Asianet Suvarna News Asianet Suvarna News

‘ಮೀಸಲು ಹಣದ ಮೇಲೆ ಕಣ್ಣು: ಆರ್ಥಿಕತೆಗೆ ಮಾಡಲಿದೆ ಹುಣ್ಣು’!

ಮತ್ತೆ ಕೇಂದ್ರ ಸರ್ಕಾರದ ನೀತಿ ಖಂಡಿಸಿದ ರವಿಂದ್ ಸುಬ್ರಮಣಿಯನ್| ಅರವಿಂದ್ ಸುಬ್ರಮಣಿಯನ್ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ| ಆರ್‌ಬಿಐ ಮೀಸಲು ಹಣ ಇರುವುದು ಅರ್ಥ ವ್ಯವಸ್ಥೆ ಸರಿಪಡಿಸಲು| ಸರ್ಕಾರಿ ವೆಚ್ಚಕ್ಕಾಗಿ ಆರ್‌ಬಿಐ ಮೀಸಲು ಹಣ ಸಲ್ಲ ಎಂದ ಅರವಿಂದ್| ‘ಸರ್ಕಾರ-ಆರ್‌ಬಿಐ ನಡುವಿನ ಭಿನ್ನಾಭಿಪ್ರಾಯಕ್ಕೆ ಸಮಿತಿ ರಚನೆ ಮಾಡಬೇಕು’

Arvind Subramanian Says RBI Reserve Should be Used to Fix Financial System
Author
Bengaluru, First Published Dec 14, 2018, 5:07 PM IST

ನವದೆಹಲಿ(ಡಿ.14): ಕೇಂದ್ರ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಇತ್ತೀಚಿಗೆ ಕೇಂದ್ರ ಸರ್ಕಾರದ ನೀತಿಗಳನ್ನು ಟೀಕೆ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. 

ಆರ್‌ಬಿಐ ಮೀಸಲು ಹಣ ಇರುವುದು ಅರ್ಥ ವ್ಯವಸ್ಥೆ ಸರಿಪಡಿಸುವ ಬಳಕೆಗಾಗಿಯೇ ಹೊರತು ಆರ್ಥಿಕ ಕೊರತೆ ನೀಗಿಸಲು ಅಥವಾ ಸರ್ಕಾರಿ ವೆಚ್ಚಕ್ಕಾಗಿ ಅಲ್ಲ ಎಂದು ಅರವಿಂದ್ ಸುಬ್ರಹ್ಮಣಿಯನ್ ಅಭಿಪ್ರಾಯಪಟ್ಟಿದ್ದಾರೆ. 


ಮೀಸಲು ಹಣವನ್ನು ದೀರ್ಘಾವಧಿಯ ಹೂಡಿಕೆಗಾಗಿ ಬಳಕೆ ಮಾಡಬೇಕೆ ಹೊರತು ಈಗಿನ ಅಗತ್ಯತೆಗಳಿಗೆ ಬಳಕೆ ಮಾಡಬಾರದು. ಒಂದು ವೇಳೆ ಮೀಸಲು ಹಣವನ್ನು ಆರ್ಥಿಕ ಕೊರತೆಗಾಗಿ ಬಳಕೆ ಮಾಡಿದರೆ ಅದು ಆರ್‌ಬಿಐ ಮೇಲೆ ಪ್ರಹಾರ ಮಾಡಿದಂತಾಗುತ್ತದೆ ಎಂದು ಅರವಿಂದ್ ಹೇಳಿದ್ದಾರೆರ್

ಆರ್‌ಬಿಐ ಬಳಿ ಬೃಹತ್ ಪ್ರಮಾಣದಲ್ಲಿ ಬಂಡವಾಳವಿದ್ದರೆ ಅದನ್ನು ಅರ್ಥ ವ್ಯವಸ್ಥೆ ಸರಿಪಡಿಸುವ ಬಳಕೆಗಾಗಿ ಮೀಸಲಿಡಬೇಕು. ಸರ್ಕಾರ-ಆರ್‌ಬಿಐ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವುದಕ್ಕೆ ಸರ್ಕಾರ ಸಮಿತಿ ರಚನೆ ಮಾಡಬೇಕಿತ್ತು ಎಂದೂ ಅರವಿಂದ್ ಸುಬ್ರಹ್ಮಣಿಯನ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಆರ್ ಬಿಐ ಗವರ್ನರ್ ವಿದ್ಯಾರ್ಹತೆ ಇತಿಹಾಸದಲ್ಲಿ MA..?

ಮೋದಿಗೆ ಮತ್ತೆ ಬೈದ ಸ್ವಾಮಿ: ಇವರಾ ನಿಮ್ಮ ಆರ್‌ಬಿಐ ಗರ್ವನರ್?

ಆರ್‌ಬಿಐ: ನೆಹರು ಮಾಡಿದ್ದನ್ನೇ ಮಾಡಿದ ಮೋದಿ ಮೇಲೇಕೆ ಕಣ್ಣು?

Follow Us:
Download App:
  • android
  • ios