Asianet Suvarna News Asianet Suvarna News

ಮೋದಿ ಬಗ್ಗದ ಆಸಾಮಿ: ಆಕಾಶಕ್ಕೆ ಮುತ್ತಿಕ್ಕಿದೆ ನಮ್ಮ ಎಕಾನಮಿ!

ಅಪನಗದೀಕರಣದಿಂದಾಗಿ ದೇಶದ ಅರ್ಥ ವ್ಯವಸ್ಥೆ ಮೇಲೆ ದುಷ್ಪರಿಣಾಮ?| ಭಾರತದ ಅತ್ಯಂತ ವೇಗದ ಆರ್ಥಿಕ ಪ್ರಗತಿ ವಿಶ್ವ ದಂಗು| 2018-19ರ ವಿತ್ತೀಯ ವರ್ಷದಲ್ಲಿ ಭಾರತದ ಜಿಡಿಪಿ ಗರಿಷ್ಠ ಬೆಳವಣಿಗೆ|ಭಾರತದ ಸಾಧನೆ ಹೇಳುತ್ತಿವೆ ಐಎಂಎಫ್ ಅಂಕಿ ಅಂಶಗಳು| ವಿಶ್ವದಲ್ಲೇ ಅತ್ಯಂತ ವೇಗದ ಆರ್ಥಿಕ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರ ಎಂಬ ಹೆಗ್ಗಳಿಕೆ

IMF Data Shows India Becoming world Fastest Growing Economy
Author
Bengaluru, First Published Dec 20, 2018, 12:39 PM IST

ನವದೆಹಲಿ(ಡಿ.20): ಅಪನಗದೀಕರಣದಿಂದಾಗಿ ದೇಶದ ಅರ್ಥ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿದೆ ಎಂಬುದು ಒಂದು ವಾದ. ಈ ವಾದದ ಕುರಿತು ಚರ್ಚೆ ಅಗತ್ಯ ಹೌದಾದರೂ, ಈ ವಾದಕ್ಕೆ ವಿರುದ್ಧವಾಗಿ ಭಾರತ ಅತ್ಯಂತ ವೇಗವಾಗಿ ಆರ್ಥಿಕ ಪ್ರಗತಿ ಸಾಧಿಸುತ್ತಿರುವುದು ಅಂಕಿ ಅಂಶಗಳಿಂದ ಬಹಿರಂಗವಾಗಿದೆ.

2018-19ರ ವಿತ್ತೀಯ ವರ್ಷದಲ್ಲಿ ಮತ್ತು ಕಳೆದ 2 ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಗರಿಷ್ಠ ಬೆಳವಣಿಗೆ ಕಂಡಿದೆ ಎಂದು ಐಎಂಎಫ್ ಅಂಕಿ ಅಂಶಗಳು ತಿಳಿಸಿವೆ.

ಇತ್ತೀಚೆಗೆ 2ನೇ ತ್ರೈಮಾಸಿಕ (ಜುಲೈ-ಸೆಪ್ಟಂಬರ್‌) ಅವಧಿಯಲ್ಲಿ ಭಾರತದ ಜಿಡಿಪಿ ಶೇ. 7.1 ರಷ್ಟು ದಾಖಲಾಗಿದ್ದು, ವಿಶ್ವದ ಜಿಡಿಪಿ ಮತ್ತು ಭಾರತದ ಜಿಡಿಪಿಗೆ ಹೋಲಿಕೆ ಮಾಡಿದರೆ 2017ರಲ್ಲಿ ಶೇ.3.2 ಹೆಚ್ಚಾಗಿದೆ.

2014ರಲ್ಲಿ ವಿಶ್ವದ ಜಿಡಿಪಿ ಮತ್ತು ಭಾರತದ ಜಿಡಿಪಿಗೆ ಹೋಲಿಕೆ ಶೇ.2.6 ಇತ್ತು. ಇದೀಗ ಶೇ.3.2 ಹೆಚ್ಚಾಗಿದ್ದು, ಭಾರತ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಆರ್ಥಿಕ ಪ್ರಗತಿ ಸಾಧಿಸುತ್ತಿರುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.

ಇದೇ ವೇಳೆ 2014-15 ರಿಂದ 2017-18ರ ನಡುವೆ ಜಿಡಿಪಿ 7.3% ದಾಖಲಾಗಿದ್ದು, ಇದು ವಿಶ್ವದಲ್ಲೇ ಅತ್ಯಂತ ವೇಗದ ಆರ್ಥಿಕ ಬೆಳವಣಿಗೆ ಇದಾಗಿದೆ.

ಅದರಂತೆ ಇಂಟರ್ ನ್ಯಾಷನಲ್‌ ಮೊನಿಟರಿ ಫಂಡ್ ಅಕ್ಟೋಬರ್‌ 2018ರ ವರದಿ ಪ್ರಕಾರ, ಪ್ರಸ್ತಕ್ತ ವಿತ್ತೀಯ ವರ್ಷದಿಂದ ಮುಂಬರುವ ಹಣಕಾಸು ವರ್ಷ 2020ರ ನಡುವೆ ಭಾರತದ ಆರ್ಥಿಕತೆ ವಿಶ್ವದ ದೊಡ್ಡ ಆರ್ಥಿಕ ರಾಷ್ಟ್ರಗಳ ಪೈಕಿ ಗುರುತಿಸಲ್ಪಡಲಿದೆ.

ಅಣ್ಣಾ ಬಿಟ್ಬಿಡು ಚಿಂತೆ: ಎಕಾನಮಿ ಮಜಬೂತ್ ಆಗೈತೆ!

ಇದಪ್ಪಾ ವರಸೆ ಅಂದ್ರೆ - ಯುಪಿಎ ಜಿಡಿಪಿ ಇಳಿಸಿದ ಎನ್‌ಡಿಎ!

4 ವರ್ಷ ಸುಳ್ಳು ಹೇಳಿದ್ರಾ ಮೋದಿ: ಅವ್ರದ್ದೇ ಡಾಟಾ ಹೇಳ್ತಿದೆ ನೋಡಿ!

Follow Us:
Download App:
  • android
  • ios