Asianet Suvarna News Asianet Suvarna News

ಇಂದು ನಾವು, ನಾಳೆ ನೀವು: ಹಸನ್ ಮಾತು ಕೇಳ್ತಿವಾ ನಾವು?

ಅಮೆರಿಕದ ಆರ್ಥಿಕ ದಿಗ್ಬಂಧನದ ವಿರುದ್ಧ ಇರಾನ್ ಅಧ್ಯಕ್ಷ ಕೆಂಡಾಮಂಡಲ| ‘ಅಮೆರಿಕದಿಂದ ಇತರ ದೇಶಗಳ ಮೇಲೆ ಆರ್ಥಿಕ ಭಯೋತ್ಪಾದನೆ’|‘ಪ್ರಾದೇಶಿಕ ಶಕ್ತಿಗಳು ಒಟ್ಟುಗೂಡಿ ಅಮೆರಿಕವನ್ನು ಸೋಲಿಸಬೇಕು’|‘ಇಂದು ನಮ್ಮ ಮೇಲೆ, ನಾಳೆ ನಿಮ್ಮ ಮೇಲೆ ಆರ್ಥಿಕ ದಾಳಿ

Iran President Says US Sanctions Are Economic Terrorism
Author
Bengaluru, First Published Dec 8, 2018, 7:05 PM IST

ಟೆಹರನ್‌(ಡಿ.08): ಇತರ ದೇಶಗಳ ಮೇಲೆ ಅಮೆರಿಕ ಹೇರುತ್ತಿರುವ ಆರ್ಥಿಕ ದಿಗ್ಬಂಧನಗಳನ್ನು 'ಆರ್ಥಿಕ ಭಯೋತ್ಪಾದನೆ' ಎಂದು ಇರಾನ್ ಅಧ್ಯಕ್ಷ ಹಸನ್ ರೋಹಾನಿ ಬಣ್ಣಿಸಿದ್ದಾರೆ.

ಅಮೆರಿಕದ ಈ ಆರ್ಥಿಕ ಭಯೋತ್ಪಾದನೆಯ ವಿರುದ್ಧ ಪ್ರಾದೇಶಿಕ ಶಕ್ತಿಗಳು ಒಗ್ಗೂಡಿ ಹೋರಾಡಬೇಕು ಎಂದು ಇದೇ ವೇಳೆ ರೋಹಾನಿ ಕರೆ ನೀಡಿದ್ದಾರೆ. 

ಅಫ್ಘಾನಿಸ್ತಾನ, ಚೀನಾ, ಪಾಕಿಸ್ತಾನ, ರಷ್ಯಾ ಮತ್ತು ಟರ್ಕಿಯ ಸಂಸದರು ಪಾಲ್ಗೊಂಡ 'ಭಯೋತ್ಪಾದನೆ ಮತ್ತು ಪ್ರಾದೇಶಿಕ ಸಹಕಾರ' ಕುರಿತ ಸಮ್ಮೇಳನ ಉದ್ದೇಶಿಸಿ ಇರಾನ್ ಅಧ್ಯಕ್ಷರು ಮಾತನಾಡಿದರು. 

ಇರಾನ್ ಮೇಲೆ ಅಮೆರಿಕ ಹೇರಿರುವ ದಿಗ್ಬಂಧನ ಅನ್ಯಾಯ ಮತ್ತು ಅಕ್ರಮ ಎಂದು ರೋಹಾನಿ ಜರೆದಿದ್ದು, ಇದು ನಮ್ಮ ದೇಶದ ಮೇಲೆ ನಡೆಸುತ್ತಿರುವ ಭಯೋತ್ಪಾದನೆಗೆ ಸ್ಪಷ್ಟ ನಿದರ್ಶನ ಎಂದು ಹರಿಹಾಯ್ದಿದ್ದಾರೆ.

ಇರಾನ್ ಮೇಲೆ ದಿಗ್ಬಂಧನ ಹೇರುವ ಮೂಲಕ ಅಂತಾರಾಷ್ಟ್ರೀಯ ವ್ಯಾಪಾರ, ಇಂಧನ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಯ ಲಾಭಗಳನ್ನು ನಮಗೆ ನಿರಾಕರಿಸಲಾಗುತ್ತಿದೆ. ವಾಸ್ತವದಲ್ಲಿ ಅಮೆರಿಕ ಎಲ್ಲರ ಮೇಲೂ ದಿಗ್ಬಂಧನ ಹೇರುತ್ತಿದೆ ಎಂದು ರೋಹಾನಿ ಆರೋಪಿಸಿದ್ದಾರೆ.
 

Follow Us:
Download App:
  • android
  • ios