Asianet Suvarna News Asianet Suvarna News

ಏನಿದು ವಿಚಿತ್ರ?: ಚಿನ್ನ, ಬೆಳ್ಳಿ ದರ ದಿಢೀರ ಕುಸಿತ!

ಏಕಾಏಕಿ ಕುಸಿದ ಚಿನ್ನ ಮತ್ತು ಬೆಳ್ಳಿದರ| ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕುಸಿತ| ಸ್ಥಳೀಯ ವರ್ತಕರಿಂದ ಬೇಡಿಕೆ ಕಡಿಮೆ| 10 ಗ್ರಾಂ ಚಿನ್ನದ ಬೆಲೆಯಲ್ಲಿ 124 ರೂ. ಕಡಿಮೆ| ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ 


 

Gold, Silver Price Lower in Morning Trade
Author
Bengaluru, First Published Dec 13, 2018, 6:03 PM IST

ನವದೆಹಲಿ(ಡಿ.13): ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕುಸಿತ ಹಾಗೂ ಸ್ಥಳೀಯ ವರ್ತಕರಿಂದ ಬೇಡಿಕೆ ಕಡಿಮೆಯಾದ ಕಾರಣ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ. 

ಇಂದಿನ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆಯಲ್ಲಿ 124 ರೂ. ಕಡಿಮೆಯಾಗಿದೆ. ಹೀಗಾಗಿ ಇಂದಿನ ಚಿನ್ನದ ಬೆಲೆ 31,608ರೂ. ಆಗಿದೆ. ಅದೇ ರೀತಿ ಬೆಳ್ಳಿ ಬೆಲೆಯೂ ಇಳಿಮುಖವಾಗಿದ್ದು ಒಂದು ಕೆ.ಜಿ ಬೆಳ್ಳಿ ಬೆಲೆ 38,344ರೂ. ಆಗಿದೆ. 

ಇನ್ನು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 29,680 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 31,743 ರೂ. ಆಗಿದೆ. ಇದೇ ವೇಳೆ ಗ್ರಾಂ ಲೆಕ್ಕಾಚಾರದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 2968 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 3174 ರೂ. ಆಗಿದೆ.

Gold, Silver Price Lower in Morning Trade

ಅದರಂತೆ ಬೆಂಗಳೂರಿನಲ್ಲಿ ಒಂದು ಕೆ.ಜಿ ಬೆಳ್ಳಿ ಬೆಲೆ 40,700 ರೂ. ಆಗಿದೆ.

Follow Us:
Download App:
  • android
  • ios