Asianet Suvarna News Asianet Suvarna News

ತಮ್ಮದೇ ಕಚೇರಿಗೆ ಹೊಸ ಟಾಸ್ಕ್ ಕೊಟ್ಟ ಪ್ರಧಾನಿ: ಏನಿದು 100 ದಿನಗಳ ಪ್ಲ್ಯಾನ್?

ಚುನಾವಣಾ ಭರಾಟೆ ಮಧ್ಯೆಯೇ ಪ್ರಧಾನಿ ಕಚೇರಿ, ನೀತಿ ಆಯೋಗಕ್ಕೆ ಮೋದಿ ಹೊಸ ಟಾಸ್ಕ್| ಹೊಸ ಸರ್ಕಾರದ ರಚೆನಗೂ ಮೊದಲೇ ಮೊದಲ 100 ದಿನಗಳ ಹೊಸ ನೀತಿ ರೂಪಿಸಲು ಸೂಚನೆ| ಉದ್ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 100 ದಿನಗಳ ಅಜೆಂಡಾ ರೂಪಿಸಲು ಸಲಹೆ| 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರಿಸಲು ಮೋದಿ ಕಸರತ್ತು| ಉದ್ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ತರಬಲ್ಲ ಹೊಸ ನೀತಿ ರೂಪಿಸುವಂತೆ ಸೂಚನೆ|

PM Modi Asks To Prepare 100-Day Agenda Focusing Job and Education and Health sectors
Author
Bengaluru, First Published Apr 16, 2019, 7:08 PM IST

ನವದೆಹಲಿ(ಏ.16): ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ಏರಿರುವ ಮಧ್ಯೆಯೇ, ಪ್ರಧಾನಿ ನರೇಂದ್ರ ಮೋದಿ ಪ್ರಧಾನಮಂತ್ರಿ ಕಚೇರಿ ಮತ್ತು ನೀತಿ ಆಯೋಗಕ್ಕೆ ಹೊಸ ಟಾಸ್ಕ್ ನೀಡಿದ್ದಾರೆ.

ಲೋಕಸಭೆ ಚುನಾವಣೆಗಳು ಮುಗಿದು ಹೊಸ ಸರ್ಕಾರ ರಚನೆಯಾದ ಬಳಿಕ, ಮೊದಲ 100 ದಿನಗಳಲ್ಲಿ ಉದ್ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕಾಗಿ ಹೊಸ ನೀತಿ ರೂಪಿಸುವಂತೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

ಈ ಕುರಿತು ಪ್ರಧಾನಿ ಕಚೇರಿ ಮತ್ತು ನೀತಿ ಆಯೋಗಕ್ಕೆ ಸ್ಪಷ್ಟ ಸೂಚನೆ ನೀಡಿರುವ ಪ್ರಧಾನಿ ಮೋದಿ, ಹೊಸ ಸರ್ಕಾರ 100 ದಿನಗಳಲ್ಲಿ ಉದ್ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ತರಬಲ್ಲ ಹೊಸ ನೀತಿ ರೂಪಿಸುವಂತೆ ಸೂಚನೆ ನೀಡಿದ್ದಾರೆ.

ಅಲ್ಲದೇ ಮುಂದಿನ 5 ವರ್ಷಗಳಲ್ಲಿ ಎರಡಂಕಿ ಜಿಡಿಪಿ ಅಭಿವೃದ್ಧಿ ಸಾಧಿಸಲು ಈಗಿನಿಂದಲೇ ತಯಾರಿ ನಡೆಸುವಂತೆ ಪ್ರಧಾನಿ ಮೋದಿ ನೀತಿ ಆಯೋಗಕ್ಕೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರಬೇಕು ಎಂಬ ಆಶಯ ಹೊತ್ತ ಪ್ರಧಾನಿ ಮೋದಿ, ಮುಂದಿನ ಸರ್ಕಾರ ರಚನೆಗೂ ಮೊದಲೇ ಅದರ ಕಾರ್ಯವೈಖರಿಯನ್ನು ನಿರ್ಧರಿಸಿ ಅದಕ್ಕೆ ತಕ್ಕಂತೆ ಯೋಜನೆ ರೂಪಿಸಲು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

Follow Us:
Download App:
  • android
  • ios