Asianet Suvarna News Asianet Suvarna News

ಇವತ್ತೇ ದುಡ್ಡು ವಿತ್ ಡ್ರಾ ಮಾಡಿ : ಮಂಗಳವಾರ ಎಟಿಎಂ ಇರೋದು ಡೌಟ್ ನೋಡಿ!

ಅ.22(ಮಂಗಳವಾರ) ಬ್ಯಾಂಕ್ ನೌಕರರ ಮುಷ್ಕರ|  ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹ| KPBEF ಹಾಗೂ BEFI ಸಂಘಟನೆಗಳಿಂದ ಮುಷ್ಕರಕ್ಕೆ ಕರೆ| ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲು ನಿರ್ಧಾರ| ಎಟಿಎಂ ಸೇರಿದಂತೆ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ| 

Bank Strike On October 22 May Impact ATM Operations
Author
Bengaluru, First Published Oct 20, 2019, 7:44 PM IST

ಬೆಂಗಳೂರು(ಅ.20): ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬ್ಯಾಂಕ್ ನೌಕರರು,  ಇದೇ  ಅ.22(ಮಂಗಳವಾರ)ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ಬ್ಯಾಂಕ್ ವಿಲೀನ ನಿರ್ಧಾರ ಖಂಡಿಸಿರುವ KPBEF ಹಾಗೂ BEFI ಸಂಘಟನೆಗಳು, ಒಂದು ದಿನದ ಮುಷ್ಕರಕ್ಕೆ ಕರೆ ನೀಡಿವೆ. ಈ  ಮುಷ್ಕರಕ್ಕೆ 

ಎಸ್‌ಬಿಐ, ಕೆನರಾ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ಹಾಗೂ ಯುಕೋ ಸೇರಿದಂತೆ ಹಲವು ಬ್ಯಾಂಕ್‌ಗಳ ನೌಕರರು ಬೆಂಬಲ ವ್ಯಕ್ತಪಡಿಸಿದ್ದಾರೆ. 

ಸೆ.26, 27 ಕ್ಕೆ ಬ್ಯಾಂಕ್ ನೌಕರರ ಮುಷ್ಕರವಿಲ್ಲ

ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲು ಉದ್ದೇಶಿಸಲಾಗಿದ್ದು, ಮಂಗಳವಾರ ಬ್ಯಾಂಕ್‌ಗಳು ಬಂದ್ ಆಗಿರಲಿವೆ.

ಮುಷ್ಕರದ ಹಿನ್ನೆಲೆಯಲ್ಲಿ ಮೇಲ್ಕಂಡ ಬ್ಯಾಂಕ್‌ಗಳು ಬಂದ್ ಆಗಿರುವುದರಿಂದ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ಅಲಭ್ಯವಾಗಲಿದೆ. ಅಲ್ಲದೇ ಎಟಿಎಂ ಸೇವೆ ಕುಡ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ಈಗಲೇ ಹಣ ವಿತ್ ಡ್ರಾ ಮಾಡುವುದು ಒಳ್ಳೆಯದು.

Follow Us:
Download App:
  • android
  • ios