Asianet Suvarna News Asianet Suvarna News

ಪೆಟ್ರೋಲ್ ದರ: 2018ರ ಅತ್ಯಂತ ಕನಿಷ್ಠ ಇಳಿಕೆ ದಾಖಲೆ!

ತೈಲದರದಲ್ಲಿ ದಾಖಲೆಯ ಇಳಿಕೆ| 2018ರ ಅತ್ಯಂತ ಕನಿಷ್ಠ ಬೆಲೆಗೆ ಮಾರಾಟ| ದೇಶದ ಮಹಾನಗರಗಳಲ್ಲಿ ಇಳಿಕೆಯಾದ ಪೆಟ್ರೋಲ್, ಡೀಸೆಲ್ ದರ| ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಸಂಭವ

Petrol and  Diesel Price Touches New Low in 2018
Author
Bengaluru, First Published Dec 27, 2018, 3:20 PM IST

ನವದೆಹಲಿ(ಡಿ.27): ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಇಂದೂ(ಗುರುವಾರ)ಇಳಿಕೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

ದೇಶದ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ದರ 5 ರಿಂದ 7 ಪೈಸೆಯಷ್ಟು ಇಳಿಕೆಯಾಗಿದ್ದು, ಡೀಸೆಲ್ ದರ ಕೂಡ 6 ರಿಂದ 7 ಪೈಸೆಯಷ್ಟು ಇಳಿಕೆಯಾಗಿದೆ. 

ಇಂದಿನ ಇಳಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 2018ರಲ್ಲೇ ಅತ್ಯಂತ ಕನಿಷ್ಟ ಮಟ್ಟಕ್ಕೆ ತಲುಪಿದಂತಾಗಿದೆ.

ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆಗಳತ್ತ ಗಮನಹರಿಸುವುದದರೆ... 

ರಾಷ್ಟ್ರ ರಾಜಧಾನಿ ನವದೆಹಲಿ- 
ಪೆಟ್ರೋಲ್- 69.74 ರೂ. 
ಡೀಸೆಲ್- 63.76 ರೂ. 

ವಾಣಿಜ್ಯ ರಾಜಧಾನಿ ಮುಂಬೈ- 
ಪೆಟ್ರೋಲ್- 75.33 ರೂ. 
ಡೀಸೆಲ್- 66.69 ರೂ. 

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-
ಪೆಟ್ರೋಲ್-71.81 ರೂ. 
ಡೀಸೆಲ್- 65.49 ರೂ. 

ತಮಿಳುನಾಡು ರಾಜಧಾನಿ ಚೆನ್ನೈ-
ಪೆಟ್ರೋಲ್‌- 72.32 ರೂ. 
ಡೀಸೆಲ್‌- 67.28 ರೂ. 

ರಾಜ್ಯ ರಾಜಧಾನಿ ಬೆಂಗಳೂರು- 
ಪೆಟ್ರೋಲ್- 70.27 ರೂ.
ಡೀಸೆಲ್- 64.08 ರೂ. 


ಅಂತಾರಾಷ್ಟ್ರೀಯ ಕಚ್ಛಾ ತೈಲ ದರ ಇಳಿಕೆಯೇ ತೈಲದರಗಳ ಇಳಿಕೆಗೆ ಕಾರಣ ಎನ್ನಲಾಗುತ್ತಿದ್ದು, ಮುಂದಿನ ದಿನಗಳ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.

ಇಂದಿನ ಪೆಟ್ರೋಲ್ ದರ: ಬಂದಿದೆ ಹ್ಯಾಪಿ ಸೋಮವಾರ!

ಕೇಂದ್ರ 'ನೈಜ ಬೆಲೆ' ಹೇಳ್ತಿದ್ದಂತೇ ಪೆಟ್ರೋಲ್ ದರ ಭಾರೀ ಇಳಿಕೆ!

ಕೆಜಿಎಫ್ ನೋಡೊ ಮುನ್ನ ಪೆಟ್ರೋಲ್ ಬೆಲೆ ನೋಡೊದು ಚೆನ್ನ!

Follow Us:
Download App:
  • android
  • ios