Asianet Suvarna News Asianet Suvarna News

ಅತಿ ಕಡಿಮೆ ಬೆಲೆ ದಾಖಲಾದ ಚಿನ್ನ, ಬೆಳ್ಳಿ ದರ!

ಇಳಿಕೆಯತ್ತ ಮುಖ ಮಾಡಿದ ಚಿನ್ನದ ದರ| ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ| ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತದ ಪರಿಣಾಮ| ಡಾಲರ್ ಮೌಲ್ಯ ಪ್ರಬಲವಾಗ್ತಿದ್ದಂತೇ ಚಿನ್ನದ ದರ ಕುಸಿತ| ನಾಣ್ಯ ತಯಾರಕರಿಂದ ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ಬೆಳ್ಳಿ ಬೆಲೆಯಲ್ಲಿ ಕುಸಿತ|

Gold Falls in Futures Trade on Weak Spot Demand
Author
Bengaluru, First Published Mar 1, 2019, 2:06 PM IST

ನವದೆಹಲಿ(ಮಾ.01): ಸ್ಥಳೀಯ ವರ್ತಕರಿಂದ ಚಿನ್ನಕ್ಕೆ ಬೇಡಿಕೆ ಕುಸಿದ ಪರಿಣಾಮವಾಗಿ ಚಿನಿವಾರ ಪೇಟೆ ವಹಿವಾಟಿನಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ.

ಡಾಲರ್ ಮೌಲ್ಯ ಪ್ರಬಲವಾದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಗಮನಾರ್ಹ ಇಳಿಮುಖವಾಗಿದೆ. ಡಾಲರ್ ಮೌಲ್ಯ ಏರಿಕೆಯ ಪರಿಣಾಮ ಕಳೆದ ಎರಡು ವಾರಗಳಿಗೆ ಹೋಲಿಸಿದರೆ ಇಂದಿನ ಚಿನ್ನದ ಬೆಲೆ ಅತಿ ಕಡಿಮೆ ದಾಖಲಾಗಿದೆ.


ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) 10 ಗ್ರಾಂ ಚಿನ್ನದ ಬೆಲೆ 35 ರೂ. ಕುಸಿತ ಕಂಡಿದ್ದು 32,946 ರೂ. ಆಗಿದೆ. ಅದೇ ರೀತಿ MCXನಲ್ಲಿ 1 ಕೆಜಿ ಬೆಳ್ಳಿ ಬೆಲೆ 29 ರೂ. ಕುಸಿತ ಕಂಡಿದ್ದು, 39,105 ರೂ. ಆಗಿದೆ. 

ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ದರ:

22 ಕ್ಯಾರೆಟ್-31,170 ರೂ.(10 ಗ್ರಾಂ) 
24 ಕ್ಯಾರೆಟ್‍-33,336 ರೂ.(10 ಗ್ರಾಂ) 

22 ಕ್ಯಾರೆಟ್‍-3,117 ರೂ.(1 ಗ್ರಾಂ)
ಬೆಳ್ಳಿ ಬೆಲೆ-43,300 ರೂ.(1 ಕೆಜಿ)

Follow Us:
Download App:
  • android
  • ios