Asianet Suvarna News Asianet Suvarna News

ಪೆಟ್ರೋಲ್ ರೇಟ್ ಏರಿಕೆ: ಎಲ್ಲಿ, ಎಷ್ಟು ದರ ತಿಳಿಯಬೇಕೆ?

ಮತ್ತೆ ಏರಿಕೆಯತ್ತ ಮುಖ ಮಾಡಿದ ಪೆಟ್ರೋಲ್, ಡೀಸೆಲ್ ದರ| ದೇಶದ ಮಹಾನಗರಗಳಲ್ಲಿ ಏರಿಕೆ ಕಂಡ ತೈಲದರ| ಪೆಟ್ರೋಲ್ ದರದಲ್ಲಿ10, ಡೀಸೆಲ್ ದರದಲ್ಲಿ 8 ಪೈಸೆ ಹೆಚ್ಚಳ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಇಳಿಕೆ

Both Petrol and Diesel Price Hiked for Second Day
Author
Bengaluru, First Published Dec 18, 2018, 5:50 PM IST

ನವದೆಹಲಿ(ಡಿ.18): ತೈಲ ಬೆಲೆಗಳ ಹಾವು ಏಣಿ ಆಟ ಮುಂದುವರೆದಿದ್ದು, ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತುಸು ಹೆಚ್ಚಳ ಕಂಡು ಬಂದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳ ಏರಿಕೆಯಿಂದ ಗೊಂದಲ ಉಂಟಾಗಿದೆ.

ಇಂದು ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 9-10 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ 7-8 ಪೈಸೆಯಷ್ಟು ಏರಿಕೆ ಕಂಡು ಬಂದಿದೆ.

ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ತೈಲದರ ಗಮನಸಿವುದಾದರೆ...

ರಾಷ್ಟ್ರ ರಾಜಧಾನಿ ನವದೆಹಲಿ-

ಪೆಟ್ರೋಲ್- 70.63 ರೂ.
ಡೀಸೆಲ್- 64.54 ರೂ.

ವಾಣಿಜ್ಯ ರಾಜಧಾನಿ ಮುಂಬೈ-

ಪೆಟ್ರೋಲ್- 76.25  ರೂ.

ಡೀಸೆಲ್- 67.55  ರೂ.

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-

ಪೆಟ್ರೋಲ್- 72.43 ರೂ.

ಡೀಸೆಲ್- 66.30 ರೂ.

ತಮಿಳುನಾಡು ರಾಜಧಾನಿ ಚೆನ್ನೈ-

ಪೆಟ್ರೋಲ್- 73.29 ರೂ.

ಡೀಸೆಲ್- 68.14  ರೂ.

ರಾಜ್ಯ ರಾಜಧಾನಿ ಬೆಂಗಳೂರು-

ಪೆಟ್ರೋಲ್- 71.20 ರೂ.

ಡೀಸೆಲ್- 64.90 ರೂ.

ಇದು ಎಲೆಕ್ಷನ್ ಎಫೆಕ್ಟಾ?: ಪೆಟ್ರೋಲ್ ದರ ಏರಿಕೆ!

ಅಯ್ಯೋ ರಾಮ: ಪೆಟ್ರೋಲ್ ದರ ಏರಿಕೆಗೆ ಮರುಜನ್ಮ!

ತುಂಬಾ ಸಿಂಪಲ್: ಇಳಿದ ಡೀಸೆಲ್, ಏರದ ಪೆಟ್ರೋಲ್!

Follow Us:
Download App:
  • android
  • ios