Asianet Suvarna News Asianet Suvarna News

Karnataka Budget 2019: ಯಾವ ಜಿಲ್ಲೆಗೆ ಸಿಕ್ಕಿದ್ದೆಷ್ಟು?

ಕಳೆದ ಬಜೆಟ್‌ನಲ್ಲಿ ಹಾಸನ, ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು, ಹಲವು ಯೋಜನೆಗಳನ್ನು ರೂಪಿಸಿದ್ದ ಕುಮಾರಸ್ವಾಮಿ ಈ ಬಾರಿ ಪ್ರತಿಯೊಂದೂ ಜಿಲ್ಲೆಗೂ ಅನುದಾನ ನೀಡಲು ಯತ್ನಿಸಿದ್ದಾರೆ. ಆದರೆ, ಕೆಲವು ಜಿಲ್ಲೆಗಳಿಗೆ ನೀಡಿರುವ ಅನುದಾನ ಕಡಿಮೆಯೇ ಎನ್ನುವ ಮಾತುಗಳ ಕೇಳಿ ಬರುತ್ತಿದೆ.

Grants allocated to districts in Karnataka Budget 2019
Author
Bengaluru, First Published Feb 8, 2019, 3:26 PM IST

ಬೆಂಗಳೂರು: ಕೇವಲ ರಾಮನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗೆ ಸೀಮಿತವಾದ ಬಜೆಟ್ ಎಂಬ ಅಪವಾದದಿಂದ ಹೊರಬರಲು ಯತ್ನಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಯೊಂದೂ ಜಿಲ್ಲೆಗೂ ಒಂದಲ್ಲ ಒಂದು ಅನುದಾನ ನೀಡಿದ್ದಾರೆ. ಯಾವ ಜಿಲ್ಲೆಗೆ ಸಿಕ್ಕ ಅನುದಾನವೆಷ್ಟು? ಯಾವ ಯೋಜನೆಗೆ? ಇಲ್ಲಿದೆ ಮಾಹಿತಿ....

ರಾಮನಗರ 
- ಚನ್ನಪಟ್ಟಣದ ಸಿಲ್ಕ್ ಇಂಡಸ್ಟ್ರ್ಟೀಸ್ ಪುನಶ್ಚೇತನ - 10 ಕೋಟಿ ಅನುದಾನ 
- ರೇಷ್ಮೆ ಘಟಕ ಬಲವರ್ಧನೆ - 5 ಕೋಟಿ ರೂ. 
- ಮಾವು ಸಂಸ್ಕರಣಾ ಘಟಕ - 10 ಕೋಟಿ ರೂ.
-  ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ಪಾರಂಪರಿಕ ಕೇಂದ್ರ - 25 ಕೋಟಿ ರೂ.

ಹಾಸನ 
-  ಹೊಳೆನರಸೀಪುರದಲ್ಲಿ ಕೆರೆ ತುಂಬಿಸುವ ಯೋಜನೆ - 50 ಕೋಟಿ ರೂ. 
- ವಿಮಾನ ನಿಲ್ದಾಣ - 
ಹಾಸನ - ಅರಸೀಕೆರೆಯಲ್ಲಿ ಉಪ ಕಾರಾಗೃಹ - 30 ಕೋಟಿ ರೂ.

ಮಂಡ್ಯ 
- ಇಸ್ರೇಲ್ ಮಾದರಿ ಕೃಷಿ ಪ್ರಾತ್ಯಕ್ಷಿಕೆ ಕೇಂದ್ರ - 10 ಕೋಟಿ ರೂ. 
- ಮೇಲುಕೋಟೆ ಸಮಗ್ರ ಅಭಿವೃದ್ಧಿ - 5 ಕೋಟಿ ರೂ.
-  ಮೈಸೂರು​ ಶುಗರ್​ ಕಾರ್ಖಾನೆ - 100 ಕೋಟಿ ರೂ.
- ಸಮಗ್ರ ಕೈಗಾರಿಕಾ ಅಭಿವೃದ್ಧಿ - 50 ಕೋಟಿ ರೂ.

ಬೆಂಗಳೂರು 
-  117 ತ್ಯಾಜ್ಯ ನೀರು ಸಂಸ್ಕರಣಾ ಘಟಕ - 8015 ಕೋಟಿ ರೂ. 
- ವಿಮಾನ ನಿಲ್ದಾಣ ಮಾರ್ಗ ನಿರ್ಮಾಣ - 16, 579 ಕೋಟಿ ರೂ.
- ದೊಡ್ಡಬಿದರಕಲ್ಲಿನಲ್ಲಿ ಕಲಾ ಗ್ರಾಮ - 10 ಕೋಟಿ ರೂ.
- ಹಲಸೂರಿನ ಗುರುದ್ವಾರಕ್ಕೆ 25 ಕೋಟಿ ರೂ.
- ಸಂವಿಧಾನ ಮ್ಯೂಸಿಯಂ ಸ್ಥಾಪನೆ - 20 ಕೋಟಿ ರೂ. 
- ಎಲಿವೇಟೆಡ್​ ಕಾರಿಡಾರ್ ಯೋಜನೆ - 1 ಸಾವಿರ ಕೋಟಿ ರೂ.

ರಾಜ್ಯ ರಾಜಧಾನಿಗೆ ಮತ್ತೇನು ಸಿಕ್ಕಿದೆ?

ಬೀದರ್
 - ನಾಗರೀಕ ವಿಮಾನ ನಿಲ್ದಾಣ - 32 ಕೋಟಿ 
- ಪ್ರತ್ಯೇಕ ವಿಶಿಷ್ಟ ಕೇಂದ್ರ ಕಾರಾಗೃಹ - 50 ಕೋಟಿ 
- ಗುರುನಾನಕ್ ಜೀರಾ ಗುರುದ್ವಾರ - 10 ಕೋಟಿ 

ಕೋಲಾರ 
- ಟೋಮ್ಯಾಟೋ ಸಂಸ್ಕರಣಾ ಘಟಕ - 10 ಕೋಟಿ ಅನುದಾನ 
- ಶಿವಾರಪಟ್ಟಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರ - 10 ಕೋಟಿ

ಉಡುಪಿ 
- ಜಟ್ಟಿ ಹಾಗೂ ತ್ಯಾಜ್ಯ ನಿರ್ವಹಣಾ ಘಟಕ - 15 ಕೋಟಿ ಅನುದಾನ 
- ಕಾರ್ಕಳದಲ್ಲಿ ಎಣ್ಣೆ ಹೊಳೆ ಯೋಜನೆ - 40 ಕೋಟಿ ಅನುದಾನ
- ಪಣಂಬೂರು ಪ್ರವಾಸೋದ್ಯಮ ಅಭಿವೃದ್ಧಿ - 7 ಕೋಟಿ
- ಕೆರೆ ತುಂಬಿಸುವ ಯೋಜನೆ - 40 ಕೋಟಿ ಅನುದಾನ

ಬಳ್ಳಾರಿ 
- ಕಂಪ್ಲಿ ನೀರಾವರಿ ಯೋಜನೆಗೆ 75 ಕೋಟಿ
- ಹಂಪಿ ವ್ಯಾಖ್ಯಾನ ಕೇಂದ್ರ - 1 ಕೋಟಿ 

ಗದಗ 
- ಮೆಣಸು, ಹೆಸರುಕಾಳು ಸಂಸ್ಕರಣಾ ಘಟಕ - 50 ಕೋಟಿ ಅನುದಾನ

ಹುಬ್ಬಳ್ಳಿ 
- ಮೆಣಸು, ಹೆಸರುಕಾಳು ಸಂಸ್ಕರಣಾ ಘಟಕ - 50 ಕೋಟಿ ಅನುದಾನ

ಶಿವಮೊಗ್ಗ 
- ಶಿಕಾರಿಪುರದ 200 ಕೆರೆ ತುಂಬಿಸುವಯೋಜನೆ - 200 ಕೋಟಿ ಅನುದಾನ 

ಕೊಡಗು 
- ಪುನರ್ವಸತಿ ನಿರ್ಮಾಣಕ್ಕೆ 2 ಕೋಟಿ ಅನುದಾನ 

ತುಮಕೂರು 
- K - Tech ನಾವೀನ್ಯತೆ ಕೇಂದ್ರ - 7 ಕೋಟಿ 

ಬಾಗಲಕೋಟೆ 
- ಬಾದಾಮಿ ಪ್ರವಾಸಿ ತಾಣ - ಕರಕುಶಲ ಮಾರುಕಟ್ಟೆ ಅಭಿವೃದ್ಧಿ - 25 ಕೋಟಿ 

4 ಹೊಸ ತಾಲೂಕುಗಳ ರಚನೆಗೆ ಅಸ್ತು

ಮೈಸೂರು 
- ಡಬಲ್​ ಡೆಕ್ಕರ್​ ಬಸ್​ ಸೇವೆ - 5 ಕೋಟಿ 

ವಿಜಯಪುರ 
- ಪ್ರತ್ಯೇಕ ವಿಶಿಷ್ಟ ಕೇಂದ್ರ ಕಾರಾಗೃಹ - 50 ಕೋಟಿ 

ಚಿಕ್ಕಮಗಳೂರು 
- ಬಾಲಕಿಯರ ಬಾಲಮಂದಿರ - 3 ಕೋಟಿ 

ನೀರಾವರಿಗೆ ದಕ್ಕಿದ್ದೆಷ್ಟು?

ಚಾಮರಾಜನಗರ
ರೇಷ್ಮೆ ಕಾರ್ಖಾನೆ ಪುನಶ್ಚೇತನ - 5 ಕೋಟಿ ಅನುದಾನ 

ಹಾವೇರಿ 
- ರೇಷ್ಮೆ ಘಟಕ ಬಲವರ್ಧನೆ - 5 ಕೋಟಿ ರೂ ಅನುದಾನ 

ರೈತರಿಗೆ ಮತ್ತಷ್ಟು ಬಲ ತುಂಬದಿ ಕುಮಾರಣ್ಣ

ರಾಯಚೂರು 
- ಕೃಷಿ ಪ್ರಾತ್ಯಕ್ಷಿಕೆ ಕೇಂದ್ರ ಸ್ಥಾಪನೆ - 10 ಕೋಟಿ ರೂ ಅನುದಾನ 

ಬೆಂಗಳೂರು-ಗ್ರಾಮೀಣ
ದೊಡಬಳ್ಳಾಪುರ ಆಸ್ಪತ್ರೆ ಮೇಲ್ದರ್ಜೆಗೆ- 10 ಕೋಟಿ ರೂ.

ಬಜೆಟ್ ಸಂಬಂಧೀ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉತ್ತರ ಕರ್ನಾಟಕ
ಕಾರವಾರದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪಿಸಲು ಮೂರು ವರ್ಷಗಳ ಹಿಂದೆಯೇ ಅನುಮೋದನೆ ಸಿಕ್ಕಿದ್ದು, ಇದೀಗ ಆಸ್ಪತ್ರೆ ನಿರ್ಮಾಣಕ್ಕೆ 150 ಕೋಟಿ ರು. ಅನುದಾನ ನೀಡಲಾಗಿದೆ.

ಚಿತ್ರದುರ್ಗ
- ಕೆರೆ ಅಭಿವೃದ್ದಿಗೆ 105 ಕೋಟಿ ರೂ.
- ಚಳ್ಳಕೆರೆ ತಾಲೂಕಿನಲ್ಲಿ ವೇದಾವತಿ ನದಿಗೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ 25 ಕೋಟಿ ರೂ.
-ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತರಬೇತಿ ಕೇಂದ್ರಕ್ಕೆ 1 ಕೋಟಿ ರೂ.

Follow Us:
Download App:
  • android
  • ios