Asianet Suvarna News Asianet Suvarna News

ಕತ್ತಿ, ಕುತ್ತಿಗೆ ಅಂತೆಲ್ಲಾ ಮಾತಾಡ್ತಿದೆ ಚೀನಾ: ಏನ್ ಕಾದಿದೆಯೋ ಏನೋ?

ಅಮೆರಿಕದ ಮೇಲೆ ಸಿಕ್ಕಾಪಟ್ಟೆ ಸಿಟ್ಟಾಗಿದೆ ಚೀನಾ! ತಾರಕಕ್ಕೇರಿದ ಅಮೆರಿಕ-ಚೀನಾ ವಾಣಿಜ್ಯ ಸಮರ! ಅಮೆರಿಕದೊಂದಿಗೆ ಮಾತುಕತೆ ಸಾಧ್ಯವಿಲ್ಲ ಎಂದ ಚೀನಾ! ಅಮೆರಿಕದ ಬೆದರಿಕೆ ತಂತ್ರಕ್ಕೆ ಮಣಿಯಲ್ಲ ಎಂದ ಚೀನಾ 
 

China says no talks with US amid war trade
Author
Bengaluru, First Published Sep 25, 2018, 3:07 PM IST

ಬಿಜಿಂಗ್(ಸೆ.25): ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಬಿಕ್ಕಟ್ಟು ತಾರಕಕ್ಕೇರಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಅಮೆರಿಕದೊಂದಿಗೆ ವಾಣಿಜ್ಯ ಸಂಬಂಧ ಸುಧಾರಣೆ ಚರ್ಚೆ ನಡೆಸಲು ಸಾಧ್ಯವಿಲ್ಲ ಎಂದು ಚೀನಾ ಸ್ಪಷ್ಟವಾಗಿ ಹೇಳಿದೆ.

ಚೀನಾ ಮತ್ತು ಅಮೆರಿಕ ವಾಣಿಜ್ಯ ಬಿಕ್ಕಟ್ಟು ತಾರಕಕ್ಕೇರಿದ್ದು, ಚೀನಾ ನಿರ್ಮಿತ ವಸ್ತುಗಳ ಮೇಲೆ ಅಮೆರಿಕ ಸರ್ಕಾರ ಸುಂಕ ಹೆಚ್ಚಿಸಿರುವಂತೆಯೇ ಚೀನಾ ಕೂಡ ಅಮೆರಿಕ ವಸ್ತುಗಳ ಮೇಲಿನ ತನ್ನ ಸುಂಕವನ್ನು ಹೆಚ್ಚಿಸಿತ್ತು. 

ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ವಿರುದ್ಧ ತೊಡೆ ತಟ್ಟಿನಿಂತಿರುವ ಚೀನಾ ಅಮೆರಿಕದೊಂದಿಗೆ ಬಾಂಧವ್ಯ ಸುಧಾರಣೆ ಸಂಬಂಧ ಚರ್ಚೆ ಸಾಧ್ಯವಿಲ್ಲ ಎಂದು ಹೇಳಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಚೀನಾ ವಿತ್ತ ಸಚಿವಾಲಯ ಸಹಾಯಕ ಸಚಿವ ವ್ಯಾಂಗ್ ಶೌವೆನ್ ಅವರು, ಬೆದರಿಕೆ ತಂತ್ರಗಾರಿಕೆ ಮೂಲಕ ಅಮೆರಿಕ ವ್ಯಾಪಾರ ಮಾಡಲು ನೋಡುತ್ತಿದೆ. ಆದರೆ ಅದು ಸಾಧ್ಯವಿಲ್ಲ. ಚೀನಾ ಮೇಲಿನ ನಿರ್ಬಂಧಗಳು ಅಮೆರಿಕಕ್ಕೇ ಮುಳುವಾಗುತ್ತವೆ. ಇಂತಹ ಬೆದರಿಕೆ ತಂತ್ರಗಾರಿಕೆಗೆ ನಾವು ಬಗ್ಗುವುದಿಲ್ಲ ಎಂದು ಚೀನಾ ಗುಡುಗಿದೆ.

ಒಪ್ಪಂದದ ಹೊರತಾಗಿಯೂ ಅಮೆರಿಕ ಏಕೆ ಇಂತಹ ನಿರ್ಧಾರ ಕೈಗೊಂಡಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದು ವ್ಯಾಂಗ್ ಶೌವೆನ್ ಹೇಳಿದ್ದಾರೆ.  ಅಮೆರಿಕ ನಿರ್ಧಾರದಿಂದಾಗಿ ಎಲ್ ಎನ್ ಜಿ ರಫ್ತುದಾರರಿಗೆ ಖಂಡಿತಾ ಭಾರಿ ಪೆಟ್ಟು ಬೀಳುತ್ತದೆ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios