Asianet Suvarna News Asianet Suvarna News

ಕ್ಷಯ ರೋಗ ಸೋಲತ್ತೆ, ಇಂಡಿಯಾ ಗೆಲ್ಲುತ್ತೆ: ಕೊಟ್ರೆ ಇಂತಾ ಅನುದಾನ ಕೊಡಬೇಕಲ್ವಾ ಮತ್ತೆ!

ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020 ಮಂಡನೆ ಆರಂಭ| ಬಜೆಟ್ ಭಾಷಣ ಓದುತ್ತಿರುವ ನಿರ್ಮಲಾ ಸೀತಾರಾಮನ್| ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ ಮೋದಿ ಸರ್ಕಾರ| ಆರೋಗ್ಯ ಕ್ಷೇತ್ರಕ್ಕೆ  69 ಸಾವಿರ ಕೋಟಿ ರೂ. ಅನುದಾನ|ಕ್ಷಯ ರೋಗ ನಿರ್ಮೂಲನೆಗೆ ಒತ್ತು ನೀಡಿದ ನಿರ್ಮಲಾ ಸೀತಾರಾಮನ್| ಎಲ್ಲಾ ಜಿಲ್ಲೆಗಳಿಗೂ ಜನೌಷಧ ಕೇಂದ್ರಗಳ ಸ್ಥಾಪನೆ| ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆಗೆ ತೀರ್ಮಾನ| ಖಾಸಗಿ ಸಹಭಾಗಿತ್ವದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು|

Nirmala Sitharaman Announce 69 Thousand Crore Rupees For Health Sector
Author
Bengaluru, First Published Feb 1, 2020, 12:13 PM IST

ನವದೆಹಲಿ(ಫೆ.01): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಕೃಷಿ ಕ್ಷೇತ್ರದ ಬಳಿಕ ಆರೋಗ್ಯ ಕ್ಷೇತ್ರದತ್ತ ಗಮನಹರಿಸಿರುವ ವಿತ್ತ ಸಚಿವೆ, ಆರೋಗ್ಯ ಕ್ಷೇತ್ರಕ್ಕೆ ಭರಪೂರ ಅನುದಾನ ಘೋಷಿಸಿದ್ದಾರೆ. 

ಆರೋಗ್ಯ ಕ್ಷೇತ್ರಕ್ಕೆ ಒಟ್ಟು 69 ಸಾವಿರ ಕೋಟಿ ರೂ. ಅನುದಾನ ಘೋಷಿಸಿರುವ ನಿರ್ಮಲಾ ಸೀತಾರಾಮನ್, ಪ್ರಮುಖವಾಆಗಿ ಕ್ಷಯ ರೋಗ ನಿರ್ಮೂಲನೆಗೆ ಒತ್ತು ನೀಡಿದ್ದಾರೆ. ಕ್ಷಯ (TB) ಸೋಲುತ್ತೆ, ನಮ್ಮ ದೇಶ ಗೆಲ್ಲುತ್ತೆ ಎಂಬ  ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, 2025ರೊಳಗೆ ದೇಶವನ್ನು ಕ್ಷಯ ರೋಗ ಮುಕ್ತ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ಇನ್ನು ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆಗೆ ತೀರ್ಮಾನ ಮಾಡಲಾಗಿದ್ದು, ಜನೌಷಧ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ಅದರಂತೆ  ಎಲ್ಲಾ ಜಿಲ್ಲೆಗಳಿಗೂ ಜನೌಷಧ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.

ಅನ್ನದಾತನೊಂದಿಗೆ ಆರಂಭವಾದ ನಿರ್ಮಲಾ ಬಜೆಟ್: ರೈತನಿಗಾಗಿ 16 ಸೂತ್ರ!

ಅಲ್ಲದೇ ಖಾಸಗಿ ಸಹಭಾಗಿತ್ವದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಬಜೆಟ್ ಒತ್ತು ನೀಡಿದೆ. ಇಷ್ಟೇ ಅಲ್ಲದೇ 12 ಖಾಯಿಲೆಗಳಿಗೆ ಇಂಧ್ರಧನುಷ್ ಯೋಜನೆಯನ್ನೂ ವಿಸ್ತರಿಸುವ ನಿರ್ಣಯ ಕೈಗೊಳ್ಳಲಾಗಿದೆ.

ಈ ಎಲ್ಲಾ ಯೋಜನೆಗಳಿಗೆ ಒಟ್ಟ  69 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.

Follow Us:
Download App:
  • android
  • ios