Asianet Suvarna News Asianet Suvarna News

ಕೈಗಾರಿಕೆ ವಲಯಕ್ಕೆ ಅಭಯಹಸ್ತ: ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ಪಿಂಚಣಿ!

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್| ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ ಹಂಗಾಮಿ ವಿತ್ತ ಸಚಿವ| ಕೈಗಾರಿಕಾ ವಲಯಕ್ಕೆ ಬಂಪರ್ ಕೊಡುಗೆ ಪ್ರಕಟಿಸಿದ ಪಿಯೂಷ್ ಗೋಯೆಲ್| ಅಸಂಘಟಿತ ಕಾರ್ಮಿಕ ವಲಯಕ್ಕೆ 3 ಸಾವಿರ ರೂ. ಪಿಂಚಣಿ | ಮೇಕ್ ಇನ್ ಇಂಡಿಯಾ ಯೋಜನೆಯಡಿ ಉದ್ಯೋಗ ಸೃಷ್ಟಿಯ ಭರವಸೆ 

Industrial Sector Got Huge Benifits from Union Interim Budget 2019
Author
Bengaluru, First Published Feb 1, 2019, 1:39 PM IST

ನವದೆಹಲಿ(ಫೆ.01): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್ ನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯೆಲ್ ಮಂಡಿಸಿದ್ದಾರೆ.

ಇನ್ನು ಮಧ್ಯಂತರ ಬಜೆಟ್ ನಲ್ಲಿ ಕೈಗಾರಿಕೆಗೆ ಭೃಪೂರ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಕೈಗಾರಿಕೋದ್ಯಮ ವಲಯದ ಸಂತಸ ಇಮ್ಮಡಿಗೊಳಿಸಿದೆ.

ಸಕ್ಕರೆ ಕಾರ್ಖಾನೆಗಳಿಗೆ ಮತ್ತೊಂದು ಪ್ಯಾಕೇಜ್ ನೀಡಲು ಕೇಂದ್ರ ಮುಂದಾಗಿದ್ದು, ಎಥೆನಾಲ್​ ಉತ್ಪಾದನೆಗೆ ಸಕ್ಕರೆ ಕಾರ್ಖಾನೆಗಳಿಗೆ 10-12 ಸಾವಿರ ಕೋಟಿ ರೂ. ಸರಳ ಸಾಲ ನೀಡಲು ಚಿಂತನೆ ನಡೆಸಿದೆ.

​​​​​​ಬಜೆಟ್ ಸಂಬಂಧಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅದರಂತೆ ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಸಾಲ ಯೋಜನೆ, ಸಣ್ಣ ಕೈಗಾರಿಕೋದ್ಯಮಿಗಳಿಗೆ ಬಡ್ಡಿ ವಿನಾಯ್ತಿ, ಗ್ರಾಚ್ಯುಟಿ ಮೊತ್ತ 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ, ಹೊಸ ಪೆನ್ಷನ್ ಸ್ಕೀಂನಲ್ಲಿ ನಿಯಮ ಸಡಿಲಿಕೆ, ಕೆಲಸದ ಅವಧಿಯಲ್ಲಿ ಕಾರ್ಮಿಕ ಮೃತಪಟ್ಟರೆ 6 ಲಕ್ಷ ರೂ.ವೆರೆಗೆ ಪರಿಹಾರ ಸೇರಿದಂತೆ ಹಲವು ಯೋಜನೆಗಳನ್ನು ಪ್ರಕಟಿಸಲಾಗಿದೆ. 

ಇನ್ನು ಮೇಕ್ ಇನ್ ಇಂಡಿಯಾ ಉಪಕ್ರಮದಡಿ ಆಧುನಿಕ ಉದ್ಯಮ ತಂತ್ರಜ್ಞಾನಗಳನ್ನು ಬಳಸಿಕೊಂಡು ಗ್ರಾಮೀಣ ಔದ್ಯಮೀಕರಣದ ವಿಸ್ತರಣೆಯ ಗುರಿ ಹೊಂದಲಾಗಿದ್ದು, ಎರಡು ವರ್ಷದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದೇ ವೇಳೆ ಪಿಂಚಣಿ ಯೋಜನೆಯಡಿ 60 ವರ್ಶದ ಬಳಿಕ ಸಂಘಟಿತ ಕಾರ್ಮಿಕರಿಗೆ 3 ಸಾವಿರ ರೂ ಪಿಂಚಣಿ ನೀಡುವ ಯೋಜನೆಯನ್ನು ಘೋಷಿಸಲಾಗಿದೆ. ಬೀದಿ ಬದಿ ವ್ಯಾಪಾರಿ ರಿಕ್ಷಾವಾಲಗಳ ಭದ್ರತೆಗೆ ಕ್ರಮಕೈಗೊಳ್ಳಲಾಗಿದ್ದು, ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಗೆ 500 ಕೋಟಿ ಮೀಸಲು ಇರಿಸಲು ನಿರ್ಧರಿಸಲಾಗಿದೆ. 

ಇನ್ನು ಒಟ್ಟಾರೆ ಬಂಡವಾಳ ವೆಚ್ಚ 3,36,292 ಲಕ್ಷ ಕೋಟಿ ರೂ. ಆಗಿದೆ ಎಂದು ಗೋಯಲ್ ಸದನಕ್ಕೆ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios