Asianet Suvarna News Asianet Suvarna News

ಇನ್ನು ಖಾಸಗಿಯವರಿಗೂ ಪೆಟ್ರೋಲ್ ಬಂಕ್ ತೆರೆಯಲು ಅವಕಾಶ

 ಇನ್ಮುಂದೆ ಪೆಟ್ರೋಲ್-ಡೀಸೆಲ್ ಮಾರಾಟ ಅವಕಾಶವು ಈಗ ತೈಲ ಮಾರಾಟ ವಲಯದಲ್ಲಿ ಇಲ್ಲದ ಕಂಪನಿಗಳಿಗೂ ಲಭ್ಯವಾಗಲಿದೆ.

Govt relaxes fuel retailing norms private firms can set up Petrol Pump
Author
Bengaluru, First Published Oct 24, 2019, 10:46 AM IST

ನವದೆಹಲಿ [ಅ.24]: ಈವರೆಗೆ ತೈಲ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದ ಕಂಪನಿಗಳಿಗೆ ಮಾತ್ರ ಮೀಸಲಾಗಿದ್ದ ಪೆಟ್ರೋಲ್-ಡೀಸೆಲ್ ಮಾರಾಟ ಅವಕಾಶವು ಈಗ ತೈಲ ಮಾರಾಟ ವಲಯದಲ್ಲಿ ಇಲ್ಲದ ಕಂಪನಿಗಳಿಗೂ ಲಭ್ಯವಾಗಲಿದೆ. ಪೈಪೋಟಿ ಹೆಚ್ಚಿಸುವ ಉದ್ದೇಶದಿಂದ ತೈಲೇತರ ಕಂಪನಿಗಳೂ ತೈಲ ಮಾರಾಟ ಕ್ಷೇತ್ರಕ್ಕೆ ಧುಮುಕಲು ಕೇಂದ್ರ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ.

ಈವರೆಗೆ ಹೈಡ್ರೋಕಾರ್ಬನ್ ಉತ್ಖನನ ಹಾಗೂ ಉತ್ಪಾದನೆ, ತೈಲ ಶುದ್ಧೀಕರಣ, ಎಲ್ ಎನ್‌ಜಿ ಅನಿಲ ಉತ್ಪಾದನಾ ವಲಯದಲ್ಲಿ 2 ಸಾವಿರ ಕೋಟಿ ರು. ಹೂಡುವ ಕಂಪನಿಗಳಿಗೆ ಮಾತ್ರ ಪೆಟ್ರೋಲ್, ಡೀಸೆಲ್, ಎಲ್‌ಎನ್‌ಜಿ ಬಂಕ್ ತೆರೆಯಲು ಸರ್ಕಾರ ಅವಕಾಶ ನೀಡು ತ್ತಿತ್ತು. ಆದರೆ ಈಗ 250 ಕೋಟಿ ರು. ವಹಿವಾಟು ನಡೆಸುವ ಯಾವುದೇ ಕಂಪನಿಯು ಬಂಕ್ ತೆರೆಯಲು ಅವಕಾಶ ನೀಡಲಾಗುತ್ತದೆ. 

ವಾಹನ ಸವಾರರೇ ಎಚ್ಚರ : ಇನ್ಮುಂದೆ ಹಿಂಗ್ ಮಾಡಿದ್ರೆ ಪೆಟ್ರೋಲ್ ಸಿಗಲ್ಲ...

ಆದರೆ ಅವುಗಳ ಶೇ. 5ರಷ್ಟು ಬಂಕ್‌ಗಳು ಗ್ರಾಮೀಣ ಕ್ಷೇತ್ರದಲ್ಲಿರಬೇಕು ಎಂಬ ಷರತ್ತು ವಿಧಿಸಲಾಗುತ್ತದೆ ಎಂದು ಸಂಪುಟ ಸಭೆಯ ಬಳಿಕ ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು. ಈಗ ಸರ್ಕಾರಿ ಸ್ವಾಮ್ಯದ ಐಒಸಿ, ಬಿಪಿಸಿಎಲ್, ಎಚ್‌ಪಿಸಿಎಲ್ ಕಂಪನಿಗಳು 65 ಸಾವಿರ ಬಂಕ್ ಗಳನ್ನು ಹೊಂದಿವೆ. ರಿಲಯನ್ಸ್, ನಯಾರಾ ಎನರ್ಜಿ (ಎಸ್ಸಾರ್), ರಾಯಲ್ ಡಚ್ ಶೆಲ್- ಮುಂತಾದವು ಖಾಸಗಿ ತೈಲ ಮಾರಾಟ ಕಂಪನಿಗಳಾಗಿವೆ.

Follow Us:
Download App:
  • android
  • ios