ ಪ್ರಸ್ತಾಪಿತ ‘ಕೇರಳ ಬ್ಯಾಂಕ್‌’ ಸ್ಥಾಪನೆ ಪ್ರಕ್ರಿಯೆ ಮುಕ್ತಾಯದ ಬಳಿಕ ಈ ಬ್ಯಾಂಕ್‌ ರಾಜ್ಯದ ಅತಿದೊಡ್ಡ ಬ್ಯಾಂಕಿಂಗ್‌ ನೆಟ್‌ವರ್ಕ್ ಆಗಿ ಹೊರಹೊಮ್ಮಲಿದೆ

RBI approves merger of district co operative banks to form Kerala Bank
Author
Bangalore, First Published Oct 11, 2019, 9:06 AM IST

ತಿರುವನಂತಪುರ[ಅ.11]: ರಾಜ್ಯದ ಎಲ್ಲಾ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳನ್ನು ಒಗ್ಗೂಡಿಸಿಕೊಂಡು ತನ್ನದ್ದೇ ಆದ ಒಂದು ಸ್ವಂತ ಬ್ಯಾಂಕ್‌ ಸ್ಥಾಪನೆ ಮಾಡಬೇಕೆಂಬ ಕೇರಳ ಸರ್ಕಾರದ ದೀರ್ಘಾಕಾಲೀನ ಪ್ರಸ್ತಾವನೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ ಅನುಮೋದನೆ ನೀಡಿದೆ.

ಬಹುವಿವಾದಿತ ರಫೇಲ್ 12 ವರ್ಷದ ನಂತರ ಕೊನೆಗೂ ಇಂಡಿಯಾಕ್ಕೆ ಲಭ್ಯ

ಕೇರಳ ಸರ್ಕಾರದ ಪ್ರಸ್ತಾಪಿತ ‘ಕೇರಳ ಬ್ಯಾಂಕ್‌’ ಸ್ಥಾಪನೆ ಪ್ರಕ್ರಿಯೆ ಮುಕ್ತಾಯದ ಬಳಿಕ ಈ ಬ್ಯಾಂಕ್‌ ರಾಜ್ಯದ ಅತಿದೊಡ್ಡ ಬ್ಯಾಂಕಿಂಗ್‌ ನೆಟ್‌ವರ್ಕ್ ಆಗಿ ಹೊರಹೊಮ್ಮಲಿದೆ. ಇನ್ನು ಈ ಬಗ್ಗೆ ಗುರುವಾರ ಅತೀವ ಸಂತಸ ವ್ಯಕ್ತಪಡಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು, ‘ಕೇರಳ ಸಹಕಾರಿ ಬ್ಯಾಂಕ್‌ ಜೊತೆಗೆ 13 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಮೂಲಕ ಕೇರಳ ಬ್ಯಾಂಕ್‌ ಸ್ಥಾಪನೆ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ.

ಈ ಎರಡು ಬ್ಯಾಂಕ್‌ಗಳ ವಿಲೀನಕ್ಕೆ ಆರ್‌ಬಿಐ ನಕಾರ!

ಕೇರಳ ಬ್ಯಾಂಕ್‌ ಸ್ಥಾಪನೆಗೆ ಆರ್‌ಬಿಐ ಒಪ್ಪಿಗೆ ನೀಡಿದ ಬಗ್ಗೆ ತಿಳಿದು ಸಂತೋಷವಾಗಿದೆ. ಜೊತೆಗೆ, ನೂತನ ಬ್ಯಾಂಕ್‌ ಸ್ಥಾಪನೆಯಿಂದ ರಾಜ್ಯದ ಅಭಿವೃದ್ಧಿ ಮತ್ತಷ್ಟುತ್ವರಿತಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios