Asianet Suvarna News Asianet Suvarna News

ಕಳಂಕಿತ ಪಿಎಂಸಿ ಬ್ಯಾಂಕ್‌ ಸೂಪರ್‌ಸೀಡ್‌!

ಪಿಎಂಸಿ ಬ್ಯಾಂಕ್‌ ಸೂಪರ್‌ಸೀಡ್‌| ಭಾರೀ ಅವ್ಯವಹಾರ ಬೆಳಕಿಗೆ ಬಂದ ಹಿನ್ನೆಲೆ, ಆರ್‌ಬಿಐನಿಂದ ಶಿಸ್ತುಕ್ರಮ ಘೋಷಣೆ

Large withdrawals led to RBI imposing curbs on PMC Bank
Author
Bangalore, First Published Oct 1, 2019, 9:57 AM IST

ನವದೆಹಲಿ[ಅ.01]: ಹಣಕಾಸು ಅವ್ಯವಹಾರದ ಆರೋಪ ಎದುರಿಸುತ್ತಿರುವ ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಕೋಆಪರೇಟಿವ್‌ ಬ್ಯಾಂಕ್‌ (ಪಿಎಂಸಿ)ನ ಆಡಳಿತ ಮಂಡಳಿಯನ್ನು ಭಾರತೀಯ ರಿಸವ್‌ರ್‍ ಬ್ಯಾಂಕ್‌ ಸೂಪರ್‌ಸೀಡ್‌ ಮಾಡಿದೆ. ಅಲ್ಲದೇ ಗ್ರಾಹಕರ ಕುಂದು ಕೊರತೆಗಳನ್ನು ಬಗೆಹರಿಸಲು ಸಹಾಯವಾಣಿ ಸಂಖ್ಯೆಯೊಂದನ್ನು ಬಿಡುಗಡೆ ಮಾಡಿದೆ.

8880 ಕೋಟಿ ಒಟ್ಟು ಸಾಲದಲ್ಲಿ ಎಚ್‌ಡಿಐಎಲ್‌ಗೆ 6500 ಕೋಟಿ!

ಪಿಎಂಸಿ ಬ್ಯಾಂಕಿನಲ್ಲಿ ಠೇವಣಿ ಇಟ್ಟವರು www.pmcbank.com ವೆಬ್‌ಸೈಟ್‌ ಮೂಲಕ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ ಅಥವಾ 1800223993 ಸಂಖ್ಯೆಗೆ ಕರೆ ಮಾಡಿ ವಿಚಾರಣೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಂಜಾಬ್-ಮಹಾರಾಷ್ಟ್ರ ಸಹಕಾರ ಬ್ಯಾಂಕ್ ತಾತ್ಕಾಲಿಕ ಬಂದ್; ಮುಂದೇನು?

ಅನುತ್ಪಾದಕ ಆಸ್ತಿ ಸೇರಿದಂತೆ ಇನ್ನಿತರ ನಿಯಂತ್ರಕ ಕ್ರಮಗಳನ್ನು ಪಾಲಿಸುವಲ್ಲಿ ವೈಫಲ್ಯವಾದ ಕರ್ನಾಟಕದಲ್ಲೂ ಶಾಖೆ ಹೊಂದಿದ ಪಿಎಂಸಿ ಬ್ಯಾಂಕ್‌ ಮೇಲೆ ಸೆ.23ರಂದು ಭಾರತೀಯ ರಿಸವ್‌ರ್‍ ಬ್ಯಾಂಕ್‌ 6 ತಿಂಗಳು ನಿರ್ಬಂಧ ಹೇರಿತ್ತು. ಈ ಬ್ಯಾಂಕಿನಿಂದ ಸದ್ಯ 10 ಸಾವಿರ ರು. ಅಷ್ಟೇ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.

Follow Us:
Download App:
  • android
  • ios