Asianet Suvarna News Asianet Suvarna News

ಮೋದಿಗೆ ಹೊಸ ಚಿಂತೆ: ದಿನವೂ ಪೆಟ್ರೋಲ್ ಬೆಲೆ ಇಳಿಸ್ಬಾರದಂತೆ!

ತೈಲದರ ಇಳಿಸುತ್ತಿದ್ದ ಪ್ರಧಾನಿ ಮೋದಿಗೆ ಎದುರಾಯ್ತು ಹೊಸ ಸಂಕಷ್ಟ| ನಿತ್ಯ ತೈಲದರ ಪರಿಷ್ಕರಣೆಗೆ ತೈಲ ಕಂಪನಿಗಳ ವಿರೋಧ| ಕಚ್ಚಾ ತೈಲ ಉತ್ಪನ್ನ ಕಡಿಮೆ ಮಾಡಲು ಒಪೆಕ್ ಸಭೆ ನಿರ್ಣಯ| ನಿತ್ಯ 1.2 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಉತ್ಪನ್ನಕ್ಕೆ ಬ್ರೇಕ್| ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗುವ ಆತಂಕ| ನಿತ್ಯ ಪರಿಷ್ಕರಣೆ ಬೇಡ ಎಂದು ಕೇಂದ್ರಕ್ಕೆ ಮನವಿ ಮಾಡಿದ ತೈಲ ಕಂಪನಿಗಳು

Fuel Industry Wants Centre To Scrap of Daily Revision
Author
Bengaluru, First Published Dec 10, 2018, 4:03 PM IST

ನವದೆಹಲಿ(ಡಿ.10): ಇಷ್ಟು ದಿನ ನಿತ್ಯವೂ ತೈಲದರ ಇಳಿದರೆ ಇಡೀ ದೇಶವೇ ಖುಷಿ ಪಡುತ್ತಿತ್ತು. ತೈಲದರ ಇಳಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೂ, ತೈಲ ಕಂಪನಿಗಳಿಗೂ ಜನ ಥ್ಯಾಂಕ್ಸ್ ಹೇಳುತ್ತಲೇ ಇದ್ದರು.

ಆದರೆ, ನಿತ್ಯ ತೈಲದರ ಪರಿಷ್ಕರಣೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಇದೀಗ ತೈಲ ಕಂಪನಿಗಳು ವಿರೋಧ ವ್ಯಕ್ತಪಡಿಸಿವೆ. ಕಾರಣ ತೈಲ ರಫ್ತು ದೇಶಗಳ ಸಂಘಟನೆಯಾದ 'ಒಪೆಕ್' ಕಚ್ಚಾ ತೈಲ ಉತ್ಪನ್ನವನ್ನು ಕಡಿಮೆ ಮಾಡಲು ನಿರ್ಧರಿಸಿದ್ದು, ನಿತ್ಯವೂ ತೈಲದರ ಬದಲಾವಣೆಯಿಂದ ಡೀಲರ್‌ಗಳಿಗೂ ತೊಂದರೆಯಾಗಲಿದೆ ಎಂದು ಹೇಳಿವೆ.

ದಿನ್ಕಕೆ ಸುಮಾರು 1.2 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಉತ್ಪನ್ನವನ್ನು ಕಡಿತಗೊಳಿಸಲು ಒಪೆಕ್ ಸಭೆ ಇತ್ತಿಚಿಗಷ್ಟೇ ನಿರ್ಧರಿಸಿದೆ. ಅದರಂತೆ ಇದರ ಪರಿಣಾಮ ಭಾರತದ ಮೇಲೂ ಆಗಲಿದ್ದು, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗುವ ಆತಂಕ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಮೊದಲಿನಂತೆ ನಿತ್ಯವೂ ತೈಲದರ ಪರಿಷ್ಕರಣೆ ಮಾಡುವುದರಿಂದ ತೊಂದರೆ ಜಾಸ್ತಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕೆ ತೈಲದರಗಳನ್ನು ನಿತ್ಯವೂ ಪರಿಷ್ಕರಣೆ ಮಾಡುವ ತನ್ನ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಪೆಟ್ರೋಲ್ ದರ ಮಾಡ್ಬೇಡಿ ಗೆಸ್: ಮಾಡಿ ಜಸ್ಟ್ ಒಂದು SMS!

ವರ್ಷಾಂತ್ಯಕ್ಕೆ ಸಿಹಿ ಸುದ್ದಿ: ಡಿಸೆಂಬರ್‌ನಲ್ಲಿ ಪೆಟ್ರೋಲ್ ದರ ಪಾತಾಳಕ್ಕೆ!

Follow Us:
Download App:
  • android
  • ios