Asianet Suvarna News Asianet Suvarna News

ಮೋದಿ ಇನ್ನೂ ಮೈಸೂರು ಮುಟ್ಟಿಲ್ಲ: ವಿಶ್ವ ಬ್ಯಾಂಕ್ ವರದಿಗೆ ಪಾಕ್ ವಿಲವಿಲ!

ವಿಶ್ವ ವೇದಿಕೆಯಲ್ಲಿ ಮತ್ತೆ ಪ್ರತಿಧ್ವನಿಸಿದ ಭಾರತ| ಭಾರತವನ್ನು ಹಾಡಿ ಹೊಗಳಿದ ವಿಶ್ವ ಬ್ಯಾಂಕ್ ನೂತನ ವರದಿ| ಭಾರತಕ್ಕೆ ವಿದೇಶೀ ಹೂಡಿಕೆದಾರ ರಾಷ್ಟ್ರದ ಅಗ್ರ ಸ್ಥಾನಮಾನ| 2018ರಲ್ಲಿ ವಿದೇಶಗಳಿಂದ 79 ಶತಕೋಟಿ ಡಾಲರ್ ಹಣ ಪಡದ ಭಾರತ| ವಿಶ್ವ ಬ್ಯಾಂಕ್‌ನ ವಲಸೆ ಮತ್ತು ಅಭಿವೃದ್ಧಿ ವಿಭಾಗದ ಅಂಕಿ ಅಂಶ| ಚೀನಾ, ಮೆಕ್ಸಿಕೊ, ಫಿಲಿಪೈನ್ಸ್, ಈಜಿಪ್ಟ್ ನಂತರದ ಸ್ಥಾನದಲ್ಲಿ| ಸೌದಿಯಲ್ಲಿ ಹಣದುಬ್ಬರದ ಕಾರಣಕ್ಕೆ ಪಾಕಿಸ್ತಾನಕ್ಕೆ ಹಣದ ಪೂರೈಕೆ ವ್ಯತ್ಯಯ|

India Retained Its Position As The World Top Recipient Of Remittances
Author
Bengaluru, First Published Apr 9, 2019, 4:13 PM IST

ವಾಷಿಂಗ್ಟನ್(ಏ.09): ವಿದೇಶೀ ಹೂಡಿಕೆದಾರ ರಾಷ್ಟ್ರದ ಅಗ್ರ ಸ್ಥಾನಮಾನವನ್ನು ತನ್ನಲ್ಲೇ ಉಳಿಸಿಕೊಂಡಿರುವ ಭಾರತ, 2018 ರಲ್ಲಿ 79 ಶತಕೋಟಿ ಡಾಲರ್ ಹಣವನ್ನು ವಿದೇಶಗಳಿಂದ ಪಡೆದಿದೆ.

ಈ ಕುರಿತು ವರದಿ ಪ್ರಕಟಿಸಿರುವ ವಿಶ್ವ ಬ್ಯಾಂಕ್, ಅಗ್ರ ವಿದೇಶೀ ಹೂಡಿಕೆದಾರ ರಾಷ್ಟ್ರದ ಸ್ಥಾನಮಾನವನ್ನು ಉಳಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ಹೇಳಿದೆ.

ಚೀನಾ(67 ಶತಕೋಟಿ ಡಾಲರ್), ಮೆಕ್ಸಿಕೊ(36 ಶತಕೋಟಿ ಡಾಲರ್), ಫಿಲಿಪೈನ್ಸ್(34 ಶತಕೋಟಿ ಡಾಲರ್) ಹಾಗೂ ಈಜಿಪ್ಟ್(29 ಶತಕೋಟಿ ಡಾಲರ್) ವಿದೇಶಿ ಹಣ ಪಡೆಯುವ ಮೂಲಕ ಕ್ರಮವಾಗಿ ಭಾರತದ ನಂತರದ ಸ್ಥಾನದಲ್ಲಿವೆ.

ವಿಶ್ವ ಬ್ಯಾಂಕ್ ನ ವಲಸೆ ಮತ್ತು ಅಭಿವೃದ್ಧಿ ವಿಭಾಗದ ಸಂಕ್ಷಿಪ್ತ ಅಂಕಿ ಅಂಶಗಳ ವರದಿಯ ಆಧಾರದಲ್ಲಿ, ಹಣ ಪಾವತಿ ಮಾಡುವಲ್ಲಿ ಭಾರತ ತನ್ನ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಭಾರತ ವಿದೇಶಗಳಿಂದ ಪಡೆದ ಹಣದಲ್ಲಿ ಹೆಚ್ಚಳವಾಗುತ್ತಾ ಬಂದಿದೆ.

2016 ರಲ್ಲಿ ಭಾರತಕ್ಕೆ 62.7 ಶತಕೋಟಿ ಡಾಲರ್ ಹಣ ಹರಿದು ಬಂದರೆ, 2017 ರಲ್ಲಿ  65.3 ಶತಕೋಟಿ ಡಾಲರ್ ಹಣ ಬಂದಿತ್ತು. ಈ ಅವಧಿಯಲ್ಲಿ ಭಾರತಕ್ಕೆ ಶೇ.14ರಷ್ಟು ಹೆಚ್ಚುವರಿ ಹಣ ಹರಿದು ಬಂದಿದೆ. 

ಈ ಹೆಚ್ಚುವರಿ ಹಣದ ಒಳ ಹರಿವಿಗೆ ಕಾರಣ ನೀಡಿರುವ ವಿಶ್ವ ಬ್ಯಾಂಕ್, ಕೇರಳದ ಪ್ರವಾಹದ ಸಂದರ್ಭದಲ್ಲಿ ವಲಸಿಗರು ತಮ್ಮ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿದ್ದು ಹೆಚ್ಚುವರಿ ಹಣ ಹರಿದು ಬರಲು ಕಾರಣ ಎಂದು ಹೇಳಿದೆ.

ಇದೇ ವೇಳೆ ಸೌದಿ ಅರೇಬಿಯಾದಲ್ಲಿ ಉಂಟಾದ ಹಣದುಬ್ಬರದ ಕಾರಣ, ಪಾಕಿಸ್ತಾನಕ್ಕೆ ಹಣದ ಪೂರೈಕೆ ವ್ಯತ್ಯಯವಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಿದೆ.

Follow Us:
Download App:
  • android
  • ios