Asianet Suvarna News Asianet Suvarna News

ಕೇಂದ್ರ ಬಜೆಟ್, ನಿಮ್ಮ ಜಿಲ್ಲೆ, ನಿಮ್ಮ ನಿರೀಕ್ಷೆ: ಮೋದಿ ಈಡೇರಿಸಲಿ ಎಂಬ ಅಪೇಕ್ಷೆ!

ಇಂದು ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ| ಬಜೆಟ್ ಪ್ರತಿಯೊಂದಿಗೆ ಲೋಕಸಭೆ ತಲುಪಿದ ಹಂಗಾಮಿ ಹಣಕಸು ಸಚಿವ| ಮಧ್ಯಂತರ ಬಜೆಟ್ ಮೇಲಿದೆ ದೇಶವಾಸಿಗಳ ಕುತೂಹಲ| ಮಧ್ಯಂತರ ಬಜೆಟ್ ಮೇಲೆ ರಾಜ್ಯದ ಜನತೆಯ ನಿರೀಕ್ಷೆಗಳೇನು?| ರಾಜ್ಯದ ಜನತೆಯ ಅಪೇಕ್ಷೆ ಈಡೇರಿಸಲಿದೆಯಾ ಮೋದಿ ಸರ್ಕಾರ? 

Karnataka State Expectations From Union Budget 2019
Author
Bengaluru, First Published Feb 1, 2019, 10:42 AM IST

ಬೆಂಗಳೂರು(ಫೆ.01): ಲೋಕಸಭೆ ಚುನಾವಣೆಗೆ ಹಲವು ಕೆಲವೇ ತಿಂಗಳು ಬಾಕಿ ಇರುವಾಗಲೇ, ಇಂದು ಮೋದಿ ಸರ್ಕಾರದಿಂದ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯೆಲ್ ಈಗಾಗಲೆ ಬಜೆಟ್ ಪ್ರತಿಯೊಂದಿಗೆ ಲೋಕಸಭೆ ತಲುಪಿದ್ದಾರೆ. 

2019 ಚುನಾವಣಾ ಹೊತ್ತಲ್ಲೇ ಬಜೆಟ್ ಮಂಡನೆ ಇರುವುದರಿಂದ, ಸಹಜವಾಗಿ ಈ ಬಾರಿ ಮೋದಿ ಬಜೆಟ್ ಬುಟ್ಟಿಯಲ್ಲಿ ಏನಿದೆ ಎಂದು ದೇಶವಾಸಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಅದರಂತೆ ಇಂದಿನ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮೇಲೆ ರಾಜ್ಯದ ಜನತೆ ಕೂಡ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ತಮ್ಮ ಜಿಲ್ಲೆಗೆ ಮೋದಿ ಸರ್ಕಾರ ಏನು ಕೊಡುಗೆ ನೀಡಬಹುದು ಎಂದು ಜನ ಕಾಯುತ್ತಿದ್ದಾರೆ. ಇನ್ನು ಜಿಲ್ಲಾವಾರು ನಿರೀಕ್ಷೆಗಳನ್ನು ನೋಡುವುದಾದರೆ.. 

ಕೇಂದ್ರ ಬಜೆಟ್ ಮೇಲೆ ದ.ಕ ಜಿಲ್ಲೆಯ ಜನರ ನಿರೀಕ್ಷೆ:
1) ಕೊಳೆ ರೋಗಕ್ಕೆ ತುತ್ತಾಗಿರುವ ಅಡಿಕೆ ಮತ್ತು ರಬ್ಬರ್ ಬೆಳಗಾರರಿಗೆ ನೆರವು ಘೋಷಣೆ
2) ಜಿಲ್ಲೆಗೊಂದು ಐಟಿ ಹಬ್ ಬೇಕು ಎಂಬುವುದು ಕರಾವಳಿ ಜನರ ಬಹುದಿನದ ಬೇಡಿಕೆ
3) ಪ್ರವಾಸೋದ್ಯಮಕ್ಕೆ ಬೇಕಾದ ಯೋಜನೆ ಜನರ ನಿರೀಕ್ಷೆ
4) ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಗೆ ಬೇಕಾದ ಯೋಜನೆಗಳು, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆ 
5) ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗ ಘೋಷಣೆಗೆ ಆಗ್ರಹ
6) ಸುಬ್ರಹ್ಮಣ್ಯ - ಸಕಲೇಶಪುರ ಹಳಿ ದ್ವಿಪಥ ಕಾಮಗಾರಿ
7) ಮಂಗಳೂರು - ಮಡಗಾಂವ್‌ ಡೆಮು ರೈಲನ್ನು ಪ್ರತಿನಿತ್ಯ ಓಡಿಸಬೇಕು
8) ದಾದರ್‌- ಮಡಗಾಂವ್‌ ಜನ್‌ ಶತಾಬ್ದಿ ಎಕ್ಸ್‌ ಪ್ರಸ್‌ ರೈಲನ್ನು ಮಂಗಳೂರಿಗೆ ಓಡಿಸಬೇಕು
9) ಮುಂಬಯಿಗೆ ಹೊಸ ರೈಲು ಹಾಗೂ ಕೊಂಕಣ ರೈಲ್ವೆ ಡಬ್ಲಿಂಗ್ ಕಾರ್ಯ

ಕೇಂದ್ರ ಬಜೆಟ್ ಮೇಲೆ ಕೋಲಾರ ಜಿಲ್ಲೆಯ ಜನರ ನಿರೀಕ್ಷೆ:
1) ಸುವರ್ಣ ನ್ಯೂಸ್ ಗೆ ಕೋಲಾರ ಸಂಸದ ಕೆಹೆಚ್ ಮುನಿಯಪ್ಪ ಹೇಳಿಕೆ
2) ಹಿಂದಿನ ಸರ್ಕಾರ ಜಾರಿ ಮಾಡಿದ ಹಲವು ರೈಲ್ವೆ, ಹೆದ್ದಾರಿ ಯೋಜನೆಗಳಿಗೆ ಹಣ ಬಿಡುಗಡೆಗೆ ಒತ್ತಾಯ
3) ಕಡಪದಿಂದ ಚಿಂತಾಮಣಿ ‌ಮಾರ್ಗವಾಗಿ ಬೆಂಗಳೂರಿಗೆ ರೈಲು ಮಾರ್ಗ
4) ಮದನಪಲ್ಲಿ,ಶ್ರೀನಿವಾಸಪುರ, ಕೋಲಾರ ,ಮುಳಬಾಗಿಲು ಗೆ ರೈಲು ಸಂಪರ್ಕ
5) ಚಿಕ್ಕಬಳ್ಳಾಪುರದಿಂದ ಪುಟ್ಟಪರ್ತಿ ಮಾರ್ಗದ ಆದೊನಿ ರೈಲ್ವೆ ಜಂಕ್ಷನ್ ಗೆ ಸಂಪರ್ಕ
6) ಕಡಪ,ಕೋಲಾರ ಮಾರ್ಗಕ್ಕೆ ಗೂಡ್ಸ್ ರೈಲು ಸಂಚಾರ
7) ಬಂಗಾರಪೇಟೆ ರೈಲ್ವೇ ಜಂಕ್ಷನ್ ಅಭಿವೃದ್ಧಿ
8) ಕೋಲಾರ, ಹೆಚ್ ಕ್ರಾಸ್ ಮುಖೇನ ಕೆಂಪೇಗೌಡ ವಿಮಾನ ನಿಲ್ದಾಣ ಸಂಪರ್ಕ ಹೆದ್ದಾರಿ ಚತುರ್ಪಥ ಬದವಾಣೆ ಯೋಜನೆ

ಕೇಂದ್ರ ಬಜೆಟ್ ಮೇಲೆ ಧಾರವಾಡ ಜಿಲ್ಲೆಯ ಜನರ ನಿರೀಕ್ಷೆ:
1) ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ್ ಕಾನೂನು ತೊಡಕು ನಿವಾರಣೆ
2) ಹುಬ್ಬಳ್ಳಿಯ ನೈರುತ್ಯ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪಿಸುವ ಬಹುದಿನದ ಬೇಡಿಕೆ
3) ಉತ್ತರ ಕರ್ನಾಟಕ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಜವಳಿ ಫ್ಯಾಕ್ಟರಿ, ಜೊತೆ ಇತರೆ ಕೈಗಾರಿಗಳ ಸ್ಥಾಪನೆಗೆ ಅವಕಾಶ
4) ಈ ಭಾಗದ ರೈತರ ಬಹುದಿನದ ಬೇಡಿಕೆ ಉಳ್ಳಾಗಡ್ಡಿ- ಮೆಣಸಿನಕಾಯಿ ಶೇಖರಣೆ ಮತ್ತು ಸಂಸ್ಕರಣೆ ದೊಡ್ಡ ಘಟಕ ಸ್ಥಾಪನೆ
5)ಹುಬ್ಬಳ್ಳಿ ನಗರದಲ್ಲಿ ಏಮ್ಸ್ ಸ್ಥಾಪನೆಗೆ ತ್ವರಿತ ಕ್ರಮ ಕೈಗೊಳ್ಳಬಹುದೆಂಬ ನಿರೀಕ್ಷೆ

ಕೇಂದ್ರ ಬಜೆಟ್ ಮೇಲೆ ಕೊಪ್ಪಳ ಜಿಲ್ಲೆಯ ಜನರ ನಿರೀಕ್ಷೆ:
1) ಗಂಗಾವತಿ- ರಾಯಚೂರು ಹೆದ್ದಾರಿ ಘೋಷಣೆಯ ನಿರೀಕ್ಷೆ
2) ಕೊಪ್ಪಳ- ಶಿಗ್ಗಾಂವ ಹೆದ್ದಾರಿ ಘೋಷಣೆ ನಿರೀಕ್ಷೆ
3) ಸಿಂಧನೂರು-ನರಗುಂದ ಹೆದ್ದಾರಿ ಘೋಷಣೆಯ ನಿರೀಕ್ಷೆ (ವಾಯಾ- ಸಿಂಧನೂರು-ಕುಷ್ಟಗಿ- ಗಜೇಂದ್ರಗಡ-ನರಗುಂದ)
4) ಹೆದ್ದಾರಿಯಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಭಾರತ ಮಾಲಾ ಯೋಜನೆಯಡಿ ಆಯ್ಕೆಯಾಗಿರುವ ದದೇಗಲ್ ನಿಂದ ಸೂಳಿಕೇರಿ ತಾಂಡಾ ವರೆಗಿನ ಹೆದ್ದಾರಿ ಯೋಜನೆಗೆ ಹಣ ಬಿಡುಗಡೆಯ ನಿರೀಕ್ಷೆ
5) ಗೋದಾವರಿ-ಕೃಷ್ಣ ನದಿಯ ಮೂಲಕ ಕೃಷ್ಣ ಮೇಲ್ದಂಡೆ ಯೋಜನೆಗೆ 40 ಟಿಎಂಸಿ ನೀರು ಬಳಕೆಗೆ ಅನುಮತಿಯ ನಿರೀಕ್ಷೆ
6) ಲಿಂಗಸೂರು-ಬಳ್ಳಾರಿ ನೂತನ ರೈಲು ಘೋಷಣೆಯ ನಿರೀಕ್ಷೆ
7) ಗಿಣಗೇರಿ-ಮೆಹಬೂಬನಗರ ರೈಲ್ವೇ ಕಾಮಗಾರಿಗೆ 200 ಕೋಟಿ ಅನುದಾನದ ನಿರೀಕ್ಷೆ
8) ಗದಗ-ವಾಡಿ ರೈಲ್ವೇ ಕಾಮಗಾರಿಗೆ 200 ಕೋಟಿ ಅನುದಾನದ ನಿರೀಕ್ಷೆ

ಕೇಂದ್ರ ಬಜೆಟ್ ಮೇಲೆ ವಿಜಯಪುರ ಜಿಲ್ಲೆಯ ಜನರ ನಿರೀಕ್ಷೆ:
1) ನೆನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಸ್ಥಾಪನೆ ಯೋಜನೆ
2) ದ್ರಾಕ್ಷಿ ಅಭಿವೃದ್ಧಿ ವಿಶೇಷ ಮಂಡಳಿ ಸ್ಥಾಪನೆ
3) ದ್ರಾಕ್ಷಿ ಬೆಳೆಗರರ ಸಾಲ ಮನ್ನಾ ಮಾಡಬೇಕು
4) ಹಿಟ್ನಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ತೋಟಗಾರಿಕೆ ಮಹಾವಿದ್ಯಾಲಯವನ್ನು ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೆ ಬೇಡಿಕೆ
5) ದಿ.ಅನಂತಕುಮಾರ್ ಜಿಲ್ಲೆಯಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪನೆ ಮಾಡುವುದಾಗಿ ಹೇಳಿದ್ದರು. ಆ ಕಾರ್ಖಾನೆ ಸ್ಥಾಪನೆ ಆಗಬೇಕು
6) ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಗೋಳಗುಮ್ಮಟ ಸೇರ್ಪಡೆ ಆಗಬೇಕೆಂಬ ಬೇಡಿಕೆ
7) ಲಿಂಬೆ ಹಾಗೂ ದಾಳಿಂಬೆ ಬೆಳೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸ್ಥಾಪನೆ ಬೇಡಿಕೆ

ಕೇಂದ್ರ ಬಜೆಟ್ ಮೇಲೆ ವಿಜಯಪುರ ಜಿಲ್ಲೆಯ ಜನರ ನಿರೀಕ್ಷೆ:
1) ಜಿಲ್ಲೆಯ ಪ್ತವಾಸಿ ತಾಣಗಳಾದ ಐತಿಹಾಸಿಕ ಬಾದಾಮಿ, ಐಹೊಳೆ, ಪಟ್ಟದಕಲ್ಲು ಅಭಿವೃದ್ಧಿ
2) ಜಿಲ್ಲೆಯಲ್ಲಿ ಹೆಚ್ಚಿರೋ ನೇಕಾರರಿಗೆ ಜವಳಿ ಪಾರ್ಕ್ ನಿಮಾ೯ಣ
3) ಆಲಮಟ್ಟಿ ಹಿನ್ನೀರಿನ ಸಂತ್ರಸ್ಥರ ಪುನರ್ವಸತಿಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು
4) ಕುಡಚಿ- ಬಾಗಲಕೋಟೆ ರೈಲು ಮಾಗ೯ ಶೀಘ್ರ ಪೂರ್ಣಗೊಳಿಸಬೇಕು
5) ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಯೋಜನೆ ಬಗ್ಗೆ ಜನರ ನಿರೀಕ್ಷೆ ಇದೆ
6) ಹಸಿರು ನ್ಯಾಯಾಲಯ ಗ್ರೀನ್ ಸಿಗ್ನಲ್ ಕೊಟ್ಟಿದೆ

ಕೇಂದ್ರ ಬಜೆಟ್ ಮೇಲೆ ರಾಯಚೂರು ಜಿಲ್ಲೆಯ ಜನರ ನಿರೀಕ್ಷೆ:
1) ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಜವಳಗೆರಾದಲ್ಲಿ ಸೆಂಟ್ರಲ್ ಫಾರ್ಮ್ ಇದ್ದು ಕೃಷಿಗೆ ಸಂಬಂಧಿಸಿದಂತೆ  ಸಂಶೋಧನೆ ನಡೆಸಲು ಕೇಂದ್ರೀಯ ವಿಶ್ವವಿದ್ಯಾಲಯ ಮಾಡಿದರೆ ಸಂಶೋದನೆಗೆ ಸಹಕಾರಿ ಆಗಲಿದೆ
2) ಗಿಣಿಗೆರಾ ದಿಂದ ಮೆಹಬೂಬ್  ನಗರ ರೈಲ್ವೆ ಯೋಜನೆ 20 ವರ್ಷದಿಂದ ನೆನೆಗುದಿಗೆ ಬಿದ್ದಿದೆ. ಅನುದಾನ ಹಾಗೂ ಭೂ ಸ್ವಾಧೀನ ಪ್ರಕ್ರಿಯೆಯಿಂದ ತಡವಾಗುತ್ತಿದೆ ಇದರ ಬಗ್ಗೆಯೂ ನಿರೀಕ್ಷೆ ಇದೆ
3) ತುಂಗಭದ್ರಾ ನದಿಯ ಹೂಳು ತೆಗೆದರೆ ರಾಯಚೂರು ಭಾಗದ ಎಲ್ಲಾ ರೈತರಿಗೂ ಅನುಕೂಲವಾಗಲಿದೆ

Follow Us:
Download App:
  • android
  • ios