Asianet Suvarna News Asianet Suvarna News

ದೀಪಾವಳಿ ಹಬ್ಬಕ್ಕೆ ಏರಿದ ಚಿನ್ನ: ಏನಿದು 2 ಸಾವಿರ ರೂ. ಆಟ?

ದೀಫಾವಳಿ ಹಬ್ಬದ ಸಂದರ್ಭದಲ್ಲೇ ಏರಿಕೆ ಕಂಡ ಚಿನ್ನದ ಬೆಲೆ| ದೀಪಾವಳಿ ಸಡಗರದಲ್ಲಿರುವ ಆಭರಣ ಪ್ರೀಯರಿಗೆ ಶಾಕ್| ಅಕ್ಟೋಬರ್‌ನಲ್ಲಿ ನಿರಂತರವಾಗಿ ಇಳಿಕೆಯತ್ತ ಸಾಗುತ್ತಿದ್ದ ಚಿನ್ನದ ಬೆಲೆ| ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ ಚಿನ್ನದ ದರ ಶೇ.0.13ರಷ್ಟು ಏರಿಕೆ| ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ ಬೆಳ್ಳಿ ದರ ಶೇ.0.36ರಷ್ಟು ಏರಿಕೆ| ಕಳೆದ ತಿಂಗಳಿಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಒಟ್ಟು 2 ಸಾವಿರ ರೂ. ಇಳಿಕೆ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸ್ಥಿತ್ಯಂತರ|

Gold and Silver Prices Rise In Market on Festival Season
Author
Bengaluru, First Published Oct 30, 2019, 7:05 PM IST

ಬೆಂಗಳೂರು(ಅ.30): ದೀಪಾವಳಿ ಸಡಗರದಲ್ಲಿರುವ ಆಭರಣ ಪ್ರೀಯರಿಗೆ ಚಿನ್ನದ ಬೆಲಕೆ ಏರಿಕೆಯ ಶಾಕ್ ಎದುರಾಗಿದೆ. ಅಕ್ಟೋಬರ್‌ನಲ್ಲಿ ನಿರಂತರವಾಗಿ ಇಳಿಕೆಯತ್ತ ಸಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಏಕಾಏಕಿ ಏರಿಕೆ ಕಂಡಿದೆ.

ಚಿನ್ನದ ದರದಲ್ಲಿ ಕುಸಿತ: ದೀಪಾವಳಿ ಖರೀದಿಗೆ ಇರಲಿ ಧಾವಂತ!

ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ ಚಿನ್ನದ ದರ ಶೇ.0.13ರಷ್ಟು ಏರಿಕೆ ಕಂಡಿದ್ದು, 10 ಗ್ರಾಂ ಚಿನ್ನದ ಬೆಲೆ 37,964 ರೂ. ಆಗಿದೆ. ಹಬ್ಬದ ವೇಳೆ ಖರೀದಿಯ ಭರಾಟೆ ಮಧ್ಯೆ ಬೆಲೆ ಏರಿಕೆಯಾಗಿರುವುದು ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

ನಿರಂತರವಾಗಿ ಇಳಿಯುತ್ತಲೇ ಇದೆ ಚಿನ್ನ: ಅಳೆದು ತೂಗಿ ಕೊಂಡರೆ ಚೆನ್ನ!

ಅದರಂತೆ ಬೆಳ್ಳಿ ಬೆಲೆಯಲ್ಲೂ ಶೇ.0.36ರಷ್ಟು ಏರಿಕೆ ಕಂಡು ಬಂದಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ಬರೋಬ್ಬರಿ 46,155 ರೂ. ಆಗಿದೆ. ಹಬ್ಬದ ವೇಳೆ ಖರೀದಿಯ ಭರಾಟೆ ಮಧ್ಯೆ ಬೆಲೆ ಏರಿಕೆಯಾಗಿರುವುದು ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

ಒಂದು ತಿಂಗಳಲ್ಲಿ ಒಟ್ಟು 1,800 ರೂ. ಇಳಿದ ಬಂಗಾರದ ಬೆಲೆ!

ಆದರೂ ಕಳೆದ ತಿಂಗಳಿಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಒಟ್ಟು 2 ಸಾವಿರ ರೂ. ಇಳಿಕೆಯಾಗಿದ್ದು, ನಿರೀಕ್ಷಿತ ಖರೀದಿ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

2 ಸಾವಿರ ರೂ. ಇಳಿದ ಬಂಗಾರ: 10 ಗ್ರಾಂ ಗೆ ಟೊಟಲ್ ಬೆಲೆ ಎಷ್ಟಂದ್ರ?

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸ್ಥಿತ್ಯಂತರ ಕಂಡು ಬಂದಿದ್ದು, ಚಿನ್ನದ ಬೆಲೆ ಪ್ರತಿ ಔನ್ಸ್'ಗೆ 1,488.23 ಡಾಲರ್ ಆಗಿದೆ.

Follow Us:
Download App:
  • android
  • ios