Asianet Suvarna News Asianet Suvarna News

ಪಾಕ್ ಮೇಲೆ ಮತ್ತೊಂದು ಬಾಂಬ್: ಇಮ್ರಾನ್ ನೀರಿಳಿಸ್ತಿದ್ದಾರೆ ಮೋದಿ!

ಪಾಕಿಸ್ತಾನದ ಮೇಲೆ ಎರಡನೇ ಬಾಂಬ್ ಪ್ರಯೋಗಿಸಿದ ಪ್ರಧಾನಿ ಮೋದಿ| ಭಾರತದ ಎಚ್ಚರಿಕೆ ಕೇಳಿ ಸುಸ್ತು ಹೊಡೆದ ಪಾಕಿಸ್ತಾನ| ಉಗ್ರರಿಗೆ ಕುಮ್ಮಕ್ಕು ಕೊಡುವ ಪಾಕ್ ವಿರುದ್ಧ ಭಾರತ ವಾಟರ್ ವಾರ್| 1960 ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಮರು ಪರಿಷ್ಕರಣೆ| ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ನಿತಿನ್ ಗಡ್ಕರಿ ಗಂಭೀರ ಎಚ್ಚರಿಕೆ| ಜಲದಿಗ್ಬಂಧನ ಹೇರಿಕೆ ಎಚ್ಚರಿಕೆ ಕೊಟ್ಟ ಕೇಂದ್ರ ಜಲಸಂಪನ್ಮೂಲ ಸಚಿವ|

India Warns Pakistan To Revise Sindhu Water Distribution Agreement
Author
Bengaluru, First Published Feb 21, 2019, 3:41 PM IST

ನವದೆಹಲಿ(ಫೆ.21): ನಿನ್ನೆಯಷ್ಟೇ ಪಾಕಿಸ್ತಾನದ ವಿರುದ್ಧ ಬ್ಯುಸಿನೆಸ್ ಬಾಂಬ್ ಪ್ರಯೋಗಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ಆ ದೇಶದ ವಿರುದ್ಧ ವಾಟರ್ ಬಾಂಬ್ ಪ್ರಯೋಗಿಸಿದ್ದಾರೆ.

ಏನಿದು ವಾಟರ್ ಬಾಂಬ್ ಅಂತೀರಾ?. ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ 1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದನವನ್ನು ಮರುಪರಿಶೀಲಿಸಲು ಭಾರತ ಮುಂದಾಗಿದೆ.

"

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ನಿಲ್ಲಿಸದಿದ್ದರೆ 1960ರ ಭಾರತ-ಪಾಕಿಸ್ತಾನ ನಡುವಿನ ಸಿಂಧೂ ನದಿ ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕೃಷಿಗಾಗಿ ಸಿಂಧೂ ನದಿ ನೀರು ನೆಚ್ಚಿಕೊಂಡಿರುವ ಪಾಕ್‌ಗೆ ಈ ಮೂಲಕ ಭಾರತ ಗಂಭಿರ ಎಚ್ಚರಿಕೆ ನೀಡಿದ್ದು, ನೀರು ಸಿಗದಿದ್ದರೆ ಕೃಷಿ ಕ್ಷೇತ್ರ ಕಂಗಾಲಾಗಿ ಕೃಷಿ ನಂಬಿಕೊಂಡವರು ಉದ್ಯೋಗವಿಲ್ಲದೇ ಪರದಾಡಬೇಕಾಗುತ್ತದೆ. ಅಲ್ಲದೇ ಅತ್ಯಂತ ಫಲವತ್ತಾದ ಈ ಪ್ರದೇಶದಲ್ಲಿ ಸಿಂಧೂ ನದಿ ನೀರನ್ನೇ ನೆಚ್ಚಿಕೊಂಡು ಕೈಗಾರಿಕೆಗಳು ನಿರ್ಮಿತವಾಗಿವೆ.

ಒಂದು ವೇಳೆ ಭಾರತದಿಂದ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಕುರಿತು ಮರುಪರಿಶೀಲನೆ ನಡೆದರೆ ಪಾಕಿಸ್ತಾನದ ಆರ್ಥಿಕತೆಗೆ ಭಾರೀ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗಿದೆ. 

ಪಾಕ್ ಮೇಲೆ ಬಿತ್ತು ಬಾಂಬ್: ಮೋದಿ ಹೊಡೆತಕ್ಕೆ ಇಮ್ರಾನ್ ಲಬೋ ಲಬೋ!

Follow Us:
Download App:
  • android
  • ios